Photo Credits: @rashmika.mandanna86 (Instagram)
ರಾಕಿಂಗ್ ಸ್ಟಾರ್ ಯಶ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಡುವಿನ ಹಳೆಯ ವಿವಾದವೊಂದು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಭಾರಿ ಸುದ್ದಿಯಲ್ಲಿದೆ. ಇತ್ತೀಚೆಗೆ ‘ಆಪ್ ಕಿ ಅದಾಲತ್’ ಶೋನಲ್ಲಿ ಭಾಗವಹಿಸಿದ್ದ ಯಶ್ ತಮ್ಮ ವೃತ್ತಿಜೀವನ ಹಾಗೂ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಹಲವು ವಿಚಾರ ಹಂಚಿಕೊಂಡಿದ್ದಾರೆ. ಇದೇ ವೇಳೆ ರಶ್ಮಿಕಾ ಮಂದಣ್ಣ ತಮ್ಮ ವಿರುದ್ಧ ಹಿಂದೆ ಮಾಡಿದ್ದ ‘ಮಿಸ್ಟರ್ ಶೋ-ಆಫ್’ ಕಾಮೆಂಟ್ ಬಗ್ಗೆ ಪ್ರಸ್ತಾಪವಾದಾಗ ಯಶ್ ಕೊಟ್ಟ ಉತ್ತರ ವೈರಲ್ ಆಗಿದೆ.
ಹಳೆಯ ವಿವಾದಕ್ಕೆ ಫ್ಯಾನ್ಸ್ ಭಾರಿ ಆಕ್ರೋಶ…
ರಶ್ಮಿಕಾ ಮಂದಣ್ಣ ತಮ್ಮ ಕೆರಿಯರ್ ಆರಂಭದ ದಿನಗಳಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಈ ಕುತೂಹಲಕಾರಿ ಪ್ರಶ್ನೆ ಎದುರಾಗಿತ್ತು. “ಕನ್ನಡ ಚಿತ್ರರಂಗದ ಮಿಸ್ಟರ್ ಶೋ ಆಫ್ ಯಾರು?” ಎಂದು ಕೇಳಿದಾಗ ರಶ್ಮಿಕಾ ಯಶ್ ಅವರ ಹೆಸರನ್ನು ಹೇಳಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಯಶ್ ಅಭಿಮಾನಿಗಳು ರಶ್ಮಿಕಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ವಿವಾದ ಭಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರಿಂದ ರಶ್ಮಿಕಾ ಮಂದಣ್ಣ ಬಹಿರಂಗವಾಗಿ ಕ್ಷಮೆಯಾಚಿಸಬೇಕಾಗಿ ಬಂದಿತ್ತು. ಈ ಘಟನೆ ನಡೆದು ಹಲವು ವರ್ಷಗಳು ಕಳೆದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಈ ವಿಚಾರ ಚರ್ಚೆಗೆ ಬರುತ್ತದೆ.
‘ಆಪ್ ಕಿ ಅದಾಲತ್’ ಶೋನಲ್ಲಿ ಹಳೆಯ ಕಾಮೆಂಟ್ ನೆನೆದು ರಜತ್ ಶರ್ಮಾ ಪ್ರಶ್ನೆ: ಯಶ್ ನೀಡಿದ ಹೆಮ್ಮೆಯ ಉತ್ತರ…
ಖ್ಯಾತ ಪತ್ರಕರ್ತ ರಜತ್ ಶರ್ಮಾ ಅವರು ‘ಆಪ್ ಕಿ ಅದಾಲತ್’ ಶೋನಲ್ಲಿ ಈ ಹಳೆಯ ವಿವಾದವನ್ನು ಪ್ರಸ್ತಾಪಿಸಿದರು. ಇದಕ್ಕೆ ಅತ್ಯಂತ ಶಾಂತವಾಗಿ ಹಾಗೂ ಮೆಚ್ಯೂರ್ಡ್ ಆಗಿ ಉತ್ತರಿಸಿದ ರಾಕಿಂಗ್ ಸ್ಟಾರ್ ಯಶ್ ಸಿನಿರಸಿಕರ ಮನಗೆದ್ದಿದ್ದಾರೆ. “ಆ ಸಮಯದಲ್ಲಿ ರಶ್ಮಿಕಾ ಚಿತ್ರರಂಗಕ್ಕೆ ಹೊಸಬರಾಗಿದ್ದರು, ಆ ಸಂದರ್ಭವನ್ನು ನಾವು ಅರ್ಥ ಮಾಡಿಕೊಳ್ಳಬೇಕು” ಎಂದಿದ್ದಾರೆ. “ಇಂಟರ್ವ್ಯೂಗಳಲ್ಲಿ ಮೂರ್ನಾಲ್ಕು ಆಯ್ಕೆಗಳನ್ನು ನೀಡಿದಾಗ ಯಾವುದೋ ಒಂದನ್ನು ಹೇಳಲೇಬೇಕಾದ ಅನಿವಾರ್ಯತೆ ಇರುತ್ತದೆ” ಎಂದಿದ್ದಾರೆ. ರಶ್ಮಿಕಾ ಕೂಡ ಅದೇ ರೀತಿ ಯೋಚಿಸಿ ಹೆಸರನ್ನು ಹೇಳಿರಬಹುದು ಎಂದು ಯಶ್ ಅತ್ಯಂತ ಸರಳವಾಗಿ ಉತ್ತರಿಸಿದ್ದಾರೆ.
