☔ Weather
Bengaluru: 🌧️ 25°C | AQI 59
Mysore: 🌤️ 29°C | AQI 63
Mangalore: ☁️ 33°C | AQI 73
Bengaluru: 🌧️ 25°C | AQI 59

BIGG BOSS SEASON 13: ‘ಬಿಗ್ ಬಾಸ್ 13’ ಪ್ರೋಮೋ ಮೇಕಿಂಗ್ ವೈರಲ್: ಕಿಚ್ಚ ಸುದೀಪ್ ಮಾಸ್ ಲುಕ್‌ಗೆ ಫ್ಯಾನ್ಸ್ ಫಿದಾ…

'ಬಿಗ್ ಬಾಸ್ 13' ಪ್ರೋಮೋ ಮೇಕಿಂಗ್ ವಿಡಿಯೋ ವೈರಲ್...

Photo Credits: @colorskannadaofficial (Instagram)

ಕನ್ನಡ ಕಿರುತೆರೆಯ ಬಹುನಿರೀಕ್ಷಿತ ‘ಬಿಗ್ ಬಾಸ್ ಸೀಸನ್ 13’ ರ ನೂತನ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಭಿಮಾನಿಗಳು ಕಿಚ್ಚ ಸುದೀಪ್ ಅವರ ಸ್ಟೈಲಿಶ್ ಲುಕ್ ಹಾಗೂ ಸ್ವಾಗ್‌ಗೆ ಫುಲ್ ಫಿದಾ ಆಗಿದ್ದು, ಪ್ರೋಮೋಗೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೀಕ್ಷಕರಿಂದ ಹರಿದುಬಂದ ಅದ್ಭುತ ಪ್ರತಿಕ್ರಿಯೆಗೆ ಧನ್ಯವಾದ ತಿಳಿಸಿರುವ ಕಲರ್ಸ್ ಕನ್ನಡ ವಾಹಿನಿ, ಇದೀಗ ಪ್ರೋಮೋದ ತೆರೆಹಿಂದಿನ ಮೇಕಿಂಗ್ ವಿಡಿಯೋವನ್ನು ಅನಾವರಣಗೊಳಿಸಿದೆ.

ಹಾಲಿವುಡ್ ಲೆವೆಲ್‌ನಲ್ಲಿ ಶೂಟಿಂಗ್: ಬಿಗ್ ಬಾಸ್ ಸೆಟ್‌ನ ಸತ್ಯ ಬಿಚ್ಚಿಟ್ಟ ಮೇಕಿಂಗ್ ವಿಡಿಯೋ…

ಪ್ರೋಮೋ ಚಿತ್ರೀಕರಣಕ್ಕಾಗಿ ಅತ್ಯಂತ ಬೃಹತ್ ಮಟ್ಟದ ದ್ವಾರದ ಸೆಟ್ ನಿರ್ಮಾಣ ಮಾಡಲಾಗಿತ್ತು. ಸೆಟ್ ಜೊತೆಗೆ ಅದ್ಭುತ ಗ್ರಾಫಿಕ್ಸ್ ಮೂಡಿಬರಲು ಗ್ರೀನ್ ಮ್ಯಾಟ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಕೆ ಮಾಡಲಾಗಿದೆ. ಕಿಚ್ಚ ಸುದೀಪ್ ಅವರ ಶಾರ್ಟ್ ಹೇರ್ ಸ್ಟೈಲ್ ಮತ್ತು ಬ್ಲ್ಯಾಕ್ ಓವರ್‌ಕೋಟ್ ಸೂಟ್ ಲುಕ್ ಹೈಲೈಟ್ ಆಗಿದೆ. ಕಳೆದ ಸೀಸನ್‌ಗಿಂತ ಭಿನ್ನವಾಗಿ ಈ ಬಾರಿ ಸಂಪೂರ್ಣ ಡಾರ್ಕ್ ಹಾಗೂ ರಾಯಲ್ ಕಲರ್ ಥೀಮ್ ಬಳಸಲಾಗಿದೆ. ಪ್ರೋಮೋ ಕೆಳಗೆ ಪ್ರೇಕ್ಷಕರು ಹಾಕಿದ್ದ ಬೆಸ್ಟ್ ಕಾಂಪ್ಲಿಮೆಂಟ್‌ಗಳನ್ನು ವಿಡಿಯೋದಲ್ಲಿ ಡಿಸ್ಪ್ಲೇ ಮಾಡಿ ಟೀಮ್ ‘ಧನ್ಯವಾದ’ ತಿಳಿಸಿದೆ. ಈ ಮೇಕಿಂಗ್ ವಿಡಿಯೋ ಸದ್ಯ ಇನ್‌ಸ್ಟಾಗ್ರಾಮ್ ನಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದೆ.

ಆಗಸ್ಟ್ 16ಕ್ಕೆ ‘ಅಗ್ನಿಪರೀಕ್ಷೆ’ ಧಮಾಕ: ಬಿಗ್ ಬಾಸ್ ಇತಿಹಾಸದಲ್ಲೇ ಪ್ರಥಮ ಪ್ರಯತ್ನ…

ಇದೇ ಆಗಸ್ಟ್ 16 ರಂದು ರಾತ್ರಿ 9 ಗಂಟೆಗೆ ‘ಅಗ್ನಿಪರೀಕ್ಷೆ’ ಎಂಬ ವಿನೂತನ ಕಾನ್ಸೆಪ್ಟ್ ಪ್ರಸಾರವಾಗಲಿದೆ. ಬಿಗ್ ಬಾಸ್ ಇತಿಹಾಸದಲ್ಲಿ ಶ್ರೀಸಾಮಾನ್ಯರಿಗಾಗಿ ಈ ರೀತಿಯ ಸ್ಪೆಷಲ್ ಶೋ ಆಯೋಜಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಶೋನಲ್ಲಿ ಭಾಗವಹಿಸಲು ಕಂಟೆಂಟ್ ವಿಡಿಯೋ ಕಳುಹಿಸಿದ್ದ ಸಾಮಾನ್ಯ ಜನರಿಗೆ ಈ ಪರೀಕ್ಷೆ ಎದುರಾಗಲಿದೆ. ಈ ಸವಾಲಿನಲ್ಲಿ ಗೆದ್ದವರು ನೇರವಾಗಿ ಬಿಗ್ ಬಾಸ್ ಮನೆ ಪ್ರವೇಶಿಸುವ ಸುವರ್ಣ ಅವಕಾಶ ಪಡೆಯಲಿದ್ದಾರೆ. ಸಾಮಾನ್ಯ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯು ಪ್ರೇಕ್ಷಕರಲ್ಲಿ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಕಿರುತೆರೆ ಇತಿಹಾಸದಲ್ಲೇ ಇದೊಂದು ಹೊಸ ಇತಿಹಾಸ ಸೃಷ್ಟಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಕಾಮನ್ ಮ್ಯಾನ್‌ಗೆ ಜಡ್ಜಸ್ ಯಾರು?

ಈ ‘ಅಗ್ನಿಪರೀಕ್ಷೆ’ ಹಂತದಲ್ಲಿ ನಿರ್ಣಾಯಕರಾಗಿ ಯಾರು ಭಾಗವಹಿಸುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಹಿಂದಿನ ಸೀಸನ್‌ನ ಪ್ರಮುಖ ಸ್ಪರ್ಧಿಗಳು ಮತ್ತು ವಿನ್ನರ್‌ಗಳು ಜಡ್ಜ್ ಆಗಿ ಬರಲಿದ್ದಾರೆ ಎನ್ನಲಾಗಿದೆ. ಹಿರಿಯ ನಟಿ ಶ್ರುತಿ, ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿ ಹೆಸರು ಬಲವಾಗಿ ಕೇಳಿಬರುತ್ತಿದೆ. ಇವರ ಜೊತೆಗೆ ವಿನಯ್ ಗೌಡ ಹಾಗೂ ಸಂಗೀತಾ ಶೃಂಗೇರಿ ಕೂಡ ಜಡ್ಜಸ್ ಪ್ಯಾನೆಲ್‌ನಲ್ಲಿರಲಿದ್ದಾರೆ ಎಂಬ ಮಾತಿದೆ. ಆದರೆ ಈ ಜಡ್ಜಸ್ ಪಟ್ಟಿ ಕುರಿತು ವಾಹಿನಿಯಿಂದ ಅಧಿಕೃತ ಪ್ರಕಟಣೆ ಹೊರಬರಬೇಕಿದೆ. ಒಟ್ಟಿನಲ್ಲಿ ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನವೇ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.