RAGUL GANDHI : ನಿಮಗೆ ಬಿಜೆಪಿಯಲ್ಲಿ ಯಾರಿಷ್ಟ..? ರಾಹುಲ್ ಗಾಂಧಿ ಶಾಕಿಂಗ್ ಉತ್ತರ ನೋಡಿ !

ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ನಡೆಸಿದ ಯುವಕರೊಂದಿಗಿನ ಸಂವಾದದಲ್ಲಿ ತಮಗೆ ಇಷ್ಟವಾದ ಬಿಜೆಪಿ ನಾಯಕ ಯಾರು ಎಂಬ ಕುತೂಹಲಕಾರಿ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ವೇಳೆ ಕಮಲ ಪಾಳಯದ ಯಾವುದೇ ಮೂಲ ನಾಯಕರ ಹೆಸರು ಹೇಳುವ ಬದಲಿಗೆ, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ತಮ್ಮ ನೆಚ್ಚಿನ ವ್ಯಕ್ತಿ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಸುದೀರ್ಘ ಕಾಲ ಅವರೊಂದಿಗೆ ಜೊತೆಯಾಗಿ ಕೆಲಸ ಮಾಡಿದ ಅನುಭವ, ಸೇನಾ ಕ್ಷೇತ್ರದ ಕುರಿತು ಅವರಿಗಿರುವ ಅಗಾಧ ಜ್ಞಾನ ಮತ್ತು ಸಮಾಧಾನಚಿತ್ತದ ಸ್ವಭಾವ ತಮ್ಮನ್ನು ಆಕರ್ಷಿಸಿದೆ ಎಂದು ತಿಳಿಸಿದ ರಾಹುಲ್, ‘ಹಲೋ ಅಂಕಲ್ ಅಮರಿಂದರ್’ ಎಂದು ಆತ್ಮೀಯವಾಗಿ ಶುಭಕೋರಿದ್ದಾರೆ. ಇದೇ ವೇಳೆ ಬ್ಯಾಟ್‌ಮ್ಯಾನ್ ಕುರಿತಾದ ಹಾಸ್ಯಮಯ ಪ್ರಶ್ನೆಗೆ ಮತ್ತು ಸಾಕುಪ್ರಾಣಿಗಳ ಹಕ್ಕುಗಳ ಕುರಿತು ಸಹ ಯುವಕರಲ್ಲಿ ಸೌಹಾರ್ದಯುತ ಸಂವಾದ ನಡೆಸಿದರು.