☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 27°C | AQI 180
Bengaluru: ☀️ 24°C | AQI 112
☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 27°C | AQI 180
Bengaluru: ☀️ 24°C | AQI 112

Daily Horoscope: ಇಂದು ಯಾವ ರಾಶಿಯವರು ಆಪ್ತರ ಅಗಲಿಕೆಯ ನೋವು ಅನುಭವಿಸುವರು?

Daily Horoscope: November 10 Zodiac Predictions And Astrological Updates
ನವೆಂಬರ್ 10ರ ಇಂದಿನ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ. ಯಾವ ರಾಶಿಯವರಿಗೆ ಇಂದು ಎಚ್ಚರಿಕೆ ಅಗತ್ಯ ಹಾಗೂ ಯಾವ ರಾಶಿಗೆ ಶುಭಫಲವಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ನವೆಂಬರ್ 10, ಮಂಗಳವಾರದ ಇಂದಿನ ರಾಶಿ ಭವಿಷ್ಯದ (Daily Horoscope) ಪ್ರಕಾರ, ಕೆಲ ನಿರ್ದಿಷ್ಟ ರಾಶಿಯವರು ತಮ್ಮ ಅತ್ಯಂತ ಆಪ್ತರ ಅಗಲಿಕೆಯ ನೋವನ್ನು ಸಹಿಸಿಕೊಳ್ಳಲು ಕಷ್ಟಪಡಬೇಕಾದ ಪರಿಸ್ಥಿತಿ ಎದುರಾಗಬಹುದು. ಇಂದಿನ ದಿನದಲ್ಲಿ ಪ್ರತಿಯೊಂದು ಪ್ರಮುಖ ನಿರ್ಧಾರಗಳಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಶರತ್ ಋತು, ಕಾರ್ತಿಕ ಮಾಸದ ಶುಕ್ಲ ಪಕ್ಷದ ಪ್ರತಿಪತ್ ತಿಥಿಯ ದಿನ ಇದಾಗಿದೆ. ಇಂದು ವಿದ್ಯಾವಂತಿಕೆ, ಕಲಾವಂತಿಕೆ ಹಾಗೂ ಸ್ವಂತ ವಾಹನ ಖರೀದಿಯ ವಿಶೇಷತೆ ಇರಲಿದೆ.

ಇಂದಿನ ದ್ವಾದಶ ರಾಶಿಗಳ ಸಂಪೂರ್ಣ ಜ್ಯೋತಿಷ್ಯ ಫಲಗಳು ಮತ್ತು ದೈನಂದಿನ ಭವಿಷ್ಯವು ಹೇಗಿರಲಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದು ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯವಾಗಿದೆ.

ಮೇಷ ರಾಶಿ

ನಿಮ್ಮ ಪ್ರಮುಖ ಕಾರ್ಯಸಾಧನೆಗಾಗಿ ಇಂದು ಹೆಚ್ಚಿನ ತಿರುಗಾಟ ನಡೆಸಬೇಕಾಗುತ್ತದೆ. ಧಾರ್ಮಿಕ ಆಚರಣೆಗಳಲ್ಲಿ ತೊಡಗಿಕೊಳ್ಳುವುದರಿಂದ ನಿಮ್ಮ ಸಂಕಷ್ಟಗಳು ದೂರಾಗಲಿವೆ. ಸರ್ಕಾರದ ಕೆಲಸ ಕಾರ್ಯಗಳನ್ನು ಪ್ರಭಾವಿ ವ್ಯಕ್ತಿಗಳ ಮೂಲಕ ಮುನ್ನಡೆಸಿ.

