☔ Weather
Bengaluru: 🌧️ 27°C | AQI 59
Mysore: 🌤️ 30°C | AQI 63
Mangalore: ☁️ 34°C | AQI 74
Bengaluru: 🌧️ 27°C | AQI 59

Pavithra Gowda: ಕೋರ್ಟ್‌ನಿಂದ ದಿಢೀರ್ ಬೆಳವಣಿಗೆ; ಇಂದೇ ಹೊರಬೀಳುತ್ತಾ ಜಾಮೀನು ಆದೇಶ?

Pavithra Gowda: Verdict Expected Today?

Pavithra Gowda: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಜೈಲಿನಲ್ಲಿರುವ ಮೊದಲ ಆರೋಪಿ ಪವಿತ್ರಾ ಗೌಡ (Pavithra Gowda) ಅವರ ಜಾಮೀನು ಅರ್ಜಿಯ ವಿಚಾರಣೆಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಜಾಮೀನು ಅರ್ಜಿಯ ವಾದ-ಪ್ರತಿವಾದಗಳು ಪೂರ್ಣಗೊಂಡಿದ್ದರಿಂದ ಶುಕ್ರವಾರವೇ ಆದೇಶ ಪ್ರಕಟವಾಗುವ ನಿರೀಕ್ಷೆ ಇತ್ತು. 

ಆದರೆ 59ನೇ ಸಿಸಿಹೆಚ್ ನ್ಯಾಯಾಲಯದ (CCH Court) ನ್ಯಾಯಾಧೀಶರು ಗೈರಾಗಿದ್ದ ಕಾರಣ ಆದೇಶವನ್ನು ಸೋಮವಾರಕ್ಕೆ ಕಾಯ್ದಿರಿಸಲಾಗಿತ್ತು. ಆದರೆ ಈಗ ಜಾಮೀನು ಅರ್ಜಿಯ ತೀರ್ಪು ಇಂದೇ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ವಾದ ಪ್ರತಿವಾದ ಆಲಿಸಿದ ಕೋರ್ಟ್ ಸೋಮವಾರದ ಬದಲಾಗಿ ಇಂದೇ ತೀರ್ಪು ಪ್ರಕಟಿಸುತ್ತಾ ಎಂಬ ಕುತೂಹಲ ಹೆಚ್ಚಾಗಿದೆ. ಜೈಲಿನಲ್ಲಿರುವ ಪವಿತ್ರಾ ಗೌಡ ಅವರ ಭವಿಷ್ಯ ಇಂದು ನಿರ್ಧಾರವಾಗಲಿದೆಯಾ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. 

ವಕೀಲರ ಪ್ರಮುಖ ವಾದ: ಮಗಳ ಭವಿಷ್ಯ ಮತ್ತು ಸಾಕ್ಷಿಗಳ ವಿಚಾರಣೆ

ಪವಿತ್ರಾ ಗೌಡ ಪರ ಹಿರಿಯ ವಕೀಲ ಬಾಲನ್ ಹಾಗೂ ವಕೀಲ ನಾರಾಯಣಸ್ವಾಮಿ ಅವರು ಕೋರ್ಟ್‌ನಲ್ಲಿ ಸುದೀರ್ಘ ವಾದ ಮಂಡಿಸಿದ್ದಾರೆ. ಪ್ರಕರಣದ ಪ್ರಮುಖ ಸಾಕ್ಷಿಗಳ ವಿಚಾರಣೆ ಬಹುತೇಕ ಪೂರ್ಣಗೊಂಡಿರುವುದನ್ನು ರಕ್ಷಣಾ ತಂಡ ನ್ಯಾಯಾಲಯದ ಗಮನಕ್ಕೆ ತಂದಿದೆ. 

ಸಾಕ್ಷಿಗಳ ವಿಚಾರಣೆ ಮುಗಿದಿರುವುದರಿಂದ ಪವಿತ್ರಾ ಗೌಡ ಹೊರಗೆ ಬಂದರೂ ಸಾಕ್ಷ್ಯಗಳ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದು ವಾದಿಸಲಾಗಿದೆ. ಜೊತೆಗೆ ತಮ್ಮ ಮಗಳ ವಿದ್ಯಾಭ್ಯಾಸ ಹಾಗೂ ಆಕೆಯ ಭವಿಷ್ಯವನ್ನು ಪರಿಗಣಿಸಿ ಜಾಮೀನು ನೀಡಬೇಕು ಎಂದು ಮನವಿ ಮಾಡಲಾಗಿದೆ. 

Pavithra Gowda: ಜೈಲಿನಲ್ಲಿ ಕಣ್ಣೀರಿಟ್ಟಿದ್ದ ಪವಿತ್ರಾ; ಬ್ಯಾರಕ್ ಬದಲಾವಣೆ

ಜಾಮೀನು ವಿಚಾರಣೆ ವೇಳೆ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ವಿಚಾರವೂ ಚರ್ಚೆಗೆ ಬಂದಿದೆ. ಈ ಹಿಂದೆ ಸೆಪ್ಟೆಂಬರ್ 22ರ ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಪವಿತ್ರಾ ಗೌಡ ಕಣ್ಣೀರಿಟ್ಟಿದ್ದರು. 

ಜೈಲಿನಲ್ಲಿನ ಭದ್ರತೆ ಹಾಗೂ ಬ್ಯಾರಕ್‌ನ ಪರಿಸ್ಥಿತಿಯಿಂದ ಕಕ್ಷಿದಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಕೀಲರು ತಿಳಿಸಿದ್ದರು. ಪವಿತ್ರಾ ಗೌಡ ಅವರ ಮನವಿಯಂತೆ ಬಳಿಕ ಅವರನ್ನು ಕಡಿಮೆ ಸಂಖ್ಯೆಯ ಕೈದಿಗಳಿರುವ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ.