Daily Horoscope: ಅಕ್ಟೋಬರ್ 14ರ ಇಂದಿನ ರಾಶಿ ಭವಿಷ್ಯದ ಪ್ರಕಾರ, ಕೆಲ ರಾಶಿಗಳಿಗೆ ಸ್ವಾವಲಂಬನೆ ಹಾಗೂ ಸಾಧಿಸುವ ಛಲ ಹೆಚ್ಚಾಗಲಿದೆ. ಆದರೆ ಇತರರಿಂದ ಅನಗತ್ಯ ನಿಂದನೆ ಹಾಗೂ ವಿಡಂಬನೆಗಳು ಎದುರಾಗುವ ಸಾಧ್ಯತೆಯಿದೆ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಶರತ್ ಋತು, ಆಶ್ವಯುಜ ಮಾಸದ ಶುಕ್ಲ ಪಕ್ಷದ ಚತುರ್ಥೀ ತಿಥಿಯ ಬುಧವಾರದ ದಿನ ಇದಾಗಿದೆ. ಇಂದು ಧೃಡ ಸಂಕಲ್ಪ, ಹಣಕಾಸಿನ ಕೊರತೆ ಹಾಗೂ ಅನಾರೋಗ್ಯದಂತಹ ಮಿಶ್ರ ಫಲಗಳು ಕಂಡುಬರಲಿವೆ.
ಶರನ್ನವರಾತ್ರದ ನಾಲ್ಕನೇ ದಿನವಾದ ಇಂದು ಜಗನ್ಮಾತೆಯ ಆರಾಧನೆಯು ಎಲ್ಲರಿಗೂ ಮಂಗಲ ತರಲಿ. ಚಂದ್ರಘಂಟಾ ದೇವಿಯು ಪ್ರತಿಯೊಬ್ಬರ ಸಂಕಟಗಳನ್ನು ಸಂಹರಿಸಿ, ಎಲ್ಲರ ಬಾಳಿನಲ್ಲೂ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸೋಣ.
ಮೇಷ ರಾಶಿ
ಆರ್ಥಿಕತೆಯ ಮೇಲೆ ಹಿಡಿತ ಸಾಧಿಸದಿದ್ದರೆ ತೊಂದರೆ ಎದುರಾಗಬಹುದು. ವೈವಾಹಿಕ ಜೀವನವು ನೆಮ್ಮದಿಯಿಂದ ಕೂಡಿರಲಿದೆ. ಅನಗತ್ಯ ವಿಚಾರಗಳ ಚರ್ಚೆ ಬಿಟ್ಟು ನಿಮ್ಮ ಕೆಲಸದಲ್ಲಿ ಮಗ್ನರಾಗುವುದು ಸೂಕ್ತ. ಹಳೆಯ ಸಾಲಗಳನ್ನು ತೀರಿಸುವಿರಿ.
ವೃಷಭ ರಾಶಿ
ಸ್ತ್ರೀಯರ ವಿಚಾರದಲ್ಲಿ ತುಸು ಸೂಕ್ಷ್ಮವಾಗಿ ವ್ಯವಹರಿಸುವುದು ಒಳ್ಳೆಯದು. ನಿಮ್ಮ ಭಾವನೆಗಳಿಗೆ ಸೂಕ್ತ ಬೆಲೆ ಸಿಗದೆ ಬೇಸರವಾಗಬಹುದು. ಕಚೇರಿಯ ಅಪೂರ್ಣ ಕೆಲಸಗಳನ್ನು ಇಂದು ಪೂರ್ಣಗೊಳಿಸುವಿರಿ. ಇತರರ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ.
ಮಿಥುನ ರಾಶಿ
ನಕಾರಾತ್ಮಕ ಯೋಚನೆಗಳನ್ನು ಮನಸ್ಸಿನಿಂದ ದೂರವಿಡಿ. ದೂರ ಪ್ರಯಾಣವು ಸುಖಕರವಾಗಿರಲಿದೆ. ನ್ಯಾಯಾಲಯದ ಕೆಲಸಗಳು ಸಲೀಸಾಗಿ ಮುಗಿಯಲಿವೆ. ನಿಮ್ಮ ಶ್ರಮಕ್ಕೆ ತಕ್ಕಂತೆ ಉತ್ತಮ ಫಲಿತಾಂಶ ಲಭಿಸಲಿದೆ.
ಕರ್ಕಾಟಕ ರಾಶಿ
ಇಂದು ಯಾರಿಗೆ ಸಹಾಯ ಮಾಡುವುದಿದ್ದರೂ ಮನಃಪೂರ್ವಕವಾಗಿ ಮಾಡಿ. ಕಲಾವಿದರಿಗೆ ವೃತ್ತಿರಂಗದಲ್ಲಿ ಉತ್ತಮ ಗೌರವ ಲಭಿಸಲಿದೆ. ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಿರಿ. ಕಚೇರಿಯ ಕೆಲಸದ ಒತ್ತಡ ಹೆಚ್ಚಾಗಬಹುದು.
ಸಿಂಹ ರಾಶಿ
ನಿಮ್ಮ ಯೋಜನೆಗಳ ಅನುಷ್ಠಾನಕ್ಕೆ ಸಣ್ಣಪುಟ್ಟ ವಿಘ್ನಗಳು ಎದುರಾಗಬಹುದು. ಪ್ರಭಾವಿ ವ್ಯಕ್ತಿಗಳ ನೆರವು ಪಡೆಯುವ ಸಂದರ್ಭ ಬರಲಿದೆ. ಹೊಸ ವಾಹನ ಖರೀದಿಸುವ ಯೋಗವಿದೆ. ಕೆಲವು ವಿಷಯಗಳಲ್ಲಿ ಹೊಂದಾಣಿಕೆ ಅಗತ್ಯ.
ಕನ್ಯಾ ರಾಶಿ
ಮಹಿಳೆಯರ ಜೊತೆ ಕೆಲಸ ಮಾಡುವಾಗ ತಾಳ್ಮೆ ಇರಲಿ. ಶಿಸ್ತಿನ ಕೆಲಸಕ್ಕೆ ಹೆಚ್ಚಿನ ಜವಾಬ್ದಾರಿಗಳು ಹುಡುಕಿಕೊಂಡು ಬರಲಿವೆ. ಅಪರಿಚಿತರ ಜೊತೆಗಿನ ಮಾತುಕತೆ ಮಿತಿಯಲ್ಲಿರಲಿ. ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಿ.
ತುಲಾ ರಾಶಿ
ಇಂದಿನ ಪ್ರಮುಖ ಕಾರ್ಯಗಳು ತಾರ್ಕಿಕ ಅಂತ್ಯ ಕಾಣದೆ ಹೋಗಬಹುದು. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಸಣ್ಣ ಹಿನ್ನಡೆಯಾಗಬಹುದು. ಅತಿಯಾದ ಪರಿಶ್ರಮಕ್ಕೆ ತಕ್ಕ ಪ್ರಶಂಸೆ ಸಿಗದೆ ಬೇಸರ ಮೂಡಬಹುದು.
ವೃಶ್ಚಿಕ ರಾಶಿ
ಸಿಕ್ಕ ಜವಾಬ್ದಾರಿಗಳು ಮನಸ್ಸಿಗೆ ಅಸಮಾಧಾನ ತರಬಹುದು. ಸಂಗಾತಿಯನ್ನು ಅರ್ಥೈಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗಲಿದೆ. ಯಾರದ್ದೋ ಮಾತಿಗೆ ಉದ್ವೇಗಕ್ಕೆ ಒಳಗಾಗಬೇಡಿ. ತಂದೆಯ ಮಾತಿಗೆ ಗೌರವ ನೀಡಿ.
ಧನು ರಾಶಿ
ದೂರದೃಷ್ಟಿಯ ಆಲೋಚನೆಯಿಂದ ನಿಮ್ಮ ಗುರಿ ಬದಲಾಗಲಿದೆ. ನಿರುದ್ಯೋಗಿಗಳಿಗೆ ಮಿತ್ರರಿಂದ ಉತ್ತಮ ಸಹಕಾರ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ವಹಿಸಿ. ಸಾಧಿಸುವ ಛಲದಿಂದ ಗುರಿ ತಲುಪುವಿರಿ.
ಮಕರ ರಾಶಿ
ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಇಂದು ಸಫಲರಾಗುವಿರಿ. ಸ್ನೇಹಿತರ ಜೊತೆ ಸಂತೋಷದಿಂದ ಸಮಯ ಕಳೆಯುವಿರಿ. ಹಳೆಯ ವಸ್ತುಗಳ ದುರಸ್ತಿಗೆ ಖರ್ಚು ಬರಬಹುದು. ಇಷ್ಟಪಟ್ಟ ಜನರನ್ನು ಭೇಟಿಯಾಗುವಿರಿ.
ಕುಂಭ ರಾಶಿ
ಯಾವುದೇ ನಿರ್ಧಾರವನ್ನು ಆತುರದಲ್ಲಿ ತೆಗೆದುಕೊಳ್ಳಬೇಡಿ. ಮನೆಯ ಕೆಲಸಗಳ ಒತ್ತಡದಿಂದ ಆಯಾಸವಾಗಬಹುದು. ಬಯಕೆಗಳನ್ನು ಈಡೇರಿಸಿಕೊಳ್ಳಲು ಇತರರ ನೆರವು ಪಡೆಯುವಿರಿ. ಕಚೇರಿ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ.
ಮೀನ ರಾಶಿ (Daily Horoscope)
ಗೊಂದಲಗಳಿಂದಾಗಿ ಪ್ರಮುಖ ನಿರ್ಧಾರ ಕೈಗೊಳ್ಳುವುದು ಕಷ್ಟವಾದೀತು. ಪುಣ್ಯಕ್ಷೇತ್ರಗಳ ದರ್ಶನಕ್ಕೆ ಯೋಜನೆ ರೂಪಿಸುವಿರಿ. ಆರ್ಥಿಕವಾಗಿ ಸಬಲರಾಗಲು ಹೊಸ ಹಾದಿ ಹುಡುಕುವಿರಿ. ಅನಗತ್ಯ ಪಟ್ಟು ಹಿಡಿಯುವುದನ್ನು ಬಿಡಿ.




