☔ Weather
Bengaluru: ☁️ 20°C | AQI 59
Mysore: ☁️ 22°C | AQI 63
Mangalore: ☁️ 26°C | AQI 68
Bengaluru: ☁️ 20°C | AQI 59

Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿ ಟ್ವಿಸ್ಟ್; ಹೈಕೋರ್ಟ್ ಜಡ್ಜ್ ಹೇಳಿದ್ದೇನು?

Darshan Case: High Court Reacts to Approver Argument

ರೇಣುಕಾಸ್ವಾಮಿ ಕೊಲೆ Renukaswamy Case) ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಕೋರ್ಟ್‌ನಲ್ಲಿ ಮಾಫಿ ಸಾಕ್ಷಿ ಮುಂದೂಡಿಕೆ ಸಂಬಂಧ ದರ್ಶನ್ (Darshan Case) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ನಟ ದರ್ಶನ್ ಪರವಾಗಿ ಹಿರಿಯ ವಕೀಲ ಹಷ್ಮತ್ ಪಾಷಾ (Hashmath Pasha) ಖಡಕ್ ವಾದ ಮಂಡಿಸಿದ್ದಾರೆ.

ಈ ಪ್ರಕರಣದಲ್ಲಿ 14ನೇ ಆರೋಪಿ ಪ್ರದೂಷ್ (Pradosh) ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾನೆ. ಆದರೆ ಆತ ಇತರರ ಪ್ರಭಾವಕ್ಕೆ ಒಳಗಾಗಿದ್ದಾನೆ ಎಂದು ದರ್ಶನ್ ಪರ ವಕೀಲರು ವಾದಿಸಿದ್ದಾರೆ. ಸೆಪ್ಟೆಂಬರ್ 16ರ ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.

ಪ್ರದೂಷ್ ಜೈಲಿನಲ್ಲಿ ಅನಧಿಕೃತವಾಗಿ ಮೊಬೈಲ್ ಬಳಕೆ ಮಾಡಿದ್ದಾನೆ. ಇದಕ್ಕೆ ಜೈಲಿನ ಸಿಬ್ಬಂದಿ ಸಹಕಾರ ನೀಡಿದ್ದು, ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ವಕೀಲರು ವಾದಿಸಿದರು. ಆದರೆ ಹೈಕೋರ್ಟ್ ಈ ವಾದಗಳಿಗೆ ಮಹತ್ವದ ಪ್ರತ್ಯುತ್ತರ ನೀಡಿದೆ.

Darshan Case: ಮೊಬೈಲ್ ಬಳಕೆ ವಿಚಾರದಲ್ಲಿ ಜಡ್ಜ್ ನೀಡಿದ ಉತ್ತರ

ಅರ್ಜಿ ಸಲ್ಲಿಕೆಗೂ ಮುನ್ನ ಯಾವುದೇ ಮೊಬೈಲ್ ಬಳಕೆ ಆಗಿಲ್ಲ. ಅರ್ಜಿ ಸಲ್ಲಿಕೆಯಾದ ನಂತರ ಮೊಬೈಲ್ ಬಳಕೆ ಕಂಡುಬರುತ್ತಿದೆ ಎಂದು ನ್ಯಾಯಾಧೀಶರು ಹೇಳಿದರು. ಆಗಸ್ಟ್ 5ಕ್ಕೆ ಮೊದಲು ಆರೋಪಿ ಮೊಬೈಲ್ ಬಳಕೆಯ ಬಗ್ಗೆ ಪ್ರಶ್ನೆ ಉದ್ಭವಿಸಿಲ್ಲ. ಈ ಬಗ್ಗೆ ನೀವು ಸಾಕ್ಷಿಯನ್ನೇ ಪಾಟೀಸವಾಲು ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಮಾಫಿ ಸಾಕ್ಷಿಯಾಗಲು ಆರೋಪಿಗೆ ಯಾವುದೇ ನಿರ್ಬಂಧವಿಲ್ಲ

ನೀವು ಹಿಂದಿನ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿಲ್ಲ. ಹೈಕೋರ್ಟ್ ಆದೇಶ ಪರಿಗಣಿಸಿ ಟ್ರಯಲ್ ಕೋರ್ಟ್ ಆದೇಶ ನೀಡಿದೆ. ಮಾಫಿ ಸಾಕ್ಷಿಯಾಗಲು ಆರೋಪಿಗೆ ಯಾವುದೇ ನಿರ್ಬಂಧಗಳಿಲ್ಲ ಎಂದು ನ್ಯಾಯಮೂರ್ತಿ ವಿ. ಶ್ರೀಶಾನಂದ ಸ್ಪಷ್ಟಪಡಿಸಿದ್ದಾರೆ.

ಮಾಫಿ ಸಾಕ್ಷಿಯನ್ನು ಪ್ರಶ್ನಿಸುವ ಹಕ್ಕು ಸಹ ಆರೋಪಿಗಿಲ್ಲ

ಮಾಫಿ ಸಾಕ್ಷಿ ವಿಚಾರದಲ್ಲಿ ಸಹ ಆರೋಪಿಗೆ ಪ್ರಶ್ನಿಸುವ ಹಕ್ಕಿಲ್ಲ. ನೈಜ ಆರೋಪಿಗೆ ಅನುಕೂಲವಾಗಲು ಮಾಫಿ ಸಾಕ್ಷಿಯಾಗುತ್ತಿದ್ದಾರಾ ಎಂಬುದನ್ನು ಕೋರ್ಟ್ ಪರಿಶೀಲಿಸುತ್ತದೆ. ಇದು ಕೋರ್ಟ್ ಹಾಗೂ ಆರೋಪಿ ನಡುವೆ ನಡೆಯುವ ಕಾಂಟ್ರಾಕ್ಟ್ ಎಂದು ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.

ಪಾಟೀಸವಾಲು ನಡೆಸಲು ಪೂರ್ಣ ಹಕ್ಕಿದೆ ಎಂದ ಕೋರ್ಟ್

ನಿಮಗೆ ಮಾಫಿ ಸಾಕ್ಷಿಯನ್ನು ಪಾಟೀಸವಾಲಿಗೆ ಒಳಪಡಿಸುವ ಪೂರ್ಣ ಹಕ್ಕಿದೆ. ಯಾವ ಪ್ರಶ್ನೆ ಕೇಳಿ ಅವನ ಸ್ಥಿತಿ ತೋರಿಸಬೇಕೆಂಬುದು ನಿಮಗೆ ತಿಳಿದಿದೆ. ಇಲ್ಲಿಯವರೆಗೆ ಆತ ಏನು ಮಾಡುತ್ತಿದ್ದ ಎಂಬುದನ್ನು ನೇರವಾಗಿ ಪ್ರಶ್ನಿಸಬಹುದು ಎಂದು ಜಡ್ಜ್ ಹೇಳಿದರು.

ವಾದಿಸಲು ಸಾಕಷ್ಟು ಅವಕಾಶವಿದೆ ಎಂದ ಪೀಠ

ನಿಮ್ಮ ಕಕ್ಷಿದಾರರು ನಿಮ್ಮ ಸುರಕ್ಷಿತ ಕೈಗಳಲ್ಲಿದ್ದಾರೆ. ನೀವು ಕ್ರಾಸ್ ಎಗ್ಸಾಮಿನೇಷನ್ ವೇಳೆ ಎಲ್ಲವನ್ನೂ ಪ್ರಶ್ನಿಸಬಹುದು. ಪ್ರದೂಷ್ ನೀಡುವ ಹೇಳಿಕೆಯ ಪ್ರತಿಯೊಂದು ಅಂಶವನ್ನು ಪ್ರಶ್ನಿಸಲು ಅವಕಾಶವಿದೆ. ಮಾಫಿ ಸಾಕ್ಷಿ ವಿಶ್ವಾಸಾರ್ಹವಲ್ಲ ಎಂಬುದನ್ನು ನೀವು ವಾದಿಸಬಹುದು ಎಂದು ಹೈಕೋರ್ಟ್ ಪೀಠ ಹೇಳಿದೆ.