Photo Credits: @s_denterprises (Instagram)
ಸಂಕ್ಷಿಪ್ತ ವಿವರಣೆ: ಬಿಎಸ್ಎಫ್ (BSF) 3,588 ಕಾನ್ಸ್ಟೇಬಲ್ (ಟ್ರೇಡ್ಸ್ಮ್ಯಾನ್) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. SSLC ಪಾಸಾದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ. ಬಿಎಸ್ಎಫ್ ವಿವಿಧ ಟ್ರೇಡ್ಗಳಲ್ಲಿ ಖಾಲಿ ಇರುವ ಒಟ್ಟು 3,588 ಕಾನ್ಸ್ಟೇಬಲ್ (ಟ್ರೇಡ್ಸ್ಮ್ಯಾನ್) ಹುದ್ದೆಗಳ ಭರ್ತಿಗೆ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.
ಆಸಕ್ತ ಅಭ್ಯರ್ಥಿಗಳು ಆಗಸ್ಟ್ 26, 2026 ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟೆಂಬರ್ 24, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ನೇಮಕಾತಿಯ ಪ್ರಮುಖ ಮುಖ್ಯಾಂಶಗಳು…
- ನೇಮಕಾತಿ ಸಂಸ್ಥೆ: ಗಡಿ ಭದ್ರತಾ ಪಡೆ
- ಹುದ್ದೆಯ ಹೆಸರು: ಕಾನ್ಸ್ಟೇಬಲ್ (ಟ್ರೇಡ್ಸ್ಮ್ಯಾನ್)
- ಒಟ್ಟು ಹುದ್ದೆಗಳು: 3,588
- ಅರ್ಹ ಅಭ್ಯರ್ಥಿಗಳು: ಪುರುಷ ಮತ್ತು ಮಹಿಳಾ
- ಉದ್ಯೋಗ ಸ್ಥಳ: ಭಾರತಾದ್ಯಂತ
- ಮಾಸಿಕ ವೇತನ: ₹21,700 ರಿಂದ ₹69,100/- (7th CPC Pay Matrix Level-3)
ಲಭ್ಯವಿರುವ ಟ್ರೇಡ್ಗಳು…
- ಕಾಬ್ಲರ್
- ಪೇಂಟರ್
- ಟೈಲರ್
- ಕಾರ್ಪೆಂಟರ್
- ಪ್ಲಂಬರ್
- ಎಲೆಕ್ಟ್ರಿಷಿಯನ್
- ಗಾರ್ಡನರ್
- ಸ್ವೀಪರ್
- ಕುಕ್ ಹಾಗೂ ಇತರ ವಿಭಾಗಗಳು.

Photo Credits: @s_denterprises (Instagram)
ಪ್ರಮುಖ ದಿನಾಂಕಗಳು…
- ಅಧಿಸೂಚನೆ ಪ್ರಕಟವಾದ ದಿನಾಂಕ: 01 ಆಗಸ್ಟ್ 2026
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26 ಆಗಸ್ಟ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಸೆಪ್ಟೆಂಬರ್ 2026
ಶೈಕ್ಷಣಿಕ ಅರ್ಹತೆ…
ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು.
ವಯೋಮಿತಿ ವಿವರ (01/08/2026 ಕ್ಕೆ ಅನ್ವಯಿಸುವಂತೆ)…
ಕನಿಷ್ಠ ವಯಸ್ಸು: 18 ವರ್ಷಗಳು
ಗರಿಷ್ಠ ವಯಸ್ಸು: 25 ವರ್ಷಗಳು
(ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ).
ಅರ್ಜಿ ಶುಲ್ಕದ ವಿವರ…
- General / OBC / EWS ಅಭ್ಯರ್ಥಿಗಳಿಗೆ: ₹100/-
- SC / ST / ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ: ₹0/- (ಉಚಿತ)
- ಶುಲ್ಕ ಪಾವತಿಸುವ ವಿಧಾನ: ಆನ್ಲೈನ್ (Online)
ಆಯ್ಕೆ ಪ್ರಕ್ರಿಯೆ…
- ಲಿಖಿತ ಪರೀಕ್ಷೆ
- ದೈಹಿಕ ಕ್ಷಮತೆ ಪರೀಕ್ಷೆ
- ದೈಹಿಕ ಮಾನದಂಡ ಪರೀಕ್ಷೆ
- ದಾಖಲೆಗಳ ಪರಿಶೀಲನೆ
- ವೈದ್ಯಕೀಯ ತಪಾಸಣೆ




