☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

BEL Recruitment 2026: ಬಿಇ ಪದವೀಧರರಿಗೆ ಬೆಲ್‌ನಲ್ಲಿ ಕೆಲಸ; ತಿಂಗಳಿಗೆ ₹50 ಸಾವಿರ ಸಂಬಳ

BEL Recruitment 2026: Apply Online For Project Engineer Posts In Bengaluru

BEL Recruitment 2026: ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಇಂಜಿನಿಯರಿಂಗ್ ಪದವೀಧರರಿಗೆ ಭರ್ಜರಿ ಆಫರ್ ನೀಡಿದೆ. ಸಂಸ್ಥೆಯ ಬೆಂಗಳೂರು ಕಾಂಪ್ಲೆಕ್ಸ್‌ನಲ್ಲಿ ಖಾಲಿ ಇರುವ ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 

ಎಲೆಕ್ಟ್ರಾನಿಕ್ ವಾರ್‌ಫೇರ್ ಮತ್ತು ಏವಿಯಾನಿಕ್ಸ್ ವಿಭಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ಈ ನೇಮಕಾತಿ ನಡೆಯುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 

ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಜಾಲಹಳ್ಳಿಯ ಬೆಂಗಳೂರು ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುವ ಅವಕಾಶ ಸಿಗಲಿದೆ. ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಕೆಳಗಿನಂತಿದೆ. 

ಹುದ್ದೆಗಳ ವಿವರ ಹಾಗೂ ಪ್ರಮುಖ ದಿನಾಂಕಗಳು

  • ಸಂಸ್ಥೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) 
  • ಹುದ್ದೆಯ ಹೆಸರು: ಪ್ರಾಜೆಕ್ಟ್ ಇಂಜಿನಿಯರ್ – I
  • ಒಟ್ಟು ಹುದ್ದೆಗಳು: 14 (ಎಲೆಕ್ಟ್ರಾನಿಕ್ಸ್ – 08, ಕಂಪ್ಯೂಟರ್ ಸೈನ್ಸ್ – 06) 
  • ಅರ್ಜಿ ಸಲ್ಲಿಕೆ ಆರಂಭ: 09 ಅಕ್ಟೋಬರ್ 2026 
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23 ಅಕ್ಟೋಬರ್ 2026 

BEL Recruitment 2026: ಅರ್ಹತೆ, ವಯೋಮಿತಿ ಮತ್ತು ವೇತನ

  • ವಿದ್ಯಾರ್ಹತೆ: B.E / B.Tech / B.Sc Engineering ಪೂರ್ಣಗೊಳಿಸಿರಬೇಕು ಹಾಗೂ 2 ವರ್ಷಗಳ ಅನುಭವ ಕಡ್ಡಾಯ. 
  • ವಯೋಮಿತಿ: ಗರಿಷ್ಠ 32 ವರ್ಷ (ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರಲಿದೆ).
  • ವೇತನ: ಆರಂಭಿಕ ವರ್ಷದಲ್ಲಿ ಪ್ರತಿ ತಿಂಗಳು ₹50,000/- ಸಂಬಳ ಸಿಗಲಿದ್ದು, ಪ್ರತಿ ವರ್ಷ ₹5,000/- ಹೆಚ್ಚಳವಾಗಲಿದೆ.