ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ‘ಬೆತ್ಲೆಹೆಮ್ ಕುಟುಂಬ ಯೂನಿಟ್’; ‘ಆಲ್ ಟೈಮ್ ಇಂಡಸ್ಟ್ರಿ ಹಿಟ್’

bethlehem-kudumba-unit-box-office-collection

ಇಡೀ ದೇಶದಲ್ಲಿ ಕಂಟೆಂಟ್‌ನಿಂದ ಗಮನ ಸೆಳೆಯುತ್ತಿರೋದು ಮಲಯಾಳಂ ಚಿತ್ರರಂಗ. ಕಡಿಮೆ ಬಜೆಟ್‌ನಲ್ಲಿ ವಿಭಿನ್ನ ಕಥೆಗಳನ್ನು ಹೊತ್ತು ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುತ್ತಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಮಾಲಿವುಡ್ ಹಲವು ಸೂಪರ್‌ ಹಿಟ್ ಸಿನಿಮಾಗಳನ್ನು ಕೊಟ್ಟಿದೆ. ಈ ವರ್ಷ ಮತ್ತೊಂದು ಸಾರ್ವಕಾಲಿಕ ದಾಖಲೆ ಬರೆದ ಸಿನಿಮಾ ನೀಡಿದೆ. ಅದುವೇ ‘ಬೆತ್ಲೆಹೆಮ್ ಕುಟುಂಬ ಯೂನಿಟ್’ (Bethlehem Kudumba Unit).

ಹೌದು, ಮಲಯಾಳಂನ ಸ್ಟಾರ್ ನಟ ನಿವಿನ್ ಪೌಲಿ ನಟಿಸಿದ ‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ನಿವಿನ್ ಪೌಲಿ ಜೊತೆ ಮಮಿತಾ ಬೈಜು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇವರಿಬ್ಬರ ಜೋಡಿ ತೆರೆಮೇಲೆ ಮೋಡಿ ಮಾಡಿದೆ. ‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಬರೆದು ಈ ಹಿಂದಿನ ದಾಖಲೆಗಳನ್ನೆಲ್ಲ ಉಡೀಸ್ ಮಾಡಿದೆ.

ಮಲಯಾಳಂ ಚಿತ್ರರಂಗದ ಬಾಕ್ಸ್ ಆಫೀಸ್ ಇತಿಹಾಸದಲ್ಲಿ ಇದೀಗ ನೂತನ ದಾಖಲೆ ನಿರ್ಮಾಣವಾಗಿದೆ. ನಟ ನಿವಿನ್ ಪೌಲಿ ಹಾಗೂ ನಟಿ ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಚಲನಚಿತ್ರವು ವಿಶ್ವಾದ್ಯಂತ ₹304.95

ಕೋಟಿಗೂ ಅಧಿಕ ಗಳಿಕೆ ಮಾಡುವ ಮೂಲಕ

‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಮಲಯಾಳಂ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ಗಳಿಕೆ ಕಂಡ ‘ಆಲ್ ಟೈಮ್ ಇಂಡಸ್ಟ್ರಿ ಹಿಟ್’ ಎನಿಸಿಕೊಂಡಿದೆ. ಇದೂವರೆಗೂ ಈ ಸಿನಿಮಾ ವಿಶ್ವಾದ್ಯಂತ ₹304.95 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಗಿರೀಶ್ ಎ.ಡಿ ನಿರ್ದೇಶಿಸಿದ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಬಿಡುಗಡೆಯಾದ ಕೇವಲ 24 ದಿನಗಳಲ್ಲಿ ₹300 ಕೋಟಿ ಗಡಿ ದಾಟಿ ದಾಖಲೆ ಸೃಷ್ಟಿಸಿದೆ.