ವೃಷಭ ರಾಶಿ

ಅಧಿಕಾರಕ್ಕೆ ಸಂಬಂಧಿಸಿದಂತೆ ನಿಮ್ಮ ಸ್ನೇಹಿತರಿಂದಲೇ ನಿಮಗೆ ವಂಚನೆಯಾಗಬಹುದು. ಕಳೆದು ಹೋದದ್ದು ಸಣ್ಣ ವಸ್ತುವೇ ಆದರೂ ಅದಕ್ಕಾಗಿ ಬಹಳ ಬೇಸರಗೊಳ್ಳುವಿರಿ. ಮನೆಯ ಕೆಲಸ ಕಾರ್ಯಗಳಲ್ಲಿ ಇಂದು ಹೆಚ್ಚಿನ ಸಮಯ ಕಳೆಯುವಿರಿ.

ಮಿಥುನ ರಾಶಿ

ಮಹಿಳಾ ಅಭ್ಯರ್ಥಿಗಳು ತಮ್ಮ ಅಮೂಲ್ಯವಾದ ತಾಳ್ಮೆಯನ್ನು ಕಳೆದುಕೊಳ್ಳುವ ಸಂಭವವಿದೆ. ನಿಮ್ಮ ಸ್ವಂತ ಸಾಮರ್ಥ್ಯದ ಬಗ್ಗೆ ನಿಮಗೂ ಸರಿಯಾಗಿ ಅರಿಯಲು ಸಾಧ್ಯವಾಗದೆ ಹೋಗಬಹುದು. ಬಂಗಾರದ ಆಭರಣಗಳ ಮೇಲೆ ಹೊಸ ಹೂಡಿಕೆ ಮಾಡುವಿರಿ.

ಕರ್ಕಾಟಕ ರಾಶಿ

ಯಾರೋ ಅಪರಿಚಿತರ ಸುಲಭ ಮಾತುಗಳನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಕೆಲ ಗೊಂದಲಗಳು ಕಾಡಬಹುದು. ಯಾವುದೇ ಪ್ರಮುಖ ಒಪ್ಪಂದಕ್ಕೆ ಮೊದಲು ಸರಿಯಾಗಿ ವಿಚಾರಿಸಿ.

ಸಿಂಹ ರಾಶಿ

ವಿವಿಧ ಮೂಲಗಳಿಂದ ನಿಮಗೆ ಉತ್ತಮ ಆದಾಯವಿದ್ದು ಹೂಡಿಕೆ ಕಡೆ ಗಮನವಿಡಿ. ಪ್ರಭಾವಿ ವ್ಯಕ್ತಿಗಳ ಸಹಕಾರದಿಂದ ನಿಮಗೆ ಅತ್ಯುತ್ತಮ ಉದ್ಯೋಗಾವಕಾಶ ಲಭಿಸಲಿದೆ. ನಿಮ್ಮ ಆಲಸ್ಯದ ಸ್ವಭಾವವನ್ನು ಹಿತಶತ್ರುಗಳು ದುರ್ಬಳಕೆ ಮಾಡಿಕೊಳ್ಳುವರು.

ಕನ್ಯಾ ರಾಶಿ

ದಾಂಪತ್ಯ ಜೀವನದಲ್ಲಿ ಅಪರೂಪಕ್ಕೆಂಬಂತೆ ಉತ್ತಮ ಸುಖ-ಶಾಂತಿ ಕಾಣುವಿರಿ. ನಿಮ್ಮ ವೃದ್ಧ ತಂದೆ-ತಾಯಿಗಳ ಸೇವೆಯನ್ನು ಮಾಡಿ ಅವರ ಪ್ರೀತಿ ಸಂಪಾದಿಸುವಿರಿ. ನಿಮ್ಮ ಬಗ್ಗೆ ಬರುವ ನಕಾರಾತ್ಮಕ ಹೇಳಿಕೆಗಳನ್ನು ಸಹಿಸಿಕೊಳ್ಳಲು ಆಗದು.

