Daily Horoscope: ಅಕ್ಟೋಬರ್ 19ರ ಇಂದಿನ ರಾಶಿ ಭವಿಷ್ಯದ ಪ್ರಕಾರ, ಕೆಲ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಅನಿರೀಕ್ಷಿತ ಸಂಕಷ್ಟಗಳು ಎದುರಾಗಲಿವೆ. ಇಂದಿನ ದಿನದಲ್ಲಿ ಪ್ರತಿಯೊಂದು ಕೆಲಸದಲ್ಲೂ ಎಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯವಾಗಿದೆ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಶರತ್ ಋತು, ಆಶ್ವಯುಜ ಮಾಸದ ಶುಕ್ಲ ಪಕ್ಷದ ಅಷ್ಟಮೀ ತಿಥಿಯ ಸೋಮವಾರದ ದಿನ ಇದಾಗಿದೆ. ಇಂದು ಕಲಹ, ಏಕಾಂಗಿ ಓಡಾಟ ಹಾಗೂ ಹಿರಿಯರಿಗೆ ಅಗೌರವದಂತಹ ಎಚ್ಚರಿಕೆಗಳು ಇವೆ.
ಶರನ್ನವರಾತ್ರದ ಎಂಟನೇ ದಿನವಾದ ಇಂದು ಮಹಾಗೌರೀ ದೇವಿಯ ಆರಾಧನೆ ಎಲ್ಲರಿಗೂ ಲಭಿಸಲಿ. ತಾಯಿಯು ಸಕಲರ ಸಂಕಟಗಳನ್ನು ದೂರ ಮಾಡಿ, ಎಲ್ಲರ ಬಾಳಿನಲ್ಲಿ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸೋಣ.
ಮೇಷ ರಾಶಿ
ಮಾತು ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಉದ್ಯೋಗ ಮಂದಗತಿಯಲ್ಲಿ ಸಾಗಲಿದೆ. ಅನಧಿಕೃತ ವ್ಯವಹಾರದಿಂದ ತೊಂದರೆ ಎದುರಾಗಬಹುದು. ವಿವಾಹದ ಮಾತುಕತೆಗಳು ನಡೆಯುವ ಸಾಧ್ಯತೆಯಿದೆ.
ವೃಷಭ ರಾಶಿ
ಭೂಮಿ ಮಾರಾಟಕ್ಕೆ ವ್ಯಕ್ತಿಗಳು ಬರಬಹುದು. ವೃತ್ತಿಯಲ್ಲಿ ಯಶಸ್ಸು ಸಿಗಲಿದೆ. ಹೆಚ್ಚಿನ ವೆಚ್ಚಕ್ಕೆ ಕಡಿವಾಣ ಹಾಕುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ, ಮನೆಯಲ್ಲೇ ಮದ್ದು ಮಾಡಿ.
ಮಿಥುನ ರಾಶಿ
ಕಾರ್ಯಗಳಿಗೆ ತಕ್ಷಣ ಫಲ ನಿರೀಕ್ಷಿಸಬೇಡಿ. ಮಕ್ಕಳಿಂದ ಶುಭಸಮಾಚಾರ ಕೇಳುವಿರಿ. ಉದ್ಯಮವನ್ನು ಬಹಳ ಯೋಜನೆಯಿಂದ ನಡೆಸಿ. ಒತ್ತಡದಿಂದ ಮುಕ್ತರಾಗುವ ಸಂದರ್ಭ ಬರಲಿದೆ.
ಕರ್ಕಾಟಕ ರಾಶಿ
ನಿಮ್ಮ ಪ್ರಭಾವದಿಂದ ಇವರಿಗೆ ಸಹಾಯ ಸಿಗಲಿದೆ. ವ್ಯಾಪಾರದಲ್ಲಿ ಔಚಿತ್ಯ ಬಹಳ ಮುಖ್ಯ. ಸ್ತ್ರೀಯರ ಮಾತಿಗೆ ನಿಮ್ಮ ಬೆಂಬಲವಿರಲಿದೆ. ಆಪ್ತರನ್ನು ದೂರ ಮಾಡಿಕೊಳ್ಳಬೇಡಿ.
ಸಿಂಹ ರಾಶಿ
ಇಷ್ಟವಾದ ಕಾರ್ಯದಿಂದ ಸಂತೋಷಪಡುವಿರಿ. ಸಂಗಾತಿ ನಡುವೆ ಕಲಹ ಉಂಟಾಗಬಹುದು. ಆಸ್ತಿ ವಿಚಾರದಲ್ಲಿ ಹಿನ್ನಡೆಯಾಗಲಿದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಕೊರತೆ ಕಾಡಬಹುದು.
ಕನ್ಯಾ ರಾಶಿ
ವ್ಯಾಮೋಹದಿಂದ ಹೊರಬರುವುದು ಕಷ್ಟವಾಗಬಹುದು. ಆಪ್ತರ ಜೊತೆ ಜಾಗರೂಕರಾಗಿ ಮಾತನಾಡಿ. ನೋವಿಗೆ ಸರಿಯಾದ ಚಿಕಿತ್ಸೆ ಪಡೆಯಿರಿ. ದೂರದ ಪ್ರಯಾಣವನ್ನು ತಪ್ಪಿಸಿ.
ತುಲಾ ರಾಶಿ
ಸ್ಥಿರಾಸ್ತಿ ವಿಚಾರದಲ್ಲಿ ಲಾಭವಾಗಲಿದೆ. ಧೈರ್ಯದಿಂದ ಸವಾಲುಗಳನ್ನು ಎದುರಿಸುವಿರಿ. ಮಕ್ಕಳಿಂದ ಸಂತೋಷ ಸಿಗಲಿದೆ. ಅನಗತ್ಯ ಖರ್ಚುಗಳಿಂದ ಸಂಕಟಪಡುವ ಸಂಭವವಿದೆ.
ವೃಶ್ಚಿಕ ರಾಶಿ
ಆಲಸ್ಯದಿಂದ ಉತ್ತಮ ಅವಕಾಶ ಕಳೆದುಕೊಳ್ಳುವಿರಿ. ಕುಟುಂಬದ ಜೊತೆ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವಿರಿ. ಸಾಹಿತ್ಯಾಸಕ್ತರಿಗೆ ಪ್ರಶಂಸೆ ಸಿಗಲಿದೆ. ಆರೋಗ್ಯದ ಕಡೆ ಗಮನವಿರಲಿ.
ಧನು ರಾಶಿ
ಖರ್ಚು ನಿಭಾಯಿಸಲು ಅನುಭವಿಗಳ ಸಲಹೆ ಪಡೆಯಿರಿ. ಆರ್ಥಿಕ ಸಮಸ್ಯೆಯಿಂದ ಹಳೆಯ ವಸ್ತು ಮಾರುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಕಾಡಲಿದೆ.
ಮಕರ ರಾಶಿ
ಹಿಂದಿನ ಹೂಡಿಕೆಯಿಂದ ಲಾಭವಾಗಲಿದೆ. ಸ್ವಂತ ವ್ಯವಹಾರ ಲಾಭದಾಯಕವಾಗಲಿದೆ. ಕಚೇರಿ ಒತ್ತಡದಿಂದ ಕುಟುಂಬಕ್ಕೆ ಸಮಯ ನೀಡಲು ಕಷ್ಟವಾಗಬಹುದು. ಸಂಬಂಧಗಳನ್ನು ಉಳಿಸಿಕೊಳ್ಳಿ.
ಕುಂಭ ರಾಶಿ
ವೃತ್ತಿ ಸ್ಥಳದಲ್ಲಿ ಕಿರಿಕಿರಿ ಉಂಟಾಗಬಹುದು. ಅಪರಿಚಿತರ ಜೊತೆ ಮಾತನ್ನು ಕಡಿಮೆ ಮಾಡಿ. ಯಾವುದೇ ಪ್ರಚೋದನೆಗೆ ಸಿಲುಕಬೇಡಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ.
ಮೀನ ರಾಶಿ (Daily Horoscope)
ಜವಾಬ್ದಾರಿಗಳಲ್ಲಿ ಸ್ವಲ್ಪ ಹಿನ್ನಡೆಯಾಗಲಿದೆ. ಸಂಗಾತಿಗೆ ಸುಂದರ ಉಡುಗೊರೆ ನೀಡುವಿರಿ. ಆತ್ಮಸ್ಥೈರ್ಯವನ್ನು ಮೈಗೂಡಿಸಿಕೊಳ್ಳಿ. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ವಹಿಸಿ.




