☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

Daily Horoscope: ಈ ರಾಶಿಯವರಿಗೆ ಆಸ್ತಿ ಹೋರಾಟ; ಯಾರಿಗೆ ಶುಭ? ಯಾರಿಗೆ ಎಚ್ಚರಿಕೆ?

Daily Horoscope: Rashi Bhavishya Predictions For All 12 Zodiac Signs

Daily Horoscope: ಶಾಲಿವಾಹನ ಶಕವರ್ಷ 1949ರ ಭಾದ್ರಪದ ಮಾಸದ ಕೃಷ್ಣ ಪಕ್ಷದ ನವಮೀ ತಿಥಿಯ ಭಾನುವಾರದ ದಿನ ಭವಿಷ್ಯ ಇಲ್ಲಿದೆ. ಇಂದಿನ ದಿನವು ಕೆಲವರಿಗೆ ಆರ್ಥಿಕ ಲಾಭ ಹಾಗೂ ಸಂತೋಷವನ್ನು ತರಲಿದೆ. ಮತ್ತೆ ಕೆಲವರಿಗೆ ಅತಿಯಾದ ಆಸೆ, ಚಾರಿತ್ರ್ಯಕ್ಕೆ ಕಳಂಕ ಹಾಗೂ ಮನಸ್ತಾಪಗಳು ಎದುರಾಗುವ ಸಾಧ್ಯತೆಯಿದೆ. 

ಮೇಷ ರಾಶಿ

ವೈವಾಹಿಕ ಜೀವನಕ್ಕೆ ಪೂರ್ಣ ಒಪ್ಪಿಗೆ ಸಿಗುವುದು ಕಷ್ಟವಾಗಬಹುದು. ಸ್ಥಿರಾಸ್ತಿ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಬಹುದು. ಕೃಷಿ ಮತ್ತು ಭೂಮಿ ಉತ್ಪನ್ನಗಳಿಂದ ಲಾಭ ಸಿಗಲಿದೆ. 

ವೃಷಭ ರಾಶಿ

ಬಂಧುಗಳಿಗೆ ಆರ್ಥಿಕ ನೆರವು ನೀಡುವಿರಿ. ಅಭಿವೃದ್ಧಿ ಕೆಲಸಗಳು ನಿಧಾನವಾಗಿ ಸಾಗಲಿವೆ. ಮನೆಯಲ್ಲಿ ಹಬ್ಬದ ವಾತಾವರಣ ಇರಲಿದ್ದು, ಆಭರಣಗಳನ್ನು ಸುರಕ್ಷಿತವಾಗಿರಿಸಿ. 

ಮಿಥುನ ರಾಶಿ

ಆರ್ಥಿಕ ಅಭಿವೃದ್ಧಿ ಸಂತೋಷ ನೀಡಲಿದೆ. ಕುಟುಂಬದಿಂದ ಶುಭ ವಾರ್ತೆ ಬರಬಹುದು. ಸಹೋದರನಿಂದ ಹೊಸ ಉದ್ಯೋಗಕ್ಕೆ ಸಹಾಯವಾಗಲಿದ್ದು, ಚಿತ್ರಕಾರರಿಗೆ ಉತ್ತಮ ಅವಕಾಶ ಸಿಗಲಿದೆ. 

ಕರ್ಕಾಟಕ ರಾಶಿ

ಉದ್ಯಮಕ್ಕೆ ಬೆನ್ನೆಲುಬಾಗಿ ಯಾರಾದರೂ ಬರಲಿದ್ದಾರೆ. ಮಕ್ಕಳ ವಿವಾಹಕ್ಕಾಗಿ ಓಡಾಟ ಮಾಡುವಿರಿ. ಹಳೆಯ ಪ್ರೇಮವು ನಿಮಗೆ ಮತ್ತೆ ತೊಂದರೆ ನೀಡಬಹುದು. 

ಸಿಂಹ ರಾಶಿ

ಯಾರ ಮಾತನ್ನೂ ಕೇಳದೆ ತಾವೇ ನಿರ್ಧಾರಕ್ಕೆ ಬರುವಿರಿ. ನಿಮ್ಮ ಅಸಹಜ ವರ್ತನೆಯು ಆತ್ಮೀಯರಿಗೆ ಸಿಟ್ಟು ತರಿಸಬಹುದು. ಯಾರ ಮೇಲೂ ಅತಿಯಾಗಿ ಸಿಟ್ಟಾಗುವುದು ಬೇಡ. 

ಕನ್ಯಾ ರಾಶಿ

ವಿನ್ಯಾಸಕಾರರಿಗೆ ಸೂಕ್ತ ಕೆಲಸ ಸಿಗಲಿದೆ. ಹಣದ ವ್ಯವಹಾರವನ್ನು ಒಬ್ಬರೇ ಮಾಡಬೇಡಿ, ನಂಬಿಕಸ್ಥರನ್ನು ಜೊತೆಗಿಟ್ಟುಕೊಳ್ಳಿ. ಇಂದಿನ ದೂರಪ್ರಯಾಣ ನಿರಾಶಾದಾಯಕವಾಗಿರಲಿದೆ. 

ತುಲಾ ರಾಶಿ

ನಿರೀಕ್ಷಿತ ಸಮಯ ಬರದೆ ಮನಸ್ಸಿಗೆ ಸಂಕಟವಾಗಬಹುದು. ಸಂಪತ್ತಿದ್ದರೂ ನೆಮ್ಮದಿಯ ಕೊರತೆ ಕಾಡಲಿದೆ. ಆಪ್ತರಿಂದ ಪ್ರೀತಿಯ ಉಡುಗೊರೆ ಪಡೆಯುವಿರಿ. 

ವೃಶ್ಚಿಕ ರಾಶಿ

ದುಸ್ಸಾಹಸಗಳು ಧೈರ್ಯವನ್ನು ಕುಗ್ಗಿಸಬಹುದು. ಆರ್ಥಿಕ ವ್ಯವಹಾರದವರಿಗೆ ಅಲ್ಪ ಬಿಡುವು ಸಿಗಲಿದೆ. ವೃತ್ತಿಯಲ್ಲಿ ಕೆಲಸಗಳು ಸರಿಯಾಗದೆ ಕಷ್ಟಕ್ಕೆ ಸಿಲುಕಬಹುದು. 

ಧನು ರಾಶಿ

ದುರಭ್ಯಾಸಗಳಿಲ್ಲದೆ ಇರುವುದೇ ನಿಮ್ಮ ದೊಡ್ಡ ಯೋಗ್ಯತೆ. ಕೆಲಸದಲ್ಲಿ ಬೆಂಬಲ ಕಡಿಮೆ ಸಿಗಬಹುದು. ನಿಮ್ಮ ದುರಾಲೋಚನೆಗಳಿಗೆ ನೀವೇ ಪೂರ್ಣವಿರಾಮ ಹಾಕಿ. 

ಮಕರ ರಾಶಿ

ನಿಮ್ಮ ಕೆಲಸಕ್ಕೆ ಎಲ್ಲರಿಂದಲೂ ಸೂಕ್ತ ಪ್ರಶಂಸೆ ಸಿಗಲಿದೆ. ವಿದ್ಯಾರ್ಥಿಗಳು ತಮ್ಮ ಶಕ್ತಿಯನ್ನು ಸಾಬೀತುಪಡಿಸುವರು. ಅತಿಯಾದ ಆಸೆಯಿಂದ ದುಃಖ ಬರಬಹುದು. 

ಕುಂಭ ರಾಶಿ

ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಲಿದೆ. ಕಚೇರಿಯಲ್ಲಿ ಜಗಳವಾಗಿ ಉದ್ಯೋಗ ಕಳೆದುಕೊಳ್ಳುವ ಹಂತಕ್ಕೆ ಹೋಗಬಹುದು. ವ್ಯವಹಾರಕ್ಕೆ ಬೇಕಾದ ಬಂಡವಾಳ ಜೋಡಿಸಿಕೊಳ್ಳಿ. 

ಮೀನ ರಾಶಿ (Daily Horoscope)

ಜ್ಞಾನದ ಜೊತೆಗೆ ಶ್ರಮವೂ ಇದ್ದರೆ ಯಶಸ್ಸು ಖಂಡಿತ. ಮಕ್ಕಳಿಂದ ನಿಮಗೆ ಅಪಾರ ಸಂತೋಷ ಸಿಗಲಿದೆ. ಸಿಕ್ಕ ಸಂಪತ್ತನ್ನು ಜಾಗರೂಕತೆಯಿಂದ ಜೋಪಾನ ಮಾಡಿ.