ತುಲಾ ರಾಶಿ

ನಿಮ್ಮ ಸಂಗಾತಿಯ ಜೊತೆಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುವಿರಿ. ಬಹಳ ದಿನಗಳಿಂದ ಅಧಿಕ ಒತ್ತಡದಲ್ಲಿದ್ದ ಕಾರಣ ವಿಶ್ರಾಂತಿಯಲ್ಲಿ ಕಾಲ ಕಳೆಯುವಿರಿ. ದಾನ ಧರ್ಮ ಮಾಡುವುದರಿಂದ ನಿಮ್ಮ ಮನಸ್ಸಿಗೆ ಪುಣ್ಯ ಸಿಗಲಿದೆ.

ವೃಶ್ಚಿಕ ರಾಶಿ

ನಿಮಗೆ ಸಿಗಬೇಕಾದ ಪ್ರೀತಿ ಸರಿಯಾಗಿ ಹಂಚಿಕೆಯಾಗದೆ ಬಹಳ ಕಷ್ಟಪಡುವಿರಿ. ಆರ್ಥಿಕ ವಿಚಾರವಾಗಿ ನಿಮ್ಮ ಮೇಲೆ ಕೆಲವು ಸಲ್ಲದ ಅಪವಾದಗಳು ಬರಬಹುದು. ನಿಮ್ಮ ಅತ್ಯಂತ ಆಪ್ತರನ್ನು ಅನಿರೀಕ್ಷಿತವಾಗಿ ಕಳೆದುಕೊಳ್ಳುವಿರಿ.

ಧನು ರಾಶಿ

ಕೇವಲ ಲಾಭವನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡಬೇಡಿ. ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುವವರಿಗೆ ಉತ್ತಮ ಮನ್ನಣೆ ಸಿಗಲಿದೆ. ನಿಮ್ಮ ಅತಿಯಾದ ಹಠದ ಸ್ವಭಾವವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ.

ಮಕರ ರಾಶಿ

ನೀವು ನೀಡಿರುವ ಸಾಲವನ್ನು ವಾಪಸ್ ಪಡೆಯಲು ಇಂದು ಅಲೆಯಬೇಕಾಗುತ್ತದೆ. ಇನ್ಯಾರೋ ಮಾಡುವ ತೊಂದರೆಗಳಿಂದ ನೀವು ಮಾನಸಿಕವಾಗಿ ಬೇಸತ್ತು ಹೋಗುವಿರಿ. ಹೂಡಿಕೆ ಮಾಡಲು ಕೆಲವರಿಂದ ಅನಿರೀಕ್ಷಿತ ಒತ್ತಡಗಳು ಬರಬಹುದು.

ಕುಂಭ ರಾಶಿ

ಯಾರನ್ನು ಕೂಡ ಒಮ್ಮೆಲೆ ನಂಬುವುದು ಕಷ್ಟವಾದರೂ ಇಂದು ನಂಬಿಕೆ ಅನಿವಾರ್ಯ. ನಿಮ್ಮ ನಿರ್ಲಕ್ಷ್ಯದ ಧೋರಣೆಯಿಂದ ಸ್ನೇಹಿತರು ನಿಮ್ಮಿಂದ ದೂರಾಗಬಹುದು. ಪ್ರಣಯದ ವಿಚಾರದಲ್ಲಿ ಇಂದು ನಿಮಗೆ ಆಸಕ್ತಿ ಹೆಚ್ಚಿರಲಿದೆ.

ಮೀನ ರಾಶಿ (Daily Horoscope)

ಮನಸ್ಸಿನಲ್ಲಿ ಪ್ರೀತಿಗೆ ಸಂಬಂಧಿಸಿದಂತೆ ನಾನಾ ರೀತಿಯ ಗೊಂದಲಗಳು ಕಾಡಲಿವೆ. ವಿದೇಶ ಪ್ರಯಾಣ ಮಾಡುವ ಆಸೆಗೆ ನಿಮ್ಮ ಮಿತ್ರರ ಸಹಕಾರ ದೊರೆಯಲಿದೆ. ನಿಮ್ಮ ಸ್ಥಿರವಾದ ಯೋಚನೆಯಿಂದ ಕಷ್ಟದ ಸಂದರ್ಭಗಳನ್ನು ಎದುರಿಸುವಿರಿ.