☔ Weather
Bengaluru: ☀️ 22°C | AQI 151
Mysore: ☀️ 23°C | AQI 135
Mangalore: ☀️ 27°C | AQI 100
Bengaluru: ☀️ 22°C | AQI 151
☔ Weather
Bengaluru: ☀️ 22°C | AQI 151
Mysore: ☀️ 23°C | AQI 135
Mangalore: ☀️ 27°C | AQI 100
Bengaluru: ☀️ 22°C | AQI 151

BBK 13: ಮಂಜನಿಗೆ ಮತ್ತೊಂದು ಅವಕಾಶ ಕೊಟ್ಟಿದ್ದೇಕೆ ಸುದೀಪ್? ಅಸಲಿ ಕಾರಣ ಇಲ್ಲಿದೆ

BBK 13: Modern Kavi Manja Exits House Again After Three Weeks As Guest
ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಗೆ ಅತಿಥಿಯಾಗಿ ಮರಳಿದ್ದ ಮಾಡರ್ನ್ ಕವಿ ಮಂಜ ಮೂರು ವಾರಗಳ ಬಳಿಕ ಮತ್ತೆ ದೊಡ್ಮನೆಯಿಂದ ಹೊರಬಂದಿದ್ದಾರೆ.

ಮಾಡರ್ನ್ ಕವಿ ಮಂಜ ಅಗ್ನಿಪರೀಕ್ಷೆ ಮೂಲಕ ಟಿಕೆಟ್ ಪಡೆದು ಬಿಗ್ ಬಾಸ್ (BBK 13) ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ಮನೆಯಲ್ಲಿ ರೌಡಿ ವರ್ತನೆ ಮತ್ತು ಅಶಿಸ್ತು ತೋರಿಸಿದ ಕಾರಣ ಅವರನ್ನು ಹೊರಗೆ ಕಳುಹಿಸಲಾಗಿತ್ತು.

ಬಳಿಕ ಕಿಚ್ಚ ಸುದೀಪ್ ಅವರು ಕರುಣೆ ತೋರಿಸಿ ಮಂಜನನ್ನು ಮತ್ತೆ ಬಿಗ್ ಬಾಸ್ ಮನೆಗೆ ಕಳುಹಿಸಿದ್ದರು. ಆದರೆ ಮನೆಗೆ ಹೋದ ಕೆಲವೇ ವಾರಗಳಲ್ಲಿ ಮಂಜ ಈಗ ಮತ್ತೆ ಹೊರಗೆ ಬಂದಿದ್ದಾರೆ.

ಈ ವಾರ ದೊಡ್ಮನೆಯಲ್ಲಿ ಯಾವುದೇ ಎಲಿಮಿನೇಷನ್ ಇರಲಿಲ್ಲ. ಬದಲಿಗೆ ಅತಿಥಿಯಾಗಿ ಮನೆಯಲ್ಲಿದ್ದ ಮಂಜ ಅವರನ್ನೇ ಸುದೀಪ್ ಹೊರಗೆ ಕರೆಸಿಕೊಂಡಿದ್ದಾರೆ.

ಅತಿಥಿಯಾಗಿ ಮೂರು ವಾರ ಮನೆಯಲ್ಲಿದ್ದ ಮಂಜ

ಮಂಜ ಅವರನ್ನು ಮತ್ತೆ ಮನೆಗೆ ಕಳುಹಿಸುವಾಗಲೇ ಒಂದು ಸ್ಪಷ್ಟನೆ ನೀಡಲಾಗಿತ್ತು. ಮಂಜ ಕೇವಲ ಅತಿಥಿಯಾಗಿ ಮಾತ್ರ ಮನೆಯೊಳಗೆ ಹೋಗುತ್ತಿದ್ದಾರೆ ಎಂದು ಪ್ರೇಕ್ಷಕರಿಗೆ ಹೇಳಲಾಗಿತ್ತು.

ಅದರಂತೆ ಕಳೆದ ಮೂರು ವಾರಗಳಿಂದ ಮಂಜ ಸ್ಪರ್ಧಿಯಾಗಿ ಅಲ್ಲ, ಬದಲಿಗೆ ಅತಿಥಿಯಾಗಿ ಮನೆಯಲ್ಲಿದ್ದರು. ಈ ವಾರ ಮನೆಯ ಸತ್ಕಾರ ಸ್ವೀಕರಿಸಿದ ಮಂಜ ಅವರನ್ನು ಸುದೀಪ್ ಹೊರಗೆ ಬರುವಂತೆ ಸೂಚಿಸಿದರು. ಈ ಮೂಲಕ ದೊಡ್ಮನೆಯಲ್ಲಿ ಮಂಜ ಅವರ ಎರಡನೇ ಇನ್ನಿಂಗ್ಸ್ ಮುಕ್ತಾಯವಾಗಿದೆ.

ಮಂಜನಿಗೆ ಮತ್ತೊಂದು ಅವಕಾಶ ಕೊಟ್ಟಿದ್ದೇಕೆ ಸುದೀಪ್?

ಮಂಜ ಹೊರಗೆ ಬರುವ ಮುನ್ನ ಕಿಚ್ಚ ಸುದೀಪ್ ಸ್ಪರ್ಧಿಗಳ ಜೊತೆ ಮಹತ್ವದ ಮಾತುಗಳನ್ನಾಡಿದರು. ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ, ಅದೇ ರೀತಿ ಮಂಜ ಕೂಡ ತಪ್ಪು