AR Rahman: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಯಾರನ್ನೂ ಬಿಡುವುದಿಲ್ಲ, ಎಷ್ಟೇ ದೊಡ್ಡವರಾದರೂ ಇಲ್ಲಿ ಕಾಯಲೇಬೇಕು. ಅಂತಹದ್ದೇ ಬಿಸಿ ಇದೀಗ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ಗೂ ತಟ್ಟಿದೆ. ಕಾರಿನಲ್ಲಿ ಕುಳಿತಿದ್ದ ಎ.ಆರ್. ರೆಹಮಾನ್ ಟ್ರಾಫಿಕ್ನಲ್ಲಿ ಸಿಲುಕಿ ಹೈರಾಣಾಗಿರುವ ಘಟನೆ ನಡೆದಿದೆ.
ವೈಟ್ಫೀಲ್ಡ್ನಲ್ಲಿ ಆಯೋಜನೆಗೊಂಡಿದ್ದ ‘ದಿ ವಂಡರ್ಮೆಂಟ್ ಟೂರ್’
ಇತ್ತೀಚೆಗೆ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಕೆಟಿಪಿಒ ಕನ್ವೆನ್ಷನ್ ಸೆಂಟರ್ನಲ್ಲಿ ಸಂಗೀತ ಕಾರ್ಯಕ್ರಮ ನಡೆದಿತ್ತು. ಎ.ಆರ್. ರೆಹಮಾನ್ ಅವರ ‘ದಿ ವಂಡರ್ಮೆಂಟ್ ಟೂರ್’ ಲೈವ್ ಮ್ಯೂಸಿಕ್ ಕಾನ್ಸರ್ಟ್ ಅದ್ಧೂರಿಯಾಗಿ ಆಯೋಜನೆಗೊಂಡಿತ್ತು. ಈ ಬೃಹತ್ ಸಂಗೀತ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಭಾಗವಹಿಸಿ ಅವರ ಗಾನಸುಧೆಯನ್ನು ಆಲಿಸಿದ್ದರು.
ಕಾರ್ಯಕ್ರಮ ಮುಗಿಸಿ ತೆರಳುವಾಗ ಸಿಕ್ಕಿಬಿದ್ದ ಆಸ್ಕರ್ ವಿಜೇತ
ಅದ್ಧೂರಿ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ವಾಪಸ್ ತೆರಳುವಾಗ ರೆಹಮಾನ್ಗೆ ಅಸಲಿ ಟ್ರಾಫಿಕ್ ದರ್ಶನವಾಗಿದೆ. ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದ ನೂರಾರು ವಾಹನಗಳ ಮಧ್ಯೆ ಅವರ ಕಾರು ಕೂಡ ಜಾಮ್ನಲ್ಲಿ ಸಿಲುಕಿಕೊಂಡಿದೆ. ಎಷ್ಟೇ ಹೊತ್ತಾದರೂ ವಾಹನಗಳು ಮುಂದೆ ಸಾಗದೇ ರೆಹಮಾನ್ ಕಾರಿನಲ್ಲೇ ಕಾಯುವಂತಾಯಿತು.
ಕಾರಿನ ಬಳಿ ಬಂದು ವಿಡಿಯೋ ಸೆರೆಹಿಡಿದ ಅಭಿಮಾನಿಗಳು
ಕಾರಿನಲ್ಲಿ ಕುಳಿತಿದ್ದ ಎ.ಆರ್. ರೆಹಮಾನ್ ಅವರನ್ನು ತಕ್ಷಣವೇ ರಸ್ತೆಯಲ್ಲಿದ್ದ ಅಭಿಮಾನಿಗಳು ಗುರುತಿಸಿದ್ದಾರೆ. ಕೂಡಲೇ ಅವರ ಕಾರಿನ ಬಳಿ ತೆರಳಿ ತಮ್ಮ ಮೊಬೈಲ್ಗಳಲ್ಲಿ ವಿಡಿಯೋವನ್ನು ಸೆರೆಹಿಡಿದುಕೊಂಡಿದ್ದಾರೆ. ಅಭಿಮಾನಿಗಳ ಉತ್ಸಾಹವನ್ನು ಕಂಡು ರೆಹಮಾನ್ ಕೂಡ ಮುಗುಳ್ನಗುತ್ತಾ ಬೆರಗಾಗಿ ಪ್ರತಿಕ್ರಿಯಿಸಿದ್ದಾರೆ.
AR Rahman: ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆದ ವಿಡಿಯೋಗಳು
ಅಭಿಮಾನಿಗಳು ಸೆರೆಹಿಡಿದ ಈ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ನೆಟ್ಟಿಗರು ಬೆಂಗಳೂರು ಟ್ರಾಫಿಕ್ ನೆನೆದು ನಾನಾ ರೀತಿಯಲ್ಲಿ ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. “ಬೆಂಗಳೂರು ಟ್ರಾಫಿಕ್ ಸಾಧಾರಣ ಜನರಿಗಷ್ಟೇ ಅಲ್ಲ, ಆಸ್ಕರ್ ವಿಜೇತರಿಗೂ ಒಂದೇ” ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.




