ಐಹೊಳೆಯ ವಾಡೆ ಮನೆಯಲ್ಲಿ ಹೊಸ ಟ್ವಿಸ್ಟ್; ವೈಲ್ಡ್ ಕಾರ್ಡ್ ಎಂಟ್ರಿ ಧಮಾಕಾ

ಹಳ್ಳಿ ಪವರ್ ಶೋಗೆ ವೈಲ್ಡ್ ಕಾರ್ಡ್ ಎಂಟ್ರಿ

@zeekannada (Instagram)

ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಹಳ್ಳಿ ಪವರ್ ರೀಲೋಡೆಡ್’ ದಿನದಿಂದ ದಿನಕ್ಕೆ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸುತ್ತಿದೆ. ಐಹೊಳೆಯ ಐತಿಹಾಸಿಕ ಮಣ್ಣಿನಲ್ಲಿ ನಡೆಯುತ್ತಿರುವ ಈ ಶೋನಲ್ಲಿ ಇದೀಗ ದೊಡ್ದದೊಂದು ಬಿಗ್ ಟ್ವಿಸ್ಟ್ ಎದುರಾಗಿದೆ.

ವಾಡೆ ಮನೆಯಲ್ಲಿ ನೆಲೆಸಿರುವ ಸಿಟಿ ಹುಡುಗಿಯರು ಇನ್ನು ಆಟಕ್ಕೆ ಸರಿಯಾಗಿ ಹೊಂದಿಕೊಳ್ಳುವಷ್ಟರಲ್ಲೇ ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಈ ಹಠಾತ್ ಬೆಳವಣಿಗೆಯನ್ನು ನೋಡಿ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳು ಸಂಪೂರ್ಣವಾಗಿ ಶಾಕ್ ಆಗಿದ್ದಾರೆ.

ಬಿಡುಗಡೆಯಾಗಿರುವ ಹೊಸ ಪ್ರೋಮೋದಲ್ಲಿ ಈ ವೈಲ್ಡ್ ಕಾರ್ಡ್ ಆಗಮನವನ್ನು ತೋರಿಸಲಾಗಿದ್ದು, ವಾಡೆ ಮನೆಯಲ್ಲಿ ಇಂದಿನಿಂದ ಆಟ ಮತ್ತಷ್ಟು ರಂಗೇರುವುದು ಖಚಿತವಾಗಿದೆ. ಪ್ರೇಕ್ಷಕರಿಗೂ ಈ ಹೊಸ ಸ್ಪರ್ಧಿಗಳ ಕುರಿತು ಕಾತುರ ಹೆಚ್ಚಾಗಿದೆ.

ಎತ್ತಿನ ಬಂಡಿಯಲ್ಲಿ ಬಂದ ಹೊಸ ಸ್ಪರ್ಧಿಗಳು: ಮುಖ ಮುಚ್ಚಿ ರಹಸ್ಯ ಕಾಯ್ದುಕೊಂಡ ವಾಹಿನಿ

ಮನೆಯ ಅಂಗಳಕ್ಕೆ ದೇಶಿ ಶೈಲಿಯಲ್ಲಿ ಎತ್ತಿನ ಬಂಡಿ ಏರಿಯೇ ಈ ಹೊಸ ವೈಲ್ಡ್ ಕಾರ್ಡ್ ಹುಡುಗಿಯರು ಆಗಮಿಸಿದ್ದಾರೆ. ಸುಮಾರು ನಾಲ್ಕು ಜನ ಹೊಸ ಅಭ್ಯರ್ಥಿಗಳು ವಾಡೆ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.

ಪ್ರೋಮೋದಲ್ಲಿ ಹೊಸಬರ ಮುಖಗಳನ್ನು ಗುಟ್ಟಾಗಿ ಇಡಲಾಗಿದ್ದು, ಸ್ಪರ್ಧಿಗಳ ಆಘಾತಕಾರಿ ಮುಖಭಾವಗಳನ್ನು ಮಾತ್ರ ತೋರಿಸಲಾಗಿದೆ. ಸ್ಪರ್ಧಿ ನಿವೇದಿತಾ ಮುಗುಳ್ನಕ್ಕರೆ, ಪೂಜಾ ಮಾತಿಲ್ಲದೆ ಸೈಲೆಂಟ್ ಆಗಿ ನಿಂತುಬಿಟ್ಟಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಮನೆಯಿಂದ ಎಲಿಮಿನೇಟ್ ಆಗಿ ವಾಪಾಸ್ ಬಂದಿದ್ದ ಬಿಬಿ ಕೂಡ ಈ ವೈಲ್ಡ್ ಕಾರ್ಡ್ ಎಂಟ್ರಿ ನೋಡಿ ತೀವ್ರ ಅಚ್ಚರಿಗೆ ಒಳಗಾಗಿದ್ದಾರೆ. ಹೊಸಬರ ಆಗಮನದಿಂದ ಹಳೆಯ ಸ್ಪರ್ಧಿಗಳಲ್ಲಿ ನಡುಕ ಶುರುವಾಗಿದೆ.

ರಾಣಿ ಪಟ್ಟದ ಸವಾಲು: ಗಾನವಿ ಹಾದಿಯಲ್ಲಿ ಮಿಂಚಲಿದ್ದಾರೆಯೇ ಹೊಸಬರು?

ಐಹೊಳೆಯ ಜನರ ಪ್ರೀತಿ ಗಳಿಸಿರುವ ಈ ಶೋನಲ್ಲಿ ಈಗಾಗಲೇ ಮೂವರು ಅಭ್ಯರ್ಥಿಗಳು ರಾಣಿ ಪಟ್ಟ ಏರಿದ್ದಾರೆ. ಮೊದಲು ಪೂಜಾ, ನಂತರ ನಿವೇದಿತಾ ಹಾಗೂ ಬೆಂಗಾಲಿ ಬೆಡಗಿ ರಿಗ್ಮಾ ರಾಣಿಯಾಗಿ ಅರ್ಹತೆ ಗಿಟ್ಟಿಸಿಕೊಂಡಿದ್ದರು.

ಕಳೆದ ಆವೃತ್ತಿಯಲ್ಲೂ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ಘಾಟಿ ಗಾನವಿ ಕೊನೆಯವರೆಗೂ ಹೋರಾಡಿ ಸೆಕೆಂಡ್ ರನ್ನರ್ ಅಪ್ ಆಗಿದ್ದರು. ಅದೇ ಮಾದರಿಯಲ್ಲಿ ಈ ಬಾರಿ ಬಂದಿರುವ ನಾಲ್ವರು ಸಿಟಿ ಹುಡುಗಿಯರು ಎಷ್ಟರ ಮಟ್ಟಿಗೆ ಕಮಾಲ್ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಹೊಸ ಸ್ಪರ್ಧಿಗಳ ಸೇರ್ಪಡೆಯಿಂದಾಗಿ ವಾಡೆ ಮನೆಯಲ್ಲಿ ಅಧಿಕಾರ ಮತ್ತು ಆಟದ ವಾತಾವರಣ ಸಂಪೂರ್ಣವಾಗಿ ಬದಲಾಗಲಿದೆ. ಈ ಹೊಸ ವೈಲ್ಡ್ ಕಾರ್ಡ್ ಆಟವನ್ನು ವೀಕ್ಷಿಸಲು ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.