ಬಿಗ್ ಬಾಸ್ ಕನ್ನಡ ಸೀಸನ್ 13ರ (BBK 13) ಫಿನಾಲೆಗೆ ಇನ್ನು ಕೆಲವೇ ವಾರಗಳು ಮಾತ್ರ ಬಾಕಿ ಉಳಿದಿವೆ. ಈ ಹಂತದಲ್ಲಿ ದೊಡ್ಮನೆಯ ಆಟ ಮತ್ತಷ್ಟು ಕಠಿಣವಾಗುವುದು ಖಚಿತವಾಗಿದೆ.
ಇದೇ ವೇಳೆ ಬಿಗ್ ಬಾಸ್ ನೀಡಿರುವ ಹೊಸ ಟ್ವಿಸ್ಟ್ ಮನೆಯ ಸಂಪೂರ್ಣ ಲೆಕ್ಕಾಚಾರವನ್ನೇ ಬದಲಿಸುತ್ತಿದೆ. ಕಳೆದ ವಾರ ಯುವರಾಣಿಯರ ಟಾಸ್ಕ್‌ನಲ್ಲಿ ಗೆದ್ದ ಗಾನವಿ ಗೌಡ ಮಹಾರಾಣಿಯಾಗಿದ್ದಾರೆ.
ಹಾಗೆಯೇ ಗಗನ್ ಚಿನ್ನಪ್ಪ ಕ್ವೀನ್ ಮೇಕರ್ ಆಗಿ ಪವರ್ ಪಡೆದುಕೊಂಡಿದ್ದಾರೆ. ಈಗ ಇವರಿಬ್ಬರ ನಿರ್ಧಾರ ಮನೆಯ ಮತ್ತೊಬ್ಬ ಸ್ಪರ್ಧಿಯ ಆಟವನ್ನೇ ಬದಲಿಸಲಿದೆ.
ಪವರ್ ರೂಮ್‌ನಲ್ಲಿ ಬಿಗ್ ಬಾಸ್ ಕೊಟ್ಟ ಬಿಗ್ ಟ್ವಿಸ್ಟ್
ಕಲರ್ಸ್ ಕನ್ನಡ ವಾಹಿನಿ ಇದೀಗ ಹೊಸ ಪ್ರೋಮೋ ಒಂದನ್ನು ಬಿಡುಗಡೆ ಮಾಡಿದೆ. ಆಕ್ಟಿವಿಟಿ ರೂಮ್ ಅನ್ನು ಕಾಡಿನಂತೆ ಅಲಂಕರಿಸಿ, ಅದಕ್ಕೆ ‘ಪವರ್ ರೂಮ್’ ಎಂದು ಹೆಸರಿಡಲಾಗಿದೆ.
ಮಹಾರಾಣಿ ಗಾನವಿ ಮತ್ತು ಕ್ವೀನ್ ಮೇಕರ್ ಗಗನ್ ಅವರಿಗೆ ಬಿಗ್ ಬಾಸ್ ವಿಶೇಷ ಅಧಿಕಾರ ನೀಡಿದ್ದಾರೆ. ಮುಂದಿನ ವಾರವೂ ಕ್ಯಾಪ್ಟನ್ ಆಗಿ ಮುಂದುವರಿಯಲು ಇವರಿಗೆ ಅವಕಾಶ ಸಿಕ್ಕಿದೆ.
ಆದರೆ ಕ್ಯಾಪ್ಟನ್ ಆಗಲು ಮನೆಯ ಸದಸ್ಯರಲ್ಲಿ ಅರ್ಹತೆ ಇಲ್ಲದ ಒಬ್ಬರನ್ನು ಆಯ್ಕೆ ಮಾಡಬೇಕು ಎಂದು ಬಿಗ್ ಬಾಸ್ ಹೇಳಿದ್ದಾರೆ. ಇಬ್ಬರಲ್ಲಿ ಯಾರು ಮೊದಲು ಬಜರ್ ಒತ್ತುತ್ತಾರೋ ಅವರಿಗೆ ಈ ಆಯ್ಕೆಯ ಅವಕಾಶ ಸಿಗಲಿದೆ.
ಇಡೀ ಸೀಸನ್ ನಾಮಿನೇಟ್ ಆಗುವ ಕಠಿಣ ನಿಯಮ
ಕ್ಯಾಪ್ಟನ್ಸಿ ಆಸೆಯಿಂದ ಗಗನ್ ಮತ್ತು ಗಾನವಿ ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಆಗ ಬಿಗ್ ಬಾಸ್ ಮನೆಯವರಿಗೆಲ್ಲಾ ಶಾಕ್ ನೀಡುವ ಮತ್ತೊಂದು ನಿಯಮವನ್ನು ತಿಳಿಸುತ್ತಾರೆ.
ನೀವು ಆಯ್ಕೆ ಮಾಡುವ ಆ ಒಬ್ಬ ಸದಸ್ಯ ಇಡೀ ಸೀಸನ್ ಪೂರ್ತಿ ನಾಮಿನೇಟ್ ಆಗಿರುತ್ತಾರೆ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ. ಈ ವಿಷಯ ಕೇಳಿ ಮನೆಯ ಎಲ್ಲಾ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ.
ಇದನ್ನು ಓದಿ: BBK 13: ಮಂಜನಿಗೆ ಮತ್ತೊಂದು ಅವಕಾಶ ಕೊಟ್ಟಿದ್ದೇಕೆ ಸುದೀಪ್? ಅಸಲಿ ಕಾರಣ ಇಲ್ಲಿದೆ
ಕೊನೆಯಲ್ಲಿ ಮೊದಲ ದ್ರೋಹ ಈಗಾಗಲೇ ನಡೆದಿದೆ ಎಂದು ಬಿಗ್ ಬಾಸ್ ಹೇಳುತ್ತಾರೆ. ಇದು ಸ್ಪರ್ಧಿಗಳಲ್ಲಿ ಇನ್ನಷ್ಟು ಆತಂಕ ಮತ್ತು ಗೊಂದಲ ಮೂಡಿಸಿದೆ.
BBK 13: ಯಾರಾಗಲಿದ್ದಾರೆ ಆ ನತದೃಷ್ಟ ಸ್ಪರ್ಧಿ?
ಬಿಗ್ ಬಾಸ್ ಮಾತು ಕೇಳಿ ಸ್ಪರ್ಧಿಗಳು ಕಕ್ಕಾಬಿಕ್ಕಿಯಾಗಿ ಒಬ್ಬರ ಮುಖ ಒಬ್ಬರು ನೋಡುತ್ತಾ ಕುಳಿತಿದ್ದಾರೆ. ಈ ಆಯ್ಕೆಯು ಮನೆಯ ವಾತಾವರಣದಲ್ಲಿ ನಿರಾಶಾದಾಯಕ ಬೆಳವಣಿಗೆಯಾಗಬಹುದು ಎಂದು ಗಾನವಿ ಅಭಿಪ್ರಾಯಪಟ್ಟಿದ್ದಾರೆ.
ಗಾನವಿ ಮತ್ತು ಗಗನ್ ತಮ್ಮ ಅಧಿಕಾರ ಬಳಸಿ ಯಾರ ಹೆಸರನ್ನು ಸೂಚಿಸಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಇಂದಿನ ಸಂಚಿಕೆಯಲ್ಲಿ ಈ ಕುರಿತ ಸಂಪೂರ್ಣ ಉತ್ತರ ಸಿಗಲಿದೆ.




