Image: AI Generated
RRB NTPC Recruitment 2026: ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ರೈಲ್ವೆ ನೇಮಕಾತಿ ಮಂಡಳಿಯು (RRB) ಅತ್ಯುತ್ತಮ ಅವಕಾಶವನ್ನು ತಂದಿದೆ. 2026ರ ಸಾಲಿನ ಎನ್ಟಿಪಿಸಿ (NTPC–Graduate) ಅಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಕೇಂದ್ರೀಕೃತ ಉದ್ಯೋಗ ಅಧಿಸೂಚನೆ (CEN No. 06/2026) ಮೂಲಕ ಒಟ್ಟು 3,548 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರೈಲ್ವೆಯ ವಾಣಿಜ್ಯ ಸೇವೆಗಳು, ರೈಲು ಕಾರ್ಯಾಚರಣೆ ಹಾಗೂ ಆಡಳಿತ ವಿಭಾಗಗಳಲ್ಲಿ ಈ ನೇಮಕಾತಿ ನಡೆಯಲಿದೆ.
ಯಾವುದೇ ಪದವಿ ಮುಗಿಸಿದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಬಾರಿ ಟೈಪಿಂಗ್ ಪರೀಕ್ಷೆಯನ್ನು ರದ್ದುಗೊಳಿಸಿರುವುದು ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಸಿಹಿ ಸುದ್ದಿಯಾಗಿದೆ.
ಹುದ್ದೆಗಳ ವಿವರ ಹಾಗೂ ಪ್ರಮುಖ ದಿನಾಂಕಗಳು
- ಸಂಸ್ಥೆ: ಭಾರತೀಯ ರೈಲ್ವೆ (RRB)
- ಒಟ್ಟು ಹುದ್ದೆಗಳು: 3,548
- ಹುದ್ದೆಗಳ ವಿವರ: ಗೂಡ್ಸ್ ಟ್ರೇನ್ ಮ್ಯಾನೇಜರ್ (2,750), ಸೀನಿಯರ್ ಕ್ಲರ್ಕ್ (371), ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ (300) ಹಾಗೂ ಚೀಫ್ ಕಮರ್ಷಿಯಲ್ ಸೂಪರ್ವೈಸರ್ (127).
- ಅರ್ಜಿ ಸಲ್ಲಿಕೆ ಆರಂಭ: 08 ಅಕ್ಟೋಬರ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06 ನವೆಂಬರ್ 2026 (ರಾತ್ರಿ 11:59 ರವರೆಗೆ)
- ತಿದ್ದುಪಡಿಗೆ ಕಾಲಾವಕಾಶ: 09 ನವೆಂಬರ್ ನಿಂದ 18 ನವೆಂಬರ್ 2026
ಇದನ್ನು ಓದಿ: RBI Recruitment 2026: ಆರ್ಬಿಐನಲ್ಲಿ ಫಾರ್ಮಾಸಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪರೀಕ್ಷೆಯಿಲ್ಲದೆ ನೇಮಕಾತಿ
ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ವೇತನ
- ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Degree) ಪಡೆದಿರಬೇಕು.
- ವಯೋಮಿತಿ: 2027ರ ಜನವರಿ 1ಕ್ಕೆ ಅನ್ವಯಿಸುವಂತೆ 18 ರಿಂದ 33 ವರ್ಷಗಳ ಒಳಗಿರಬೇಕು. ನಿಯಮಗಳ ಪ್ರಕಾರ ವಯೋಸಹಜ ಸಡಲಿಕೆ ಇರಲಿದೆ.
- ವೇತನ ಶ್ರೇಣಿ: ಹುದ್ದೆಗಳಿಗೆ ಅನುಗುಣವಾಗಿ ಆರಂಭಿಕ ಮೂಲ ವೇತನ ₹29,200 ರಿಂದ ₹35,400 ಇರಲಿದ್ದು, ನಿಯಮಾನುಸಾರ ಭತ್ಯೆಗಳು ಸಿಗಲಿವೆ.
RRB NTPC Recruitment 2026: ಆಯ್ಕೆ ಪ್ರಕ್ರಿಯೆ ಮತ್ತು ಪ್ರಮುಖ ಬದಲಾವಣೆ
- ಆಯ್ಕೆ ಹಂತಗಳು: CBT-1, CBT-2, ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆ ಮೂಲಕ ಆಯ್ಕೆ ನಡೆಯಲಿದೆ.
- ಟೈಪಿಂಗ್ ಪರೀಕ್ಷೆ ರದ್ದು: ಈ ಬಾರಿ ಟೈಪಿಂಗ್ ಸ್ಕಿಲ್ ಟೆಸ್ಟ್ (CBTST) ಅನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಮೂಲಭೂತ ಕಂಪ್ಯೂಟರ್ ಜ್ಞಾನವಿದ್ದರೆ ಸಾಕಾಗುತ್ತದೆ.
- ಅರ್ಜಿ ಸಲ್ಲಿಕೆ: ಆಸಕ್ತರು RRB ಅಧಿಕೃತ ವೆಬ್ಸೈಟ್ rrbapply.gov.in ಗೆ ಭೇಟಿ ನೀಡಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.