ಇದನ್ನೂ ಓದಿ: JAGAMAE SANGEETHAM: ಸಂಗೀತ ಪ್ರಿಯರಿಗೆ ‘ಪ್ರೈಮ್’ ಸರ್ಪ್ರೈಸ್; ಚಿರಂಜೀವಿ ಮಗಳ ವೆಬ್ ಸರಣಿಗೆ ಪ್ರಕಾಶ್ ರಾಜ್ ಹೀರೋ

ನಿವಿನ್ ಪೌಲಿಯ ಈ ಸಿನಿಮಾ ಅವರದ್ದೇ ಚಿತ್ರರಂಗದ ಕೆಲವು ಸಿನಿಮಾಗಳ ದಾಖಲೆಯನ್ನು ಹಿಂದಿಕ್ಕಿದೆ. ಕಲ್ಯಾಣಿ ಪ್ರಿಯದರ್ಶನ್ ನಟನೆಯ ‘ಲೋಕಾ Chapter 1: ಚಂದ್ರ’ ಬಾಕ್ಸಾಫೀಸ್‌ನಲ್ಲಿ ₹301.41 ಕೋಟಿ ಕಲೆಕ್ಷನ್ ಮಾಡಿತ್ತು. ‘ಲೋಕಾ’ ಈ ಮೈಲಿಗಲ್ಲನ್ನು ದಾಟಲು ಸುಮಾರು 45 ದಿನಗಳನ್ನು ತೆಗೆದುಕೊಂಡಿತ್ತು. ಆದರೆ ‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಕೇವಲ 24 ದಿನಗಳಲ್ಲೇ ಈ ಸಾಧನೆ ಮಾಡಿದೆ.

‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಬಾಕ್ಸ್ ಆಫೀಸ್ ರಿಪೋರ್ಟ್


ಕೇರಳ ರಾಜ್ಯದ ಗಳಿಕೆ (Kerala Collection)- ₹131.00 ಕೋಟಿ
ಭಾರತದಾದ್ಯಂತ ಒಟ್ಟು ಮೊತ್ತ (India Gross)- ₹157.47 ಕೋಟಿ
ವಿಶ್ವಾದ್ಯಂತ ಒಟ್ಟು ಗಳಿಕೆ (Worldwide Gross)- ₹304.95 ಕೋಟಿ (Overall Collection)

ಈ ಸಿನಿಮಾವನ್ನು ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಭಾವನಾ ಸ್ಟುಡಿಯೋಸ್ ಹಾಗೂ ಬಾಸುಂದಿ ಬ್ಯಾನರ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಕೇವಲ 25 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದ ಸಿನಿಮಾ, ಹೂಡಿಕೆ ಮಾಡಿದ್ದಕ್ಕಿಂತ 12 ಪಟ್ಟು ಹೆಚ್ಚು ಲಾಭ ತಂದುಕೊಟ್ಟಿದೆ.

‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಮೊದಲ ವಾರದಲ್ಲಿ ₹52.30 ಕೋಟಿ ಗಳಿಸಿದ್ರೆ, ಎರಡನೇ ವಾರದಲ್ಲಿ ₹49.85 ಕೋಟಿ ಕಲೆಕ್ಷನ್ ಮಾಡಿತ್ತು. ಅದೇ ಮೂರನೇ ವಾರದಲ್ಲಿ ₹33.30 ಕೋಟಿ ಗಳಿಸಿ ಮಲಯಾಳಂ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆಯುತ್ತಿದೆ.

ಮಲಯಾಳಂ ನಟ ನಿವಿನ್ ಪೌಲಿ ಕಳೆದ ಕೆಲವು ವರ್ಷಗಳಿಂದ ಇಂತಹದ್ದೊಂದು ಯಶಸ್ಸಿಗಾಗಿ ಕಾಯುತ್ತಿದ್ದರು. ಈ ಸಿನಿಮಾ ನಿವಿನ್ ಪೌಲಿಗೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿಸಿದೆ. ರೊಮ್ಯಾಂಟಿಕ್-ಕಾಮಿಡಿ ಜಾನರ್ ಸಿನಿಮಾ ಆಗಿದ್ದರಿಂದ ಪ್ರೇಕ್ಷಕರು ಕುಟುಂಬ ಸಮೇತ ಚಿತ್ರಮಂದಿರಕ್ಕೆ ಆಗಮಿಸಿ ವೀಕ್ಷಿಸುತ್ತಿದ್ದಾರೆ.