Daily Horoscope: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಕೃಷ್ಣ ಪಕ್ಷದ ದ್ವಿತೀಯಾ ತಿಥಿಯ ಸೋಮವಾರದಂದು ಆಕರ್ಷಣೆಯಿಂದ ಸೋಲು, ಉದಾಸೀನತೆ, ಸಂಪಾದನೆ ಸುಗಮ, ದ್ವಂದ್ವ ನೀತಿ, ಅಪರಿಚಿತರ ಜೊತೆ ಪ್ರಯಾಣ, ಸಾಹಿತ್ಯದಲ್ಲಿ ಆಸಕ್ತಿ ಹಾಗೂ ಸಕಾಲಕ್ಕೆ ಸೌಲಭ್ಯ ಸಿಗುವ ಯೋಗವಿದೆ. ಇಂದಿನ ದ್ವಾದಶ ರಾಶಿಗಳ ಸಂಪೂರ್ಣ ದಿನ ಭವಿಷ್ಯ ಇಲ್ಲಿದೆ.
ಮೇಷ ರಾಶಿ
ಸ್ನೇಹಿತನ ಮೇಲಿನ ನಂಬಿಕೆಯಿಂದ ಯಾರಿಗೋ ಹಣ ನೀಡಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಬಂಧುಗಳಿಂದ ನೂತನ ವಸ್ತ್ರಾದಿಗಳು ಸಿಗಲಿವೆ. ಕೆಲಸದಲ್ಲಿ ಬದಲಾವಣೆ ಬಯಸುವಿರಿ. ಹಣಕಾಸಿನ ಹರಿವು ಹೆಚ್ಚಿ ಸಂತೋಷ ತರಲಿದೆ. ಹೊಸ ಸಂಪಾದನೆಗೆ ಅವಕಾಶಗಳು ಸಿಗಲಿವೆ. ಇಂದು ಕಾರ್ಯದ ಒತ್ತಡ ಅಧಿಕವಾಗಿರಲಿದೆ.
ವೃಷಭ ರಾಶಿ
ಇಂದು ಅಪರೂಪದ ವಸ್ತುಗಳು ಕೈಸೇರಲಿವೆ. ಕುಟುಂಬದ ಜೊತೆ ಸಮಯ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಗಣ್ಯರ ವ್ಯಕ್ತಿತ್ವ ನಿಮ್ಮ ಮೇಲೆ ಪ್ರಭಾವ ಬೀರಲಿದೆ. ಖರ್ಚು ಕಡಿಮೆ ಮಾಡಿದ್ದರಿಂದ ಆರ್ಥಿಕತೆ ಉತ್ತಮವಾಗಲಿದೆ. ನಕಾರಾತ್ಮಕತೆಯನ್ನು ಮರೆತು ಮುನ್ನಡೆಯುವಿರಿ.
ಮಿಥುನ ರಾಶಿ
ಶತ್ರುಗಳ ಕಾಟ ಕಡಿಮೆ ಮಾಡಿಕೊಳ್ಳಲು ಸೂಕ್ತ ಯೋಜನೆ ರೂಪಿಸುವಿರಿ. ಉದ್ಯಮಿಗಳಿಗೆ ಕೆಲವು ತೊಂದರೆಗಳು ಬರಬಹುದು. ಕುಟುಂಬದ ಮನಸ್ತಾಪ ಸರಿಮಾಡುವ ಕಾರ್ಯ ಸಫಲವಾಗಲಿದೆ. ದ್ವಂದ್ವ ನೀತಿಯಿಂದ ಮನೆಯವರಿಗೆ ಕಷ್ಟವಾಗಬಹುದು. ಮುಕ್ತ ಮನಸ್ಸಿನಿಂದ ಸರಳತೆ ರೂಢಿಸಿಕೊಳ್ಳುವುದು ಒಳಿತು.
ಕರ್ಕಾಟಕ ರಾಶಿ
ಒಂದು ಕಡೆ ಹಣದ ವ್ಯವಹಾರ ಮುಕ್ತಾಯವಾದರೆ, ಮತ್ತೊಂದು ಕಡೆ ತೆರೆದುಕೊಳ್ಳಲಿದೆ. ಸಂಗಾತಿಯ ಒತ್ತಾಯದ ಮೇರೆಗೆ ಹೊಸ ಉದ್ಯೋಗಕ್ಕೆ ಹೋಗಲು ಮನಸ್ಸು ಮಾಡುವಿರಿ. ಸುಲಭವಾದ ಕೆಲಸವನ್ನು ಸಂಕೀರ್ಣ ಮಾಡಿಕೊಳ್ಳಬೇಡಿ. ನಿಮ್ಮ ಕರ್ತವ್ಯವನ್ನು ಮರೆಯದೇ ನಿಭಾಯಿಸಲು ಪ್ರಯತ್ನಿಸಿ.
ಸಿಂಹ ರಾಶಿ
ಪರರ ನೋವಿಗೆ ಸರಿಯಾಗಿ ಸ್ಪಂದಿಸಿ. ಸಾಮಾಜಿಕ ಗೌರವ ಸಿಗಲಿದ್ದು, ಅಹಂಕಾರ ಬರದಂತೆ ನೋಡಿಕೊಳ್ಳಿ. ಮಕ್ಕಳ ಪ್ರೀತಿಯ ಅವಶ್ಯಕತೆ ನಿಮಗಿರಲಿದೆ. ಸಂಪತ್ತಿನ ಕಡೆ ಅಧಿಕ ಗಮನ ಹರಿಸುವುದರಿಂದ ಸಂಬಂಧಗಳು ಸಡಿಲವಾಗಬಹುದು. ಒಪ್ಪಿಕೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸಿ.
ಕನ್ಯಾ ರಾಶಿ
ನಿಮ್ಮ ಅತಿಯಾದ ಸಲುಗೆಯೇ ದ್ವೇಷಕ್ಕೆ ಕಾರಣವಾಗಬಹುದು. ಸ್ನೇಹಿತರು ಆರ್ಥಿಕ ನೆರವು ಬಯಸಲಿದ್ದಾರೆ. ಹೆಚ್ಚಿನ ಒತ್ತಡವಿಲ್ಲದೆ ಕೆಲಸ ಮುಗಿಸುವಿರಿ. ವಿದೇಶ ಪ್ರಯಾಣವನ್ನು ಆನಂದದಿಂದ ಮಾಡುವಿರಿ. ವಾತ ಸಂಬಂಧಿ ಖಾಯಿಲೆಗಳು ಕೊಂಚ ಹೆಚ್ಚಾಗುವ ಸಾಧ್ಯತೆ ಇದೆ.
ತುಲಾ ರಾಶಿ
ಪ್ರೇಮ ವಿಚಾರದಲ್ಲಿ ಎಚ್ಚರವಿರಲಿ. ವಾಹನ ಖರೀದಿಸಲು ಹಣಕಾಸಿನ ಸಹಾಯ ಸಿಗಲಿದೆ. ದಾಂಪತ್ಯದಲ್ಲಿ ಕಲಹಗಳಿದ್ದರೆ ಮಾತನಾಡಿ ಬಗೆಹರಿಸಿಕೊಳ್ಳಿ. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ. ಸುಳ್ಳು ಹೇಳಿದರೆ ಸಿಕ್ಕಿಬೀಳುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ
ಅಪರಿಚಿತ ಕರೆಗಳಿಂದ ಕೆಲಸಕ್ಕೆ ತೊಂದರೆಯಾಗಬಹುದು. ದಾಂಪತ್ಯದಲ್ಲಿ ಪ್ರೀತಿ ಹಾಗೂ ಸಂತೋಷ ಹೆಚ್ಚಿರಲಿದೆ. ವೃತ್ತಿಕ್ಷೇತ್ರದಲ್ಲಿ ನಿಮ್ಮ ಸಹಕಾರಕ್ಕೆ ಸೂಕ್ತ ಪ್ರಶಂಸೆ ಸಿಗಲಿದೆ. ಕಳೆದುಹೋದ ಸಂಬಂಧಗಳನ್ನು ಮತ್ತೆ ಕೂಡಿಸಿಕೊಳ್ಳಲಿದ್ದೀರಿ. ಆಪ್ತರ ಮೇಲೆ ಅಪನಂಬಿಕೆ ಬೇಡ.
ಧನು ರಾಶಿ
ಇಷ್ಟವಿಲ್ಲದ ವಿಚಾರಗಳಲ್ಲಿ ಚರ್ಚೆ ನಡೆಯಬಹುದು. ನಿರಂತರ ಕೆಲಸ ಮಾಡದೆ ಸ್ವಲ್ಪ ವಿಶ್ರಾಂತಿ ಪಡೆಯುವುದು ಉತ್ತಮ. ನಿಮ್ಮ ವರ್ತನೆ ಸರಿಯಾಗಿರಲಿ. ಸಂಗಾತಿಯಿಂದ ಅಚ್ಚರಿ ಕಾದಿದೆ. ದೂರದ ಬಂಧುಗಳ ಸಮಾಗಮವಾಗಲಿದ್ದು, ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ.
ಮಕರ ರಾಶಿ
ಕೋಪ ಅಲ್ಪಾವಧಿಯಾದರೂ ಸಮಯ ಹಾಳುಮಾಡುತ್ತದೆ. ಪ್ರೇಮ ಸಂಬಂಧಗಳು ಬಹುಕಾಲ ಉಳಿಯಲು ತಾಳ್ಮೆ ಅಗತ್ಯ. ಇಂದು ಎದುರಾಳಿಯನ್ನು ಎದುರಿಸುವುದು ಕಷ್ಟವಾಗಬಹುದು. ಅನಧಿಕೃತ ಮಾಹಿತಿಯನ್ನು ಹಂಚಿ ಯಾರ ಕೆಂಗಣ್ಣಿಗೂ ಗುರಿಯಾಗಬೇಡಿ. ಮಾತಿನ ಮೇಲೆ ನಿಗ್ರಹವಿರಲಿ.
ಕುಂಭ ರಾಶಿ
ನಿಮ್ಮ ಸಮಯ ಹಾಗೂ ಶಕ್ತಿ ಇತರರಿಗೆ ಮೀಸಲಾಗಲಿದೆ. ಸಂಬಂಧವಿಲ್ಲದ ವಿಚಾರಗಳಲ್ಲಿ ತಲೆಹಾಕಬೇಡಿ. ಆಯ್ಕೆಗಳೇ ಇಂದು ನಿಮ್ಮನ್ನು ಗೊಂದಲಕ್ಕೆ ಸಿಲುಕಿಸಬಹುದು. ಹೊಸ ಯೋಜನೆಯನ್ನು ಆರಂಭಿಸುವಿರಿ ಹಾಗೂ ಉತ್ತಮ ಬೆಂಬಲವೂ ಸಿಗಲಿದೆ. ಹಲವು ತೊಡಕುಗಳಿಂದ ಮುಕ್ತರಾಗುವಿರಿ.
ಮೀನ ರಾಶಿ
ಆಲಸ್ಯದಿಂದಾಗಿ ಯಾವ ಕೆಲಸವೂ ಸರಿಯಾದ ಸಮಯಕ್ಕೆ ಮುಗಿಯುವುದಿಲ್ಲ. ಅಧಿಕಾರಿಗಳಿಂದ ಗದರಿಕೆ ಕೇಳಬೇಕಾಗಬಹುದು. ಸ್ವಲ್ಪ ಉದಾಸೀನತೆಯೂ ಸಮಸ್ಯೆಯನ್ನು ಹೆಚ್ಚಾಗುವಂತೆ ಮಾಡುತ್ತದೆ. ಇಂದು ಅಲೆದಾಟ ವ್ಯರ್ಥವೆನಿಸಬಹುದು. ಏಕಾಂತದಲ್ಲಿ ಇರಲು ಇಷ್ಟಪಡುವಿರಿ.
Daily Horoscope
ಸಂವತ್ಸರ: ಶಾಲಿವಾಹನ ಶಕೆ 1949 (ಪರಾಭವ ಸಂವತ್ಸರ)
ಅಯನ / ಋತು: ದಕ್ಷಿಣಾಯನ / ವರ್ಷ ಋತು
ಮಾಸ / ಪಕ್ಷ / ತಿಥಿ: ಭಾದ್ರಪದ ಕೃಷ್ಣ ಪಕ್ಷ ದ್ವಿತೀಯಾ
ನಕ್ಷತ್ರ / ಯೋಗ / ಕರಣ: ಅಶ್ವಿನೀ / ಧ್ರುವ / ಗರಜ
ಸೂರ್ಯೋದಯ / ಸೂರ್ಯಾಸ್ತ: ಬೆಳಿಗ್ಗೆ 06:09 / ಸಂಜೆ 06:10
ರಾಹು ಕಾಲ: ಬೆಳಿಗ್ಗೆ 07:40 – 09:10
ಯಮಗಂಡ ಕಾಲ: ಬೆಳಿಗ್ಗೆ 10:40 – ಮಧ್ಯಾಹ್ನ 12:10
ಗುಳಿಕ ಕಾಲ: ಮಧ್ಯಾಹ್ನ 01:40 – 03:10




