Photo Credits: @kannada_pichhar (Instagram)
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ಕ್ಕೆ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ‘ಟಾಕ್ಸಿಕ್’ ಚಿತ್ರದ ಹಾಲಿವುಡ್ ಇಂಗ್ಲಿಷ್ ಟ್ರೇಲರ್ ಇಂದು ಅಧಿಕೃತವಾಗಿ ಹೊರಬರಲಿದೆ. ಗ್ಲೋಬಲ್ ಸ್ಟಾರ್ ಯಶ್ ಇದೀಗ ಹಾಲಿವುಡ್ ಮಾರುಕಟ್ಟೆಯಲ್ಲೂ ಧೂಳೆಬ್ಬಿಸಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ.
ವಿಶ್ವದಾದ್ಯಂತ ಏಕಕಾಲಕ್ಕೆ ಧಮಾಕಾ…
ಚಿತ್ರತಂಡ ಪ್ರಕಟಿಸಿರುವ ಮಾಹಿತಿಯಂತೆ ಇಂದು ರಾತ್ರಿ 8.30ಕ್ಕೆ (IST) ಇಂಗ್ಲಿಷ್ ಟ್ರೇಲರ್ ಬಿಡುಗಡೆಯಾಗಲಿದೆ. ಅಮೆರಿಕದ ಪಿಎಸ್‌ಟಿ ಸಮಯ ಬೆಳಿಗ್ಗೆ 8.00 ಹಾಗೂ ಇಎಸ್‌ಟಿ ಸಮಯ ಬೆಳಿಗ್ಗೆ 11.00ಕ್ಕೆ ರಿಲೀಸ್ ಆಗಲಿದೆ. ಅಂತೆಯೇ ಜಿಎಂಟಿ ಸಮಯ ಮಧ್ಯಾಹ್ನ 3.00ಕ್ಕೆ ವಿಶ್ವದಾದ್ಯಂತ ಏಕಕಾಲದಲ್ಲಿ ಟ್ರೇಲರ್ ಅನಾವರಣಗೊಳ್ಳಲಿದೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣಗೊಂಡ ಮೊದಲ ಕನ್ನಡ ಸಿನಿಮಾ ಇದಾಗಿದೆ. ಹಲವು ಅಂತಾರಾಷ್ಟ್ರೀಯ ತಂತ್ರಜ್ಞರು ಹಾಗೂ ಆಕ್ಷನ್ ಡೈರೆಕ್ಟರ್‌ಗಳು ಈ ಸಿನಿಮಾಗೆಗೆ ಕೆಲಸ ಮಾಡಿದ್ದಾರೆ.
ಪ್ರೀ-ಬುಕಿಂಗ್‌ನಲ್ಲಿ ಕೋಟಿ ದಾಟಿದ ಗಳಿಕೆ…
ಈಗಾಗಲೇ ‘ಟಾಕ್ಸಿಕ್’ ಸಿನಿಮಾ ವಿದೇಶಿ ಮಾರುಕಟ್ಟೆಯಲ್ಲಿ ಹೊಸ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಅಮೆರಿಕ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಅಡ್ವಾನ್ಸ್ ಬುಕಿಂಗ್‌ಗೆ ಭಾರಿ ಆಫರ್ ಸಿಕ್ಕಿದೆ. ಅಮೆರಿಕ ಒಂದರಲ್ಲೇ ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕಿಂಗ್ ಮೂಲಕ 1 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ. ಉತ್ತಮ ಮೇಕಿಂಗ್ ಮತ್ತು ವಿಶುವಲ್ ಗ್ಲ್ಯಾಂಪ್ಸ್ ನೋಡಿ ಹಾಲಿವುಡ್ ಪ್ರೇಕ್ಷಕರು ಕೂಡ ಬೆರಗಾಗಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ಏಕಕಾಲಕ್ಕೆ ಅದ್ದೂರಿಯಾಗಿ ಬಿಡುಗಡೆಯಾಗಲು ಸಿನಿಮಾ ಸಿದ್ಧವಾಗಿದೆ.
ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ…
ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ತಾರೆಯರ ದೊಡ್ಡ ದಂಡೇ ಅಭಿನಯಿಸಿದೆ. ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಕುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಇದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಅತ್ಯಂತ ಅದ್ದೂರಿಯಾಗಿ ಚಿತ್ರ ನಿರ್ಮಿಸಿವೆ. ಈ ಬಿಗ್ ಬಜೆಟ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಸೃಷ್ಟಿಸಲಿದೆ. ಹಾಲಿವುಡ್‌ನಲ್ಲಿ ನೇರವಾಗಿ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ನಟನ ಸಿನಿಮಾ ಎಂಬ ಹೆಗ್ಗಳಿಕೆ ಯಶ್ ಪಾಲಾಗಿದೆ.




