Daily Horoscope: ಅಕ್ಟೋಬರ್ 22ರ ಇಂದಿನ ರಾಶಿ ಭವಿಷ್ಯದ ಪ್ರಕಾರ, ಕೆಲ ರಾಶಿಯವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ಅದು ವಿಕೋಪಕ್ಕೆ ಹೋಗುವ ಸಾಧ್ಯತೆಯಿದೆ. ಇಂದಿನ ದಿನದಲ್ಲಿ ಪ್ರತಿಯೊಂದು ವಿಚಾರದಲ್ಲೂ ಎಚ್ಚರಿಕೆ ಹಾಗೂ ಸಂಯಮ ವಹಿಸುವುದು ಅತ್ಯಂತ ಅವಶ್ಯವಾಗಿದೆ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಶರತ್ ಋತು, ಆಶ್ವಯುಜ ಮಾಸದ ಶುಕ್ಲ ಪಕ್ಷದ ಏಕಾದಶೀ ತಿಥಿಯ ಗುರುವಾರದ ದಿನ ಇದಾಗಿದೆ. ಇಂದು ವಿದ್ಯಾಭ್ಯಾಸಕ್ಕೆ ಸಾಲ, ಪರರ ಮೆಚ್ಚುಗೆ ಹಾಗೂ ದಾಖಲೆ ಸೃಷ್ಟಿಯಂತಹ ವಿಶೇಷ ಅಂಶಗಳು ಪ್ರಮುಖವಾಗಿರಲಿವೆ.
ಉದ್ಯೋಗ, ವ್ಯಾಪಾರ, ಹಣಕಾಸು ಹಾಗೂ ಕೌಟುಂಬಿಕ ಜೀವನದಲ್ಲಿ ಇಂದು ಎದುರಾಗುವ ಸವಾಲುಗಳನ್ನು ಎದುರಿಸಲು ಮುನ್ನೆಚ್ಚರಿಕೆ ಅಗತ್ಯ. ಪ್ರತಿಯೊಂದು ರಾಶಿಯ ಸಂಪೂರ್ಣ ಜ್ಯೋತಿಷ್ಯ ಫಲಗಳು ಮತ್ತು ದೈನಂದಿನ ಭವಿಷ್ಯ ಕೆಳಗಿನಂತಿವೆ.
ಮೇಷ ರಾಶಿ
ಸರಿ ಎನಿಸಿದರೆ ಒಪ್ಪಿ, ಇಲ್ಲವಾದರೆ ಮುನ್ನಡೆಯಿರಿ. ನಿಮಗೆ ಇಂದು ಕೆಲಸದಲ್ಲಿ ತೃಪ್ತಿ ಸಿಗಲಿದೆ. ಸಂಗಾತಿಯ ಪ್ರೀತಿ ಲಭ್ಯವಾಗಲಿದ್ದು, ವಿದ್ಯಾರ್ಥಿಗಳು ಆರ್ಥಿಕ ವಿಚಾರದಲ್ಲಿ ಎಚ್ಚರವಿರಬೇಕು.
ವೃಷಭ ರಾಶಿ
ಸಂಗಾತಿಯ ವರ್ತನೆಯಿಂದ ನಿಮಗೆ ಬೇಸರವಾಗಬಹುದು. ಅನಿವಾರ್ಯವಾಗಿ ಕೆಲವು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವಿರಿ. ಸ್ನೇಹಿತರಿಗಾಗಿ ಧನ ನಷ್ಟವಾಗುವ ಸಂಭವವಿದೆ.
ಮಿಥುನ ರಾಶಿ
ನಿಮ್ಮ ಆಲೋಚನೆಗಳಿಂದ ಯೋಗ್ಯ ಸ್ಥಾನ ಲಭಿಸಲಿದೆ. ಆರ್ಥಿಕ ಕಾರಣಕ್ಕಾಗಿ ಹೆಚ್ಚು ಆತಂಕ ಪಡುವಿರಿ. ದಾಂಪತ್ಯ ಸುಖದಲ್ಲಿ ಮಕ್ಕಳ ಯೋಗಕ್ಷೇಮ ಮರೆಯಬೇಡಿ.
ಕರ್ಕಾಟಕ ರಾಶಿ
ದುರಭ್ಯಾಸಗಳಿಂದ ಎಲ್ಲರ ಎದುರು ಮಾನ ಕಳೆದುಕೊಳ್ಳಬೇಡಿ. ಮಹಿಳೆಯರಿಗೆ ಸಹಾಯ ಮಾಡಲು ಹೋಗಿ ಅಪವಾದ ಬರಬಹುದು. ನಿರುದ್ಯೋಗಿಗಳಿಗೆ ಹೊಸ ದಾರಿ ಸಿಗಲಿದೆ.
ಸಿಂಹ ರಾಶಿ
ವಾಹನ ಚಾಲನೆ ವೇಳೆ ಯಾವುದೇ ಒತ್ತಡ ಇಟ್ಟುಕೊಳ್ಳಬೇಡಿ. ಚರಾಸ್ತಿಗಳನ್ನು ನಷ್ಟ ಮಾಡಿಕೊಳ್ಳುವಿರಿ. ಸಂಗಾತಿಯನ್ನು ಕಡೆಗಣಿಸುವುದು ನಿಮ್ಮ ನೆಮ್ಮದಿ ಕೆಡಿಸಬಹುದು.
ಕನ್ಯಾ ರಾಶಿ
ನಿಮ್ಮ ಉದ್ಯಮದ ಮೇಲೆ ಬೇರೆಯವರ ದೃಷ್ಟಿ ಬೀಳಬಹುದು. ಸಮಾಜಮುಖೀ ಕಾರ್ಯಗಳನ್ನು ಫಲಾಪೇಕ್ಷೆ ಇಲ್ಲದೆ ಮಾಡುವಿರಿ. ತಾಳ್ಮೆ ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯ.
ತುಲಾ ರಾಶಿ
ಸ್ಥಾನಮಾನ ಕಳೆದುಕೊಳ್ಳುವ ಭೀತಿ ಎದುರಾಗಬಹುದು. ಹೊಸ ಮನೆಗೆ ಸ್ಥಳಾಂತರಗೊಳ್ಳುವ ಯೋಗವಿದೆ. ಹಿರಿಯರ ಮಾತನ್ನು ನಿರ್ಲಕ್ಷಿಸದೆ ಕಡ್ಡಾಯವಾಗಿ ಪಾಲಿಸಿ.
ವೃಶ್ಚಿಕ ರಾಶಿ
ಬೇರೆಯವರ ಮುಖಾಂತರ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಹಣದ ಕಾರಣಕ್ಕೆ ವಂಚನೆಗೆ ಒಳಗಾಗುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಅಡಚಣೆ ಉಂಟಾಗಬಹುದು.
ಧನು ರಾಶಿ
ಯಾವ ಕೆಲಸವೂ ನೀವು ಅಂದುಕೊಂಡಷ್ಟು ಸುಲಭವಾಗಿ ಆಗುವುದಿಲ್ಲ. ತಾಳ್ಮೆ ಕಳೆದುಕೊಳ್ಳುವುದು ಒಳ್ಳೆಯದಲ್ಲ. ಅಪರಿಚಿತರ ಹಾವಳಿಯಿಂದ ಎಚ್ಚರವಿರಲಿ.
ಮಕರ ರಾಶಿ
ಪ್ರೇಮ ವಿಚಾರದಲ್ಲಿ ಸ್ನೇಹಿತರ ಸಹಕಾರ ಸಿಗಲಿದೆ. ಸಂಗಾತಿ ಜೊತೆಗಿನ ಸಣ್ಣಪುಟ್ಟ ಕಲಹ ದಿನದ ನೆಮ್ಮದಿ ಕೆಡಿಸಬಹುದು. ದೂರಪ್ರಯಾಣದಿಂದ ಅಧಿಕ ಆಯಾಸವಾಗಲಿದೆ.
ಕುಂಭ ರಾಶಿ
ಕಚೇರಿಯ ಕೆಲಸದಿಂದ ನಿಮಗೆ ಬೇಸರವಾಗಬಹುದು. ಆರೋಗ್ಯದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ಆಲಸ್ಯದಿಂದ ದೂರವಿರುವುದು ಒಳ್ಳೆಯದು.
ಮೀನ ರಾಶಿ (Daily Horoscope)
ಅಕಾರಣವಾಗಿ ಆತಂಕಗೊಂಡು ಚಿಂತೆ ಮಾಡುವಿರಿ. ನಿಮ್ಮ ಬಗ್ಗೆ ಸುಳ್ಳು ವದಂತಿಗಳು ಹಬ್ಬಬಹುದು. ವ್ಯವಹಾರದಲ್ಲಿ ಇಂದು ವಿಪರೀತ ಒತ್ತಡವಿರಲಿದೆ.




