ಈ ಪವಿತ್ರ ತೆಂಗನಕಾಯಿ ₹8 ಲಕ್ಷಕ್ಕೆ ಹರಾಜು; ಏನಿದರ ವಿಶೇಷತೆ ಗೊತ್ತೇ?

Lakshmana Siddappa Kurani purchased holy coconut for Rs 8 Lakhs in Bagalkot

ಬಾಗಲಕೋಟೆ: ಜನಪ್ರಿಯ ವ್ಯಕ್ತಿಗಳು ಬಳಸಿದ ವ್ಯಕ್ತಿಗಳು, ಫೇಮಸ್ ವಸ್ತುಗಳು ದೊಡ್ಡ ಮೊತ್ತಕ್ಕೆ ಹರಾಜು ಆಗಿದ್ದನ್ನು ನೋಡಿದ್ದೇವೆ. ವಿಶ್ವದ ಮೂಲೆ ಮೂಲೆಯಲ್ಲಿ ನೂರಾರು ಕೋಟಿ ಕೋಟಿ ಖರೀದಿ ಮಾಡಿದ್ದನ್ನು ಕೇಳಿದ್ದೇವೆ. ಆದರೆ, ಬಾಗಲಕೋಟೆಯ ಗ್ರಾಮವೊಂದರಲ್ಲಿ ದೇವರ ಗದ್ದುಗೆ ಮೇಲಿದ್ದ ಪವಿತ್ರ ತೆಂಗಿನಕಾಯಿ ದಾಖಲೆ ಮೊತ್ತಕ್ಕೆ ಹರಾಜು ಆಗಿದೆ. ಅದೂ ಬರೋಬ್ಬರು 8 ಲಕ್ಷ ರೂಪಾಯಿಗೆ. ಅಷ್ಟಕ್ಕೂ ಈ ತೆಂಗಿನಕಾಯಿಗೆ ಯಾಕಿಷ್ಟು ಬೆಲೆ? ಇದರ ವಿಶೇಷತೆ ಏನು? ಇಲ್ಲಿದೆ ಫುಲ್ ಡಿಟೈಲ್ಸ್.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ಮಾಳಿಂಗರಾಯ ದೇವರ ಜಾತ್ರಾ ಮಹೋತ್ಸವ ಇತ್ತೀಚೆಗೆ ನಡೆದಿತ್ತು. ಮೊದಲಿನಿಂದಲೂ ಈ ಜಾತ್ರೆ ಅದ್ಧೂರಿಯಾಗಿ ನಡೆಯುತ್ತೆ. ಈ ಬಾರಿ ತೆಂಗಿನಕಾಯಿ ದಾಖಲೆ ಮೊತ್ತಕ್ಕೆ ಹರಾಜು ಆಗಿದ್ದಕ್ಕೆ ರಾಜ್ಯದ ಗಮನ ಸೆಳೆಯುತ್ತಿದೆ. ಸನಾಳ ಗ್ರಾಮದ ಭಕ್ತ ಲಕ್ಷ್ಮಣ ಸಿದ್ದಪ್ಪ ಕುರಣಿ ಎಂಬುವವರು ಈ ಪವಿತ್ರ ತೆಂಗಿನಕಾಯಿಯನ್ನು ಖರೀದಿ ಮಾಡಿದ್ದಾರೆ.

ಹೌದು,ಬಾಗಲಕೋಟೆ ಮಾಳಿಂಗರಾಯ ಗದ್ದುಗೆ ಮೇಲಿನ ತೆಂಗಿನಕಾಯಿ ದಾಖಲೆ ಮೊತ್ತಕ್ಕೆ ಹರಾಜು ಆಗಿದೆ. ಅದೂ ಬರೋಬ್ಬರಿ 8,00,001 ರೂಪಾಯಿಗೆ ಲಕ್ಷ್ಮಣ ಸಿದ್ದಪ್ಪ ಕುರಣಿ ಈ ಪವಿತ್ರ ತೆಂಗಿನಕಾಯಿಯನ್ನು ಖರೀದಿ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತದೆ.

ಮಾಳಿಂಗರಾಯ ಗದ್ದುಗೆ ಮೇಲಿನ ಪವಿತ್ರ ತೆಂಗಿನಕಾಯಿ ಹರಾಜಿನಲ್ಲಿ ಮೂವರು ತೀವ್ರ ಪೈಪೋಟಿ ಮಾಡಿದರು. ತಿಕೋಟಾ ಗ್ರಾಮದ ಮಹಾವೀರ ಹರಕೆ, ಚಿಕ್ಕಲಕಿ ಗ್ರಾಮದ ಸದಾಶಿವ ಎಮ್ಮೇನ್ನವರ, ಸನಾಳ ಗ್ರಾಮದ ಲಕ್ಷ್ಮಣ ಸಿದ್ದಪ್ಪ ಕುರಣಿ ನಡುವೆ ತ್ರಿಕೋನ ಸ್ಪರ್ಧೆ ನಡೆದಿತ್ತು. ಅಂತಿಮವಾಗಿ ಇದು ಲಕ್ಷ್ಮಣ ಸಿದ್ದಪ್ಪ ಕುರಣಿ ಪಾಲಾಯಿತು.

ಶ್ರಾವಣ ಮಾಸ ಪೂರ್ತಿ ಗದ್ದುಗೆ ಮೇಲಿಟ್ಟು ವಿಶೇಷ ಪೂಜೆ ಮಾಡಿದ್ದು, ಈ ಕಾಯಿ ತೆಗೆದುಕೊಂಡರೇ ವಿಶೇಷ ಆಶೀರ್ವಾದ ಸಿಗುತ್ತದೆ. ತಮಗೆ, ತಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತೆ ಎಂಬ ನಂಬಿಕೆಯಿದೆ. ಹೀಗಾಗಿ ಈ ಪ್ರವಿತ್ರ ಖಾಯಿ ಖರೀದಿಗೆ ಮುಂದಾಗಿದ್ದರು.

ಅಂದ್ಹಾಗೆ, 2019ರಲ್ಲಿ ಈ ಪವಿತ್ರ ತೆಂಗಿನಕಾಯಿ 6,50,001 ರೂಪಾಯಿಗೆ ಹರಾಜಾಗಿತ್ತು. ಅದೇ 2025 ರಲ್ಲಿ 5,70,000 ರೂಪಾಯಿಗೆ ಹರಾಜಾದರೆ, ಈ ಬಾರಿ (2026) 8,00,001ರೂಪಾಯಿಗೆ ಹರಾಜಾಗಿ ದಾಖಲೆ ಬರೆದಿದೆ.