ಹತ್ತನೇ ತರಗತಿ ಓದಿರುವವರಿಗೆ ಸುವರ್ಣಾವಕಾಶ, 23 ಸಾವಿರಕ್ಕೂ ಹೆಚ್ಚು ಉದ್ಯೋಗಗಳಿಗಾಗಿ ಅರ್ಜಿ ಆಹ್ವಾನ ಮಾಡಲಾಗಿದೆ. ಯಾವುದೇ ಪರೀಕ್ಷೆ ಇರುವುದಿಲ್ಲ, ಯಾವುದೇ ಸಂದರ್ಶನ ಇರುವುದಿಲ್ಲ. ಅರ್ಜಿ ಹಾಕಿ, ಮೆರಿಟ್ ಆಧಾರದ ಮೇಲೆ ಕೆಲಸ ಗಿಟ್ಟಿಸಿಕೊಳ್ಳಿ. ಇಲ್ಲಿದೆ ನೋಡಿ ಮಾಹಿತಿ…
ಭಾರತೀಯ ಅಂಚೆ ಇಲಾಖೆಯು, ಗ್ರಾಮೀಣ ಡಾಕ್ ಸೇವಕ್ (ಪೋಸ್ಟ್ ಮ್ಯಾನ್) ನೇಮಕಾತಿಗಾಗಿ ನೋಟಿಫಿಕೇಶನ್ ಹೊರಡಿಸಿದೆ. ಕೇಂದ್ರ ಸಂವಹನ ಇಲಾಖೆ (ಮಿನಿಸ್ಟ್ರಿ ಆಫ್ ಕಮ್ಯುನಿಕೇಶನ್) ಈ ನೋಟೀಸ್ ಅನ್ನು ಹೊರಡಿಸಿದ್ದು ಗ್ರಾಮೀಣ ಡಾಕ್ ಸೇವಕ್, ಬ್ರ್ಯಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್ ಹುದ್ದೆಗಳಿಗಾಗಿ ಬರೋಬ್ಬರಿ 23,757 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಭಾರತೀಯ ಅಂಚೆ ಇಲಾಖೆಯ ಇತ್ತೀಚೆಗಿನ ವರ್ಷಗಳಲ್ಲಿ ಅತ್ಯಂತ ದೊಡ್ಡ ನೇಮಕಾತಿ ಪ್ರಕ್ರಿಯೆ ಇದಾಗಲಿದೆ. ಆಕಾಂಕ್ಷಿಗಳಿಗೆ ಯಾವುದೇ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಬದಲಿಗೆ ಅಂಕಗಳ ಆಧಾರದಲ್ಲಿ ನೇರವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಒಟ್ಟು 23 ಪೋಸ್ಟರ್ ಸರ್ಕಲ್ಗಳಿಗೆ ಒಟ್ಟಿಗೆ ನೇಮಕಾತಿ ಮಾಡಲಾಗುತ್ತಿದೆ. ಈಶಾನ್ಯ ಭಾರತಕ್ಕೆ ಹೆಚ್ಚಿನ ಮಂದಿಯ ನೇಮಕಾತಿ ಮಾಡಲಾಗುತ್ತಿದೆ. 2614 ಹುದ್ದೆಗಳು ಈಶಾನ್ಯ ಭಾರತಕ್ಕೆ, ಮಹಾರಾಷ್ಟ್ರ ರಾಜ್ಯಕ್ಕೆ 2431 ಹುದ್ದೆಗಳನ್ನು ನೀಡಲಾಗುತ್ತಿದೆ. ತಮಿಳುನಾಡಿಗೆ 2118 ಮಂದಿಯ ನೇಮಕ ಮಾಡಿಕೊಳ್ಳಲಾಗುತ್ತಿದೆ. ಉತ್ತರ ಪ್ರದೇಶಕ್ಕೆ 1691 ಮಂದಿಯ ನೇಮಕ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕಕ್ಕೆ 1116 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಕಾಂಕ್ಷಿಗಳು ಯಾವುದೇ ರಾಜ್ಯದ ಹುದ್ದೆಗಳಿಗೆ ಬೇಕಿದ್ದರೂ ಅರ್ಜಿ ಸಲ್ಲಿಸಬಹುದಾಗಿದೆ, ಆದರೆ ಅಭ್ಯರ್ಥಿಗೆ ಸ್ಥಳೀಯ ಭಾಷಾ ಜ್ಞಾನ ಕಡ್ಡಾಯವಾಗಿರುತ್ತದೆ.