ನವೆಂಬರ್ 19, 2026 ರ ಗುರುವಾರದ ಇಂದಿನ ರಾಶಿ ಭವಿಷ್ಯದ ಪ್ರಕಾರ, ಕೆಲವು ರಾಶಿಯವರಿಗೆ ತಮ್ಮ ಸಂಗಾತಿಯಿಂದ ಅತಿಯಾದ ನೋವು ಅಥವಾ ಬೇಸರ ಉಂಟಾಗುವ ಸಾಧ್ಯತೆಯಿದೆ. ಇಂದಿನ ದಿನದಲ್ಲಿ ಪ್ರತಿಯೊಂದು ಆರ್ಥಿಕ ಮತ್ತು ಕೌಟುಂಬಿಕ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಶರತ್ ಋತು, ಕಾರ್ತಿಕ ಮಾಸದ ಶುಕ್ಲ ಪಕ್ಷದ ದಶಮೀ ತಿಥಿಯ ದಿನ ಇದಾಗಿದೆ. ಇಂದು ದ್ವೇಷಭಾವ, ಕುಟುಂಬದ ಪ್ರೀತಿ ಹಾಗೂ ಸ್ಥಾನಕ್ಕಾಗಿ ಕಿತ್ತಾಟದ ವಿಶೇಷತೆ ಇರಲಿದೆ.
ಇಂದಿನ ದ್ವಾದಶ ರಾಶಿಗಳ ಸಂಪೂರ್ಣ ಜ್ಯೋತಿಷ್ಯ ಫಲಗಳು ಮತ್ತು ದೈನಂದಿನ ಭವಿಷ್ಯವು ಹೇಗಿರಲಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದು ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯವಾಗಿದೆ.
ಮೇಷ ರಾಶಿ
ನಿಮ್ಮ ಆರ್ಥಿಕ ಸಂಕಟವನ್ನು ಸ್ನೇಹಿತರ ಸಹಾಯ ಪಡೆದು ಸುಲಭವಾಗಿ ಸರಿಪಡಿಸಿಕೊಳ್ಳುವಿರಿ. ನಿಮ್ಮ ಮಾತಿನ ಮೇಲೆ ನಿಮಗೆ ಸಂಪೂರ್ಣ ನಿಯಂತ್ರಣವಿರಲಿ. ನಿಮ್ಮ ಕುಟುಂಬದಲ್ಲಿ ಪ್ರೀತಿ ಮತ್ತು ಮಮತೆ ದಿನದಿಂದ ದಿನಕ್ಕೆ ಹೆಚ್ಚಾಗಲಿದೆ.
ವೃಷಭ ರಾಶಿ
ನಿಮ್ಮ ಹಣದ ವ್ಯವಹಾರವನ್ನು ನೀವು ಬಹಳ ಸರಿಯಾಗಿ ನಿರ್ವಹಿಸುವುದು ಒಳ್ಳೆಯದು. ಮನೆಯಲ್ಲಿ ಸಣ್ಣಪುಟ್ಟ ವಿಚಾರಕ್ಕೆ ನೀವು ವಾದ ಅಥವಾ ವಿವಾದ ಮಾಡಿಕೊಳ್ಳಬೇಡಿ. ನಿಮ್ಮ ನೆಮ್ಮದಿಯನ್ನು ನಿಮ್ಮ ಸಂಗಾತಿಯಿಂದಲೇ ಭಂಗವಾಗಬಹುದು.
ಮಿಥುನ ರಾಶಿ
ಅನಿರೀಕ್ಷಿತವಾಗಿ ಧನವ್ಯಯವಾಗುವುದರಿಂದ ನಿಮ್ಮಲ್ಲಿ ಸ್ವಲ್ಪ ಆತಂಕ ಉಂಟಾಗಲಿದೆ. ಹಳೆಯ ವಾಹನವನ್ನು ಖರೀದಿಸುವ ಯೋಚನೆ ಮಾಡುವಿರಿ. ಪ್ರಭಾವಿ ಜನರ ಭೇಟಿಯಿಂದ ನಿಮ್ಮ ಜೀವನದಲ್ಲಿ ಅನೇಕ ಲಾಭಗಳನ್ನು ಮಾಡಿಕೊಳ್ಳುವಿರಿ.
ಕರ್ಕಾಟಕ ರಾಶಿ
ನಿಮಗೆ ಯೋಗ್ಯವೆನಿಸಿದವರ ಜೊತೆ ಮಾತ್ರ ನೀವು ಬಿಚ್ಚುಮನಸ್ಸಿನಿಂದ ಮಾತನಾಡಿ. ವ್ಯಾಪಾರದಲ್ಲಿ ಲಾಭವನ್ನು ಕಂಡು ಹೊಸ ಯೋಜನೆ ಮಾಡಿ ಸಿಲುಕಿಕೊಳ್ಳಬೇಡಿ. ನಿಮ್ಮ ಕುಟುಂಬದಲ್ಲಿ ಸಂತೋಷದ ಮಾತುಕತೆಗಳು ನಡೆಯಲಿವೆ.
ಸಿಂಹ ರಾಶಿ
ನಿಮ್ಮ ಮನಸ್ಸಿಗೆ ಹಿಡಿಸದ ಸಂಗತಿಗಳ ವಿರುದ್ಧ ನೀವು ಧೈರ್ಯವಾಗಿ ಧ್ವನಿ ಎತ್ತುವಿರಿ. ಇಷ್ಟವಿಲ್ಲದಿದ್ದರೂ ಇಂದು ನೀವು ಕಚೇರಿ ಕೆಲಸಕ್ಕೆ ತೆರಳಬೇಕಾದೀತು. ಪ್ರೀತಿಯನ್ನು ಲಘುವಾಗಿ ಪರಿಗಣಿಸುವುದು ಬೇಡ.
ಕನ್ಯಾ ರಾಶಿ
ಕೆಲಸದಲ್ಲಿ ಎರಡು ಮೂರು ಕಾರ್ಯಗಳು ಒಂದೇ ಸಮಯದಲ್ಲಿ ಬಂದರೂ ಸಮರ್ಥವಾಗಿ ನಿಭಾಯಿಸುವಿರಿ. ದೇವರ ಮೇಲೆ ಅಚಲ ನಂಬಿಕೆ ಇಟ್ಟ ಕಾರಣ ನಿಮ್ಮ ಮನೋರಥ ಪೂರ್ತಿಯಾಗಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.
ತುಲಾ ರಾಶಿ
ಪಡೆದ ಸಾಲವನ್ನು ಬೇರೆ ರೀತಿಯಲ್ಲಿ ಹೊಂದಿಸಿ ತೀರಿಸುವಿರಿ. ನಿಮ್ಮ ಸಹೋದ್ಯೋಗಿಗಳು ನಿಮ್ಮೊಂದಿಗೆ ಸುಮ್ಮನೇ ಕಿರಿಕಿರಿ ಮಾಡುವರು. ನಿಮ್ಮ ಸಂಬಂಧಗಳಲ್ಲಿ ಅತಿಯಾದ ವಿಶ್ಲೇಷಣೆ ಮಾಡುವುದು ಒಳ್ಳೆಯದಲ್ಲ.
ವೃಶ್ಚಿಕ ರಾಶಿ
ನಿಮ್ಮನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಇತರೆ ವ್ಯಕ್ತಿಗಳು ಕಾರ್ಯ ಸಾಧಿಸಿಕೊಳ್ಳುವರು. ನಿಮ್ಮ ಮನೆಯ ಯಾವುದೇ ಗುಟ್ಟನ್ನು ಹೊರಗಿನವರ ಬಳಿ ಬಿಟ್ಟುಕೊಡಬೇಡಿ. ದಾಂಪತ್ಯದಲ್ಲಿ ಹೊಂದಾಣಿಕೆ ಇರಲಿ.
ಧನು ರಾಶಿ
ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಗೌಪ್ಯವಾಗಿ ಅಧಿಕಾರಿಗಳನ್ನು ಭೇಟಿ ಮಾಡುವಿರಿ. ಬೇರೆಯವರ ವಿಚಾರದಲ್ಲಿ ವಿನಾಕಾರಣ ಮೂಗು ತೂರಿಸುವುದು ಒಳ್ಳೆಯದಲ್ಲ. ಮೇಲಧಿಕಾರಿಗಳಿಂದ ನಿಮ್ಮ ಬೇಡಿಕೆ ತಿರಸ್ಕೃತವಾಗಬಹುದು.
ಮಕರ ರಾಶಿ
ಇಂದಿನ ನಿಮ್ಮ ಪ್ರಯಾಣವು ಸ್ವಲ್ಪ ಅಹಿತವೆನಿಸಬಹುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ಉತ್ತಮ ಕೆಲಸವನ್ನು ಎಲ್ಲರೂ ಗುರುತಿಸುವರು. ಯಾವುದೇ ಹೆಚ್ಚಿನ ಒತ್ತಡವಿಲ್ಲದೆ ನಿಮ್ಮ ಇಂದಿನ ಕಾರ್ಯಗಳನ್ನು ಮುಗಿಸುವಿರಿ.
ಕುಂಭ ರಾಶಿ
ನೀವು ತೀವ್ರವಾದ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾದ ಪರಿಸ್ಥಿತಿ ಬರಬಹುದು. ನಿಮ್ಮ ಜೊತೆಗಿರುವವರೇ ನಿಮ್ಮ ಪ್ರಮುಖ ವಸ್ತುಗಳನ್ನು ಅಪಹರಿಸಬಹುದು. ವಿನಾಕಾರಣ ಎಲ್ಲರ ಮೇಲೂ ಕೋಪ ಮಾಡಿಕೊಳ್ಳಬೇಡಿ.
ಮೀನ ರಾಶಿ-ದಿನ ಭವಿಷ್ಯ
ನಿಮ್ಮ ಆಶಾವಾದಕ್ಕೆ ತಕ್ಕಂತೆ ಸರಿಯಾದ ಉತ್ತರ ಮತ್ತು ಫಲ ಸಿಗಲಿದೆ. ನಿಮ್ಮ ಬಂಧುಗಳ ಆರೋಗ್ಯದ ಆರೈಕೆಯಲ್ಲಿ ಇಂದು ನೀವು ಹೆಚ್ಚು ತೊಡಗಿಕೊಳ್ಳುವಿರಿ. ಹೊಸ ವಿಷಯಗಳನ್ನು ಕಲಿಯಲು ಹಿಂದೆಟು ಹಾಕಬೇಡಿ.