“ಬೇರೆಯವರ ದೃಷ್ಟಿಕೋನದಿಂದ ನನ್ನ ವ್ಯಕ್ತಿತ್ವ ಬದಲಾಗಲ್ಲ”: ಯಶ್ ಬೋಲ್ಡ್ ಹೇಳಿಕೆಗೆ ಅಭಿಮಾನಿಗಳು ಫಿದಾ…
ಮುಂದುವರಿದು ಮಾತನಾಡಿದ ಯಶ್, “ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುವ ಸಂಪೂರ್ಣ ಹಕ್ಕಿದೆ” ಎಂದಿದ್ದಾರೆ. “ನಾನು ಇತರರ ಅಭಿಪ್ರಾಯಗಳನ್ನು ಗೌರವಿಸುತ್ತೇನೆ, ಆದರೆ ಬೇರೆಯವರ ಅನಿಸಿಕೆಯಿಂದ ನನ್ನ ವ್ಯಕ್ತಿತ್ವ ಬದಲಾಗುವುದಿಲ್ಲ” ಎಂದಿದ್ದಾರೆ. “ನಾನು ಹೇಗಿದ್ದೇನೆಯೋ ಎಂದಿಗೂ ಹಾಗೆಯೇ ಇರುತ್ತೇನೆ” ಎಂದು ಚಾಣಾಕ್ಷತನದಿಂದ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಯಶ್ ನೀಡಿದ ಈ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಆಗಸ್ಟ್ 26ರಂದು ರಿಲೀಸ್ ಆಗಲಿರುವ ‘ಟಾಕ್ಸಿಕ್’ ಸಿನಿಮಾದ ಜಾಗತಿಕ ಪ್ರಚಾರ ಕಾರ್ಯಗಳಲ್ಲಿ ರಾಕಿ ಭಾಯ್ ಬ್ಯುಸಿಯಾಗಿದ್ದಾರೆ.
YASH INTERVIEW RAJAT SHARMA: “ಯಾರೋ ಏನೋ ಅಂದಾಕ್ಷಣ ನಾನ್ ಬದಲಾಗಲ್ಲ”; ರಶ್ಮಿಕಾ ಮಂದಣ್ಣ ಕಾಮೆಂಟ್ಗೆ ಯಶ್ ಸಖತ್ ಕ್ಲಾಸ್ ಆನ್ಸರ್…

Recent Posts
ಬೃಹತ್ ಅಂಗನವಾಡಿ ನೇಮಕಾತಿ: 215 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ; ಇಂದೇ ಅರ್ಜಿ ಹಾಕಿ
ದಿನಭವಿಷ್ಯ: ಇಂದು ಈ ರಾಶಿಯವರು ಹೆಚ್ಚು ಪಡೆಯುವುದಕ್ಕಿಂತ ಉತ್ತಮವಾದುದನ್ನು ಪಡೆಯುವರು; ಯಾರಿಗೆ ಶುಭ?
‘ಬಿಗ್ ಬಾಸ್ ಒಂದು ಪ್ರಪಂಚ’: ಹೊಸ ಥೀಮ್ ಹಾಗೂ ಮನೆ ಝಲಕ್ ಹಂಚಿಕೊಂಡ ಸುದೀಪ್
ಬಸ್ ಚಾಲಕನಾಗಿ ಮಿಂಚಿದ ಶೈನ್ ಶೆಟ್ಟಿ; ಟೀಸರ್ ರಿಲೀಸ್
SIDDARAMAIAH: ಮೋದಿ ಸುಳ್ಳುಗಳಲ್ಲಿ ಯಾವುದು ನಿಜ ಆಗಿದೆ..? – ನಮೋ ವಿರುದ್ಧ ಸಿದ್ದು ವಾಗ್ದಾಳಿ