ದಿನ ಭವಿಷ್ಯ: ನವೆಂಬರ್ 18, 2026 ರ ಬುಧವಾರದ ಇಂದಿನ ರಾಶಿ ಭವಿಷ್ಯದ ಪ್ರಕಾರ, ಕೆಲವು ರಾಶಿಗಳ ವ್ಯಕ್ತಿಗಳಿಗೆ ಕಾನೂನಾತ್ಮಕ ಹೋರಾಟದಲ್ಲಿ ವಿಜಯ ಸಿಗಲಿದೆ. ಅದೇ ಸಮಯದಲ್ಲಿ ಕೆಲವರಿಗೆ ಶತ್ರುಗಳ ಕಾಟ ಹೆಚ್ಚಾಗುವ ಸಾಧ್ಯತೆಯಿದೆ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಶರತ್ ಋತು, ಕಾರ್ತಿಕ ಮಾಸದ ಶುಕ್ಲ ಪಕ್ಷದ ನವಮೀ ತಿಥಿಯ ದಿನ ಇದಾಗಿದೆ. ಇಂದು ಅಮೂಲ್ಯ ವಸ್ತು ಖರೀದಿ, ವಿದೇಶ ಪ್ರಯಾಣ ಹಾಗೂ ಹೊಂದಾಣಿಕೆಯ ವಿಶೇಷತೆ ಇರಲಿದೆ.
ಇಂದಿನ ದ್ವಾದಶ ರಾಶಿಗಳ ಸಂಪೂರ್ಣ ಜ್ಯೋತಿಷ್ಯ ಫಲಗಳು ಮತ್ತು ದೈನಂದಿನ ಭವಿಷ್ಯವು ಹೇಗಿರಲಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದು ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯವಾಗಿದೆ.
ಮೇಷ ರಾಶಿ
ಸ್ಥಿರಾಸ್ತಿಯನ್ನು ಖರೀದಿಸುವ ಸಂದರ್ಭದಲ್ಲಿ ನಿಮಗೆ ಕೆಲವು ತೊಂದರೆಗಳು ಎದುರಾಗಬಹುದು. ನಿಮ್ಮ ಮನೆಯಲ್ಲಿ ಮಕ್ಕಳ ಆಗಮನದಿಂದ ಸಂತೋಷ ಹಾಗೂ ನೆಮ್ಮದಿ ನೆಲೆಸುವುದು. ಉದ್ಯೋಗದಲ್ಲಿ ಆಲಸ್ಯ ತೋರಿದರೆ ಮೇಲಧಿಕಾರಿಗಳಿಂದ ಎಚ್ಚರಿಕೆ ಬರಲಿದೆ.
ವೃಷಭ ರಾಶಿ
ನೀವು ನಿಮ್ಮ ಸಂಗಾತಿಯ ಮಾತಿನಂತೆ ನಡೆದುಕೊಳ್ಳುವುದು ಬಹಳ ಒಳ್ಳೆಯದು. ಮನೆಯಲ್ಲಿ ಹಿಂದಿನ ಸಣ್ಣಪುಟ್ಟ ಘಟನೆಗಳೇ ಮರುಕಳಿಸಿ ವಾಗ್ವಾದ ನಡೆಯಬಹುದು. ಯಾರೋ ಮೂರನೇ ವ್ಯಕ್ತಿಗಳ ಮಾತು ಕೇಳಿ ನಿಮ್ಮವರನ್ನು ತಪ್ಪಾಗಿ ತಿಳಿಯಬೇಡಿ.
ಮಿಥುನ ರಾಶಿ
ಕಾರ್ಯಸ್ಥಳದಲ್ಲಿ ಇಂದು ನಿಮಗೆ ಕೆಲವು ಕಹಿಯಾದ ಅನುಭವಗಳಾಗಬಹುದು. ಹಿತಶತ್ರುಗಳು ಸರಿಯಾದ ಸಮಯಕ್ಕೆ ನಿಮ್ಮ ಕೆಲಸದಲ್ಲಿ ತೊಂದರೆ ಕೊಡುವರು. ಅನಿರೀಕ್ಷಿತ ರಾಜಕಾರಣಿಗಳ ಭೇಟಿಯಿಂದ ನಿಮ್ಮ ಜೀವನದಲ್ಲಿ ಬದಲಾವಣೆ ಕಾಣಬಹುದು.
ಕರ್ಕಾಟಕ ರಾಶಿ
ಪರಾಧೀನ ಸ್ಥಿತಿಯಿಂದ ನಿಮಗೆ ಸ್ವಲ್ಪ ಮಟ್ಟಿನ ಮಾನಸಿಕ ಹಿಂಸೆಯಾಗಬಹುದು. ನಿಮ್ಮ ಇಂದಿನ ಎಲ್ಲಾ ಕಾರ್ಯಗಳು ಯಾವುದೇ ದೊಡ್ಡ ತೊಂದರೆಗಳಿಲ್ಲದೆ ಮುಗಿಯುವುದು. ನಿಮ್ಮ ಪ್ರೀತಿಪಾತ್ರರಿಂದ ಸುಂದರವಾದ ಉಡುಗೊರೆಗಳು ಸಿಗಲಿವೆ.
ಸಿಂಹ ರಾಶಿ
ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ಸೋಲಾಗುವ ಸಂಭವವಿದೆ. ನಿಮ್ಮವರ ಕೆಲವು ಮಾತುಗಳಿಂದ ನಿಮ್ಮ ಮನಸ್ಸಿಗೆ ತೀವ್ರ ಬೇಸರವಾಗಬಹುದು. ಸಾಲಗಾರರಿಂದ ನಿಮಗೆ ಮೇಲಿಂದ ಮೇಲೆ ಅತಿಯಾದ ಕಿರಿಕಿರಿ ಉಂಟಾಗಲಿದೆ.
ಕನ್ಯಾ ರಾಶಿ
ಯಾವ ವ್ಯಕ್ತಿ ಬಳಿಯೂ ಹೋಗಿ ಸಹಾಯವನ್ನು ಕೇಳುವ ಮನಸ್ಸು ಇರದು. ಆಸ್ತಿಯ ವಿಚಾರವಾಗಿ ಕಾನೂನಾತ್ಮಕ ಹೋರಾಟಕ್ಕೆ ನೀವು ಸಿದ್ಧರಾಗಬೇಕಾಗಬಹುದು. ನಿಮ್ಮ ಅಸಾಮಾನ್ಯ ಚಿಂತನೆಗಳು ನಿಮ್ಮನ್ನು ಸಮಾಜದಲ್ಲಿ ದೊಡ್ಡವರನ್ನಾಗಿ ಮಾಡುತ್ತದೆ.
ತುಲಾ ರಾಶಿ
ಸಹೋದರರ ಮಾತನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗಿ ನಿಮಗೆ ಸಿಟ್ಟು ಬರುವುದು. ಹಳೆಯ ಅನುಭವಗಳ ಆಧಾರದ ಮೇಲೆ ನಿಮ್ಮ ಇಂದಿನ ಕೆಲಸಗಳನ್ನು ಮಾಡುವಿರಿ. ಉದ್ಯೋಗದಲ್ಲಿ ಅತ್ಯಂತ ಗಾಂಭೀರ್ಯದ ವಾತಾವರಣವಿರಲಿದೆ.
ವೃಶ್ಚಿಕ ರಾಶಿ
ಉದ್ಯೋಗ ಹುಡುಕುತ್ತಿರುವವರಿಗೆ ಅನೇಕ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಮೇಲಧಿಕಾರಿಗಳ ವರ್ತನೆಯಿಂದ ನಿಮ್ಮ ಗೌರವಕ್ಕೆ ಸ್ವಲ್ಪ ಧಕ್ಕೆಯಾಗಬಹುದು. ನಿಮ್ಮ ಮೇಲಿನ ಅಪವಾದವನ್ನು ಬೇರೆಯವರ ಮೇಲೆ ಹಾಕದೆ ನೀವೇ ಸತ್ಯ ಸಾಬೀತುಪಡಿಸಿ.
ಧನು ರಾಶಿ
ತಂದೆಯವರ ಧಾರ್ಮಿಕ ಕಾರ್ಯಗಳಿಗೆ ನಿಮ್ಮ ಕಡೆಯಿಂದ ಸಂಪೂರ್ಣ ಸಹಕಾರವಿರಲಿದೆ. ನಿಮ್ಮವರ ಪ್ರೀತಿಯನ್ನು ಕಳೆದುಕೊಳ್ಳುವ ಭೀತಿ ಸದಾ ನಿಮ್ಮಲ್ಲಿ ಕಾಡಬಹುದು. ನಿಮ್ಮ ಆರೋಗ್ಯದ ಕಡೆಗೆ ಸ್ವಲ್ಪ ಹೆಚ್ಚು ಜಾಗರೂಕತೆ ವಹಿಸುವುದು ಅವಶ್ಯಕ.
ಮಕರ ರಾಶಿ
ಹಿರಿಯರ ಜೊತೆ ಮಾತನಾಡುವಾಗ ಅತಿಯಾದ ಎಚ್ಚರಿಕೆ ವಹಿಸುವುದು ಒಳ್ಳೆಯದು. ನಿಮ್ಮ ಮನೆಯ ವೈಯಕ್ತಿಕ ಸಮಸ್ಯೆಯನ್ನು ಇತರೆ ವ್ಯಕ್ತಿಗಳ ಬಳಿ ಹೇಳಿಕೊಳ್ಳಬೇಡಿ. ಸಣ್ಣ ಪುಟ್ಟ ಪ್ರಯಾಣಗಳಿಂದ ನಿಮಗೆ ಉತ್ತಮ ಅನುಭವ ಸಿಗಲಿದೆ.
ಕುಂಭ ರಾಶಿ
ಎಲ್ಲಾ ವಿಚಾರಗಳನ್ನೂ ನೀವು ನಿರಾಧಾರವಾಗಿ ತಳ್ಳಿಹಾಕುವುದು ಸರಿಯಲ್ಲ. ಮನೆಯಲ್ಲಿ ಆಸ್ತಿಯ ವಿಚಾರವಾಗಿ ಸಣ್ಣಪುಟ್ಟ ವಾಗ್ವಾದಗಳು ನಡೆಯಬಹುದು. ನಿಮ್ಮ ವ್ಯಾಪಾರ ಹಾಗೂ ವ್ಯವಹಾರಗಳು ಎಂದಿನಂತೆ ಸಾಧಾರಣವಾಗಿ ಇರಲಿವೆ.
ಮೀನ ರಾಶಿ (ದಿನ ಭವಿಷ್ಯ)
ನಿಮ್ಮ ದೀರ್ಘಕಾಲದ ಕನಸುಗಳು ನನಸಾಗುವ ಸಮಯ ಶೀಘ್ರದಲ್ಲೇ ಬರಲಿದೆ. ಯಾವ ಫಲಾಪೇಕ್ಷೆಯನ್ನೂ ಇಟ್ಟುಕೊಳ್ಳದೆ ನಿಮ್ಮ ಕರ್ತವ್ಯ ಮಾಡುವಿರಿ. ನಿಮ್ಮ ಮಾತಿನಿಂದ ನಿಮ್ಮ ತಾಯಿಗೆ ನೋವಾಗದಂತೆ ಎಚ್ಚರವಹಿಸಿ.




