☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

BBK 13: ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲ ಮಾತುಗಳಿಗೆ ಬಿಗ್ ಬಾಸ್ ನೀಡಿದ ಕಠಿಣ ಶಿಕ್ಷೆ ಏನು?

BBK 13: Manju Expelled From the House for Using Abusive Language

BBK 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ ಈಗ ರೋಚಕ ಹಂತ ತಲುಪಿದೆ. ದಿನದಿಂದ ದಿನಕ್ಕೆ ಮನೆಯಲ್ಲಿ ನಡೆಯುವ ಗಲಾಟೆಗಳು ದೊಡ್ಡ ತಿರುವು ಪಡೆಯುತ್ತಿವೆ. ಈ ನಡುವೆ ಸ್ಪರ್ಧಿಗಳು ಆಡುವ ಮಾತುಗಳ ಮೇಲೆ ಬಿಗ್ ಬಾಸ್ ತೀವ್ರ ಕಣ್ಣಿಟ್ಟಿದ್ದಾರೆ. ಮಿತಿ ಮೀರಿದ ವರ್ತನೆ ತೋರುವವರಿಗೆ ಈಗ ತಕ್ಕ ಶಾಕ್ ಕಾದಿದೆ. ಮನೆಯೊಳಗೆ ಅಶ್ಲೀಲವಾಗಿ ಮಾತನಾಡಿದ್ದಕ್ಕೆ ಸ್ಪರ್ಧಿಯೊಬ್ಬರಿಗೆ ಬಿಗ್ ಬಾಸ್ ನೇರ ಹೊರಹಾಕುವ ಮೂಲಕ ದೊಡ್ಡ ಶಿಕ್ಷೆ ನೀಡಿದ್ದಾರೆ.

ಯಶಸ್ ಹಾಗೂ ಸೌಂದರ್ಯಾ ಜೊತೆ ನಡೆದ ಗಲಾಟೆ ಏನು?

ಬಿಗ್ ಬಾಸ್ ಮನೆಯಲ್ಲಿ ಈ ವಾರ ಮಂಜ ಅವರು ತೀರಾ ಅಶ್ಲೀಲವಾಗಿ ಮಾತನಾಡಿದ್ದರು. ಅವರ ಈ ಮಾತಿಗೆ ಎಲ್ಲರಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಮನೆಯ ಇತರ ಸ್ಪರ್ಧಿಗಳಾದ ಯಶಸ್ ಹಾಗೂ ಸೌಂದರ್ಯಾ ಶೆಟ್ಟಿ ಮುಂತಾದವರ ಜೊತೆ ಜಗಳ ಆಡುವಾಗ ಮಂಜ ಕೀಳು ಮಟ್ಟದ ಭಾಷೆ ಬಳಸಿದ್ದರು. ಇತರರ ವೈಯಕ್ತಿಕ ವಿಚಾರಗಳ ಬಗ್ಗೆಯೂ ಅಸಭ್ಯವಾಗಿ ಮಾತನಾಡಿದ್ದು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು.

ಮಂಜನಿಗೆ ಬಿಗ್ ಬಾಸ್ ನೀಡಿದ ಆಘಾತಕಾರಿ ಆದೇಶವೇನು?

ಸ್ಪರ್ಧಿಗಳು ತೋರಿದ ಈ ವರ್ತನೆಗೆ ಸಂಬಂಧಿಸಿದ ಹೊಸ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಬಿಡುಗಡೆ ಮಾಡಿದೆ. ಪ್ರೇಕ್ಷಕರು ಇದನ್ನು ನೋಡಿ ಶಾಕ್ ಆಗಿದ್ದಾರೆ. ‘ಈ ಮನೆಗೆ ಅದರದ್ದೇ ಆದ ನಿಯಮಗಳಿವೆ’ ಎಂದು ಬಿಗ್ ಬಾಸ್ ಗಂಭೀರವಾಗಿ ಎಚ್ಚರಿಕೆ ನೀಡಿದ್ದಾರೆ. ಹಲವು ಬಾರಿ ವಾರ್ನಿಂಗ್ ಕೊಟ್ಟರೂ ತಿದ್ದಿಕೊಳ್ಳದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ‘ಅಸಭ್ಯ ಮಾತುಗಳಿಂದ ಮನೆಯ ಸದಸ್ಯರ ವ್ಯಕ್ತಿತ್ವದ ಬಗ್ಗೆ ನಿಂದಿಸಿದ್ದೀರಿ. ಇದನ್ನು ಬಿಗ್ ಬಾಸ್ ಸಹಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

BBK 13: ಮನೆ ಮುಖ್ಯದ್ವಾರ ಓಪನ್ ಮಾಡಿ ಹೊರಹಾಕಿದ್ಯಾಕೆ?

ಮನೆಯ ಮೂಲ ನಿಯಮವನ್ನು ಮಂಜ ಗಂಭೀರವಾಗಿ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಅವರನ್ನು ತಕ್ಷಣವೇ ಮನೆಯಿಂದ ಹೊರಗೆ ಕಳಿಸಲಾಗುತ್ತಿದೆ ಎಂದು ಬಿಗ್ ಬಾಸ್ ಆದೇಶಿಸಿದ್ದಾರೆ. ಕೂಡಲೇ ಬಿಗ್ ಬಾಸ್ ಮನೆಯ ಮುಖ್ಯದ್ವಾರ ಓಪನ್ ಮಾಡಲಾಗಿದೆ. ಆ ನಿರ್ಧಾರದ ಬೆನ್ನಲ್ಲೇ ಮಂಜ ಮನೆಯಿಂದ ಹೊರಗೆ ಹೋಗಿದ್ದಾರೆ. ಈ ಅಚ್ಚರಿಯ ಬೆಳವಣಿಗೆಯಿಂದ ಮನೆಯ ಇತರ ಸ್ಪರ್ಧಿಗಳಿಗೆ ದೊಡ್ಡ ಪಾಠ ಕಲಿಸಿದಂತಾಗಿದೆ.