☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Premada Oorali:3 ವಾರಗಳಾದ್ಮೇಲೆ ಬೆಳಗ್ಗೆ 7 ಗಂಟೆಗೆ ಶೋ; ತುಮಕೂರಿನ ಮಾರುತಿ ಥಿಯೇಟರ್‌ಗೆ ನುಗ್ಗಿದ ಜನಜಂಗುಳಿ!

Premada Oorali special show in Maruthi Theater created history in Tumkur

ತುಮಕೂರು: ಕನ್ನಡ ಚಿತ್ರರಂಗದಲ್ಲಿ ಹೊಸಬರ ಚಿತ್ರವೊಂದು ಪ್ರೇಕ್ಷಕರ ಪ್ರೀತಿಯನ್ನು ಗಳಿಸಿ, ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಆಶಾದಾಯಕ ಬೆಳವಣಿಗೆಯಾಗಿದೆ. ಅದಕ್ಕೆ ಸಾಕ್ಷಿಯಾಗಿ ‘ಪ್ರೇಮದ ಊರಲಿ’ (Premada Oorali) ಸಿನಿಮಾ ತುಮಕೂರಿನ ಮಾರುತಿ ಚಿತ್ರಮಂದಿರದಲ್ಲಿ ಹೊಸ ದಾಖಲೆಯೊಂದನ್ನು ನಿರ್ಮಿಸಿದೆ.

ಇಂದು (ಅಕ್ಟೋಬರ್ 11)ರಂದು ಬೆಳಗ್ಗೆ 7 ಗಂಟೆಗೆ ಪ್ರೇಕ್ಷಕರ ಒತ್ತಾಯದ ಮೇರೆಗೆ ತುಮಕೂರಿನ ಮಾರುತಿ ಚಿತ್ರಮಂದಿರದಲ್ಲಿ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ವಿಶೇಷವೆಂದರೆ, ಈ ಶೋ ಹೌಸ್‌ಫುಲ್ ಆಗುವ ಮೂಲಕ ಚಿತ್ರತಂಡಕ್ಕೆ ಹಾಗೂ ಚಿತ್ರಮಂದಿರದ ನಿರ್ವಹಣಾ ತಂಡಕ್ಕೆ ಸಂತಸ ತಂದಿದೆ. ಮೂರು ವಾರಗಳ ಬಳಿಕ ವಿಶೇಷ ಪ್ರದರ್ಶನ ಕಂಡ ಈ ಸಿನಿಮಾಗೆ ಸಿಗ್ತಿರೋ ರೆಸ್ಪಾನ್ಸ್ ಹೊಸ ಹುರುಪು ತಂದಿದೆ.

ವಿಶೇಷ ಶೋಗೆ ಸಖತ್ ರೆಸ್ಪಾನ್ಸ್!

ಕರ್ನಾಟಕದಲ್ಲಿ ಈ ವಿಶೇಷ ಪ್ರದರ್ಶನವನ್ನು ತುಮಕೂರಿನ ಮಾರುತಿ ಚಿತ್ರಮಂದಿರವೊಂದರಲ್ಲೇ ಆಯೋಜಿಸಲಾಗಿತ್ತು. ಸಾಮಾನ್ಯವಾಗಿ ದೊಡ್ಡ ಸ್ಟಾರ್‌ಕಾಸ್ಟ್‌ ಸಿನಿಮಾಗಳಿಗೆ ಇಂತಹ ವಿಶೇಷ ಪ್ರದರ್ಶನಗಳ ಬಗ್ಗೆ ನಿರೀಕ್ಷೆ ಇರುತ್ತೆ. ಆದರೆ, ಹೊಸಬರ ಸಿನಿಮಾ ಕೂಡ ಪ್ರೇಕ್ಷಕರನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಆಕರ್ಷಿಸಬಹುದು ಎಂಬುದನ್ನು ‘ಪ್ರೇಮದ ಊರಲಿ’ ಸಾಬೀತುಪಡಿಸುತ್ತಿದೆ.

ಥಿಯೇಟರ್ ಮಾಲೀಕರಿಗೆ ಆಶ್ವರ್ಯ!

ಈ ಬಗ್ಗೆ ಮಾರುತಿ ಚಿತ್ರಮಂದಿರದ ಮಾಲೀಕರಾದ ಗಣೇಶ್ ಪ್ರತಿಕ್ರಿಯಿಸಿದ್ದು, “ಈ ಮಟ್ಟದ ಪ್ರತಿಕ್ರಿಯೆಯನ್ನು ನೋಡಿ ನನಗೆ ಆಶ್ಚರ್ಯವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿ ಮತ್ತು ಬೆಂಬಲ ಚಿತ್ರಮಂದಿರದ ವಾತಾವರಣದಲ್ಲಿಯೂ ಸಂಭ್ರಮವನ್ನು ಹೆಚ್ಚಿಸಿದೆ.

ಇಂದಿನ ಸಿನಿಮಾ ಜಗತ್ತಿನಲ್ಲಿ ಒಂದು ಚಿತ್ರ ಯಶಸ್ಸು ಕಾಣಬೇಕಾದರೆ ದೊಡ್ಡ ಸ್ಟಾರ್‌ಗಳು, ಭಾರೀ ಪ್ರಚಾರ ಮತ್ತು ದೊಡ್ಡ ಬಜೆಟ್ ಮಾತ್ರವೇ ಮುಖ್ಯ ಆಗಲ್ಲ. ಕಥೆ, ಭಾವನೆ, ಮನರಂಜನೆ ಮತ್ತು ಪ್ರೇಕ್ಷಕರ ಮನಸ್ಸನ್ನು ಗೆಲ್ಲುವ ಸಾಮರ್ಥ್ಯವೂ ಅಷ್ಟೇ ಮುಖ್ಯ ಎಂಬುದನ್ನು ‘ಪ್ರೇಮದ ಊರಲಿ’ ಅಂತಹ ಸಿನಿಮಾಗಳು ನೆನಪಿಸುತ್ತಿವೆ.

ಪ್ರೇಕ್ಷಕರಿಂದ ಫುಲ್ ಸಪೂರ್ಟ್

ಹೊಸಬರ ತಂಡದ ಪ್ರಯತ್ನಕ್ಕೆ ಪ್ರೇಕ್ಷಕರು ಪ್ರೀತಿಯಿಂದ ಪ್ರತಿಕ್ರಿಯಿಸುತ್ತಿರುವುದು ಕನ್ನಡ ಚಿತ್ರರಂಗದ ಭವಿಷ್ಯದ ದೃಷ್ಟಿಯಿಂದಲೂ ಮಹತ್ವದ ಸಂಗತಿಯಾಗಿದೆ. ಒಳ್ಳೆಯ ಸಿನಿಮಾ ಬಂದಾಗ ಅದನ್ನು ಗುರುತಿಸಿ, ಚಿತ್ರಮಂದಿರಕ್ಕೆ ಬಂದು ಬೆಂಬಲಿಸುವ ಕನ್ನಡ ಪ್ರೇಕ್ಷಕರ ಶಕ್ತಿ ಅಪಾರ ಎಂಬುದಕ್ಕೆ ಈ ಬೆಳವಣಿಗೆ ಉತ್ತಮ ನಿದರ್ಶನವಾಗಿದೆ.

ಒಟ್ಟಿನಲ್ಲಿ, ತುಮಕೂರಿನ ಮಾರುತಿ ಚಿತ್ರಮಂದಿರದಲ್ಲಿ ಬೆಳಗ್ಗೆ 7 ಗಂಟೆಯ ಪ್ರದರ್ಶನ ಹೌಸ್‌ಫುಲ್ ಆಗಿರುವುದು ‘ಪ್ರೇಮದ ಊರಲಿ’ ಸಿನಿಮಾದ ಮೇಲಿನ ಪ್ರೇಕ್ಷಕರ ಆಸಕ್ತಿ ಮತ್ತು ಪ್ರೀತಿಯನ್ನು ಎತ್ತಿ ತೋರಿಸುತ್ತದೆ. ಕನ್ನಡ ಸಿನಿಮಾಗಳನ್ನು ಉಳಿಸಿ ಬೆಳೆಸಬೇಕೆಂದರೆ ಇಂತಹ ಉತ್ತಮ ಪ್ರಯತ್ನಗಳಿಗೆ ಪ್ರೇಕ್ಷಕರು ನೀಡುವ ಪ್ರೋತ್ಸಾಹ ಅತ್ಯಗತ್ಯ. ಹೊಸಬರ ಪ್ರತಿಭೆಗಳ ಕನಸಿಗೆ ಪ್ರೇಕ್ಷಕರ ಪ್ರೀತಿ ಜೊತೆಯಾದಾಗ, ಆ ಸಿನಿಮಾ ಯಶಸ್ಸಿನ ಹೊಸ ಹಾದಿಯನ್ನು ನಿರ್ಮಿಸಬಹುದು ಎಂಬುದನ್ನು ‘ಪ್ರೇಮದ ಊರಲಿ’ ಮತ್ತೊಮ್ಮೆ ನೆನಪಿಸಿದೆ.