Daily Horoscope: ಅಕ್ಟೋಬರ್ ತಿಂಗಳ ನಾಲ್ಕನೇ ವಾರವು ಎಲ್ಲಾ ರಾಶಿಚಕ್ರದವರಿಗೆ ಅತ್ಯಂತ ವಿಶೇಷವಾಗಿರಲಿದೆ. ಈ ವಾರದಲ್ಲಿ ಗ್ರಹಗಳ ಸಂಚಾರದಿಂದಾಗಿ ಕೆಲವು ರಾಶಿಗಳಿಗೆ ಶುಭ ಸಮಾಚಾರ ಸಿಗಲಿದೆ. ಹೊಸ ಕೆಲಸಗಳ ತಯಾರಿಯಲ್ಲಿರುವವರಿಗೆ ಇದು ಉತ್ತಮ ಸಮಯವಾಗಿದೆ.
ವೃತ್ತಿ, ಪ್ರೇಮ, ಆರ್ಥಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ಈ ವಾರ ಕೆಲವು ಬದಲಾವಣೆಗಳು ಉಂಟಾಗಲಿವೆ. ಸಣ್ಣ ನಿರ್ಧಾರಗಳು ಕೂಡ ಜೀವನದಲ್ಲಿ ದೊಡ್ಡ ಯಶಸ್ಸನ್ನು ತಂದುಕೊಡುವ ಸಾಧ್ಯತೆಯಿದೆ.
ಆದಾಗ್ಯೂ, ವಾರಾಂತ್ಯದಲ್ಲಿ ಅಧಿಕ ಖರ್ಚು ಎದುರಾಗುವ ಸಂಭವವಿದೆ. ಆದ್ದರಿಂದ ಪ್ರತಿಯೊಬ್ಬರೂ ಕೆಲವು ವಿಷಯಗಳಲ್ಲಿ ಎಚ್ಚರಿಕೆ ಹಾಗೂ ಸಂಯಮ ಕಾಪಾಡಿಕೊಳ್ಳುವುದು ಅವಶ್ಯವಾಗಿದೆ.
ಮೇಷ ರಾಶಿ
ಗುರು ನಾಲ್ಕನೇ ಮನೆಯಲ್ಲಿ ಉಚ್ಚನಾಗಿ ಸುಖ-ಸಂತೋಷ ತರಲಿದ್ದಾನೆ. ಆದರೆ ಕುಜ ನೀಚನಾಗಿರುವುದರಿಂದ ಕೋಪ ಹತೋಟಿಯಲ್ಲಿರಲಿ. ವಿಜಯದಶಮಿಯಂದು ಶುಭ ಸುದ್ದಿ ಸಿಗುವ ಸೂಚನೆ ಇದೆ.
ವೃಷಭ ರಾಶಿ
ಗುರುವಿನ ಬಲದಿಂದ ಧೈರ್ಯ ಹೆಚ್ಚಾಗಲಿದ್ದು ಒಡಹುಟ್ಟಿದವರ ಬೆಂಬಲ ಸಿಗಲಿದೆ. ಶನಿ ವಕ್ರಿಯಾಗಿರುವುದರಿಂದ ಹಳೆಯ ಹಣ ಕೈಸೇರುವ ಯೋಗವಿದೆ. ವಾರಾಂತ್ಯದಲ್ಲಿ ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ.
ಮಿಥುನ ರಾಶಿ
ಸೂರ್ಯ ಮತ್ತು ಶುಕ್ರ ಪಂಚಮದಲ್ಲಿ ಸೇರಿ ಹರ್ಷ ತರಲಿದ್ದಾರೆ. ಪ್ರೇಮ ಹಾಗೂ ಕಲಾ ರಂಗದವರಿಗೆ ಇದು ಉತ್ತಮ ಸಮಯ. ದಾಖಲೆಗಳಿಗೆ ಸಹಿ ಹಾಕುವಾಗ ಎರಡು ಬಾರಿ ಓದಿ.
ಕರ್ಕಾಟಕ ರಾಶಿ
ಗುರು ನಿಮ್ಮ ರಾಶಿಯಲ್ಲೇ ಉಚ್ಚನಾಗಿ ವ್ಯಕ್ತಿತ್ವಕ್ಕೆ ಕಳೆ ತುಂಬುತ್ತಾನೆ. ಆದರೆ ಕುಜ ನೀಚನಾಗಿರುವುದರಿಂದ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ.
ಸಿಂಹ ರಾಶಿ
ಗುರು ದ್ವಾದಶದಲ್ಲಿದ್ದು ಈ ವಾರ ಖರ್ಚು ಹೆಚ್ಚಿಸಬಹುದು. ದೊಡ್ಡ ನಿರ್ಧಾರಗಳನ್ನು ಸ್ವಲ್ಪ ಕಾಲ ಮುಂದೂಡುವುದು ಜಾಣತನ. ಹೊಸ ಯೋಜನೆಗಳಿಗೆ ಸರಿಯಾದ ತಯಾರಿ ನಡೆಸಿ.
ಕನ್ಯಾ ರಾಶಿ
ಲಾಭಸ್ಥಾನದಲ್ಲಿ ಗುರು ಇರುವುದರಿಂದ ಆದಾಯ ಹಾಗೂ ಹೊಸ ಅವಕಾಶಗಳು ಒಲಿಯಲಿವೆ. ಶನಿ ವಕ್ರಿಯಾಗಿರುವುದರಿಂದ ಸಂಗಾತಿಯ ಜೊತೆ ಮಾತನಾಡುವಾಗ ತಾಳ್ಮೆ ಇರಲಿ.
ತುಲಾ ರಾಶಿ
ಆತ್ಮವಿಶ್ವಾಸ ಸ್ವಲ್ಪ ಕುಗ್ಗಿದಂತೆ ಅನಿಸಿದರೂ ಶುಕ್ರ ಸ್ವರಾಶಿಯಲ್ಲಿದ್ದು ಸಂಬಂಧಗಳಲ್ಲಿ ಮೋಡಿ ಉಳಿಯುತ್ತದೆ. ಈ ವಾರದ ಶುಕ್ರ ಪ್ರದೋಷವು ನಿಮಗೆ ವಿಶೇಷ ಫಲ ನೀಡಲಿದೆ.
ವೃಶ್ಚಿಕ ರಾಶಿ
ಗುರು ಒಂಬತ್ತನೇ ಮನೆಯಲ್ಲಿ ಉಚ್ಚನಾಗಿ ಭಾಗ್ಯದ ಬಾಗಿಲು ತೆರೆಯುತ್ತಾನೆ. ಪ್ರಯಾಣ ಹಾಗೂ ಧಾರ್ಮಿಕ ಕಾರ್ಯಗಳಿಂದ ಫಲ ಸಿಗಲಿದೆ. ಮಕ್ಕಳ ವಿಷಯದಲ್ಲಿ ಸಹನೆ ಇರಲಿ.
ಧನು ರಾಶಿ
ಎಂಟನೇ ಮನೆಯಲ್ಲಿ ಗುರು ಇರುವುದರಿಂದ ಇದು ಅನಿರೀಕ್ಷಿತ ತಿರುವುಗಳ ವಾರವಾಗಿದೆ. ಅರ್ಥವಾಗದ ವಿಷಯಗಳ ಮೇಲೆ ಹೂಡಿಕೆ ಮಾಡಬೇಡಿ. ಲಾಭಸ್ಥಾನದ ಗ್ರಹಗಳು ಬೆಂಬಲಿಸಲಿವೆ.
ಮಕರ ರಾಶಿ
ಹಬ್ಬದ ದಿನಗಳಲ್ಲಿ ಚಂದ್ರನ ಸಂಚಾರದಿಂದ ಮನಸ್ಸಿಗೆ ಹರ್ಷ ಸಿಗಲಿದೆ. ವೃತ್ತಿಯಲ್ಲಿ ಮೇಲಧಿಕಾರಿಗಳ ಜೊತೆ ವಿನಯದಿಂದ ನಡೆದುಕೊಳ್ಳಿ. ಸಂಗಾತಿಯಿಂದ ಸಿಹಿ ಅಚ್ಚರಿ ಕಾದಿದೆ.
ಕುಂಭ ರಾಶಿ
ರಾಹು ನಿಮ್ಮ ರಾಶಿಯಲ್ಲೇ ಇರುವುದರಿಂದ ಹೊಸ ಯೋಚನೆಗಳು ಮೂಡಲಿವೆ. ಮಾತಿನಲ್ಲಿ ಸಂಯಮ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಚಂದ್ರನ ಸಂಚಾರ ಹೊಸ ಚೈತನ್ಯ ನೀಡಲಿದೆ.
ಮೀನ ರಾಶಿ (Daily Horoscope)
ಶನಿ ವಕ್ರಿಯಾಗಿ ಆತ್ಮಾವಲೋಕನಕ್ಕೆ ಪ್ರೇರೇಪಿಸುತ್ತಾನೆ. ಗುರು ಪಂಚಮದಲ್ಲಿ ಉಚ್ಚನಾಗಿ ಯಶಸ್ಸು ಕೊಡುತ್ತಾನೆ. ವಾರದ ಮಧ್ಯದ ನಂತರ ಮನಸ್ಸು ಹಗುರಾಗಲಿದೆ.




