☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

RBI Recruitment 2026: ಆರ್‌ಬಿಐನಲ್ಲಿ ಫಾರ್ಮಾಸಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪರೀಕ್ಷೆಯಿಲ್ಲದೆ ನೇಮಕಾತಿ

RBI Recruitment 2026: Apply For 22 Contract Posts In Mumbai

RBI Recruitment 2026: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುಂಬೈನಲ್ಲಿರುವ ತನ್ನ ವಿವಿಧ ಡಿಸ್ಪೆನ್ಸರಿಗಳಲ್ಲಿ ಖಾಲಿ ಇರುವ ಫಾರ್ಮಾಸಿಸ್ಟ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಂಪೂರ್ಣವಾಗಿ ಒಪ್ಪಂದದ (Contract) ಆಧಾರದ ಮೇಲೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಆಸಕ್ತರು ಅಂಚೆ ಮೂಲಕ ಅಥವಾ ಆನ್‌ಲೈನ್ ವಿಧಾನದ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿರುವುದು ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಕೆಳಗಿನಂತಿದೆ.

ಹುದ್ದೆಗಳ ವಿವರ ಹಾಗೂ ಅರ್ಹತೆಗಳು

  • ಸಂಸ್ಥೆ: ಭಾರತೀಯ ರಿಸರ್ವ್ ಬ್ಯಾಂಕ್ (RBI)
  • ಹುದ್ದೆಯ ಹೆಸರು: ಫಾರ್ಮಾಸಿಸ್ಟ್ (ಗುತ್ತಿಗೆ ಆಧಾರ)
  • ಒಟ್ಟು ಹುದ್ದೆಗಳು: 22 ಹುದ್ದೆಗಳು (ಸ್ಥಳ: ಮುಂಬೈ/ನವಿ ಮುಂಬೈ)
  • ವಿದ್ಯಾರ್ಹತೆ: 10ನೇ ತರಗತಿಯೊಂದಿಗೆ ಫಾರ್ಮಸಿಯಲ್ಲಿ ಡಿಪ್ಲೊಮಾ ಅಥವಾ ಪದವಿ ಪಡೆದಿರಬೇಕು.
  • ವೇತನ: ಪ್ರತಿ ಗಂಟೆಗೆ ₹600 ಗೌರವಧನ ಸಿಗಲಿದ್ದು, ದಿನವೊಂದಕ್ಕೆ ಗರಿಷ್ಠ ₹3,000 ವರೆಗೆ ಗಳಿಸಬಹುದು.

RBI Recruitment 2026: ಅರ್ಜಿ ಸಲ್ಲಿಸುವ ವಿಧಾನ ಹಾಗೂ ವಿಳಾಸ

  • ಅರ್ಜಿ ಸಲ್ಲಿಕೆ: ಆರ್‌ಬಿಐ ಅಧಿಕೃತ ವೆಬ್‌ಸೈಟ್‌ಗೆ (rbi.org.in) ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
  • ದಾಖಲೆಗಳು: ಭರ್ತಿ ಮಾಡಿದ ಅರ್ಜಿಯೊಂದಿಗೆ ನಿಮ್ಮ ಶೈಕ್ಷಣಿಕ ದಾಖಲೆಗಳು, ಅನುಭವದ ಪತ್ರ, ವಯಸ್ಸಿನ ಪುರಾವೆ ಮತ್ತು ಜಾತಿ ಪ್ರಮಾಣಪತ್ರಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಲಗತ್ತಿಸಬೇಕು.
  • ವಿಳಾಸ: ಲಕೋಟೆಯ ಮೇಲೆ ಹುದ್ದೆಯ ಹೆಸರು ಬರೆದು – Regional Director, Human Resource Management Department, Recruitment Section, Reserve Bank of India, Mumbai Regional Office, Shahid Bhagat Singh Road, Fort, Mumbai – 400001 ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು.
  • ಆನ್‌ಲೈನ್ ವಿವರ: ಅಂಚೆ ಮೂಲಕ ಕಳುಹಿಸುವುದರ ಜೊತೆಗೆ ಅಧಿಕೃತ ಪ್ರಕಟಣೆಯಲ್ಲಿ ನೀಡಲಾಗಿರುವ ಆನ್‌ಲೈನ್ ಲಿಂಕ್ ಮೂಲಕವೂ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
  • ಕೊನೆಯ ದಿನಾಂಕ: ನವೆಂಬರ್ 3, 2026 (ಸಂಜೆ 5:00 ಗಂಟೆಯೊಳಗೆ ಕಚೇರಿ ತಲುಪಬೇಕು).