BIGG BOSS AGNIPARIKSHA: ‘ಒಂದು ಇನ್.. ಇನ್ನೊಂದು ಔಟ್’; ವೃತ್ತದ ಲೆಕ್ಕ ಹೇಳಿ ಸೋಶಿಯಲ್ ಮೀಡಿಯಾದಲ್ಲಿ ನಗೆಪಾಟಲಿಗೀಡಾದ ನಟ ವಿನಯ್ ಗೌಡ

ಅಗ್ನಿಪರೀಕ್ಷೆಯಲ್ಲಿ ವಿನಯ್ ಪ್ರಶ್ನೆ: 'ಸರ್ಕಲ್ ಗೆ ಎರಡು ಸೈಡ್ಸ್' ಎಂದ ನಟ

Photo Credits: @ka53_hoskote (Instagram)

ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೂ ಮುನ್ನ ನಡೆಯಲ್ಲಿರುವ ‘ಅಗ್ನಿಪರೀಕ್ಷೆ’ ಕಾರ್ಯಕ್ರಮ ಈಗ ಭಾರಿ ಸದ್ದು ಮಾಡುತ್ತಿದೆ. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿರುವ ವಿನಯ್ ಗೌಡ ಅವರು ಕೇಳಿದ ವಿಚಿತ್ರ ಪ್ರಶ್ನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರು ನೀಡಿದ ತಪ್ಪಾದ ಉತ್ತರದಿಂದಾಗಿ ಇದೀಗ ನೆಟ್ಟಿಗರು ಹಾಗೂ ಟ್ರೋಲರ್‌ಗಳ ಕೈಗೆ ಸರಿಯಾಗಿ ಸಿಲುಕಿಕೊಂಡಿದ್ದಾರೆ.

ಅಗ್ನಿಪರೀಕ್ಷೆಯಲ್ಲಿ ವಿನಯ್ ಪ್ರಶ್ನೆ: ‘ಸರ್ಕಲ್ ಗೆ ಎರಡು ಸೈಡ್ಸ್’ ಎಂದ ನಟ…

ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ವೇಳೆ ವಿನಯ್ ಗೌಡ ಈ ತಮಾಷೆಯ ಪ್ರಶ್ನೆ ಕೇಳಿದ್ದಾರೆ. “ಸರ್ಕಲ್ ಗೆ ಎಷ್ಟು ಸೈಡ್ಸ್ ಇರುತ್ತವೆ?” ಎಂದು ಅವರು ಅಲ್ಲಿದ್ದ ಸ್ಪರ್ಧಿಯೊಬ್ಬರಿಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಸ್ಪರ್ಧಿ, “ವೃತ್ತಕ್ಕೆ ಯಾವುದೇ ಸೈಡ್ಸ್ ಇರುವುದಿಲ್ಲ” ಎಂದು ಅತ್ಯಂತ ಸರಿಯಾದ ಉತ್ತರ ನೀಡಿದ್ದಾರೆ. ಆದರೆ ವಿನಯ್ ವ್ಯಂಗ್ಯವಾಗಿ ನಕ್ಕು, “ಸರ್ಕಲ್ ಗೆ ಎರಡು ಸೈಡ್ಸ್, ಒಂದು ಇನ್ ಇನ್ನೊಂದು ಔಟ್” ಎಂದು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್: ‘ಕರ್ನಾಟಕದ ರೇಖಾಗಣಿತ ಪಿತಾಮಹ’ ಬಿರುದು…

ವಿನಯ್ ಗೌಡ ಈ ಹೇಳಿಕೆ ನೀಡಿದ್ದೇ ತಡ, ನೆಟ್ಟಿಗರು ತಮ್ಮ ಕ್ರಿಯೇಟಿವಿಟಿ ಬಳಸಿ ತರಹೇವಾರಿ ಟ್ರೋಲ್ ಮಾಡುತ್ತಿದ್ದಾರೆ. ಎಐ ಟೂಲ್ಸ್ ಬಳಸಿ ಶಾಲೆ ಹುಡುಗ ಮತ್ತು ಟೀಚರ್ ನಡುವಿನ ಕಾಮಿಡಿ ವೀಡಿಯೋಗಳನ್ನು ಕ್ರಿಯೇಟ್ ಮಾಡಲಾಗಿದೆ. ಈ ವೀಡಿಯೋಗಳನ್ನು ನೋಡಿ ಜನರು ವಿನಯ್ ಗೌಡ ಅವರಿಗೆ ‘ಕರ್ನಾಟಕದ ರೇಖಾಗಣಿತ ಪಿತಾಮಹ’ ಎಂದು ಬಿರುದು ಕೊಟ್ಟಿದ್ದಾರೆ. ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿಯೂ ವಿನಯ್ ಗೌಡ ಅವರ ಈ ವೃತ್ತದ ವೀಡಿಯೋಗಳೇ ಹರಿದಾಡುತ್ತಿವೆ.

ರೇಖಾಗಣಿತದ ಅಸಲಿ ಸತ್ಯ: ವಿನಯ್ ಗೌಡ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು…

ಗಣಿತ ಮತ್ತು ರೇಖಾಗಣಿತದ ನಿಯಮದ ಪ್ರಕಾರ ವೃತ್ತಕ್ಕೆ ಯಾವುದೇ ಬದಿಗಳು ಅಥವಾ ಸೈಡ್ಸ್ ಇರುವುದಿಲ್ಲ. ಅದು ಕೇವಲ ಒಂದು ನಿರಂತರ ವಕ್ರ ಅಂಚನ್ನು ಮಾತ್ರ ಹೊಂದಿರುತ್ತದೆ. ಜಡ್ಜ್ ಸೀಟ್‌ನಲ್ಲಿ ಕುಳಿತು ಪ್ರಶ್ನೆ ಕೇಳುವಾಗ ಸರಿಯಾದ ಮಾಹಿತಿ ತಿಳಿದಿರಬೇಕು ಎಂದು ಜನರು ಉಚಿತ ಸಲಹೆ ನೀಡಿದ್ದಾರೆ. ಸಂಗೀತಾ ಶೃಂಗೇರಿ, ಶ್ರುತಿ ಮತ್ತು ಚಂದನ್ ಶೆಟ್ಟಿ ಜೊತೆ ವಿನಯ್ ಗೌಡ ಕೂಡ ಪದೇ ಪದೇ ಟ್ರೋಲ್ ಆಗುತ್ತಿದ್ದಾರೆ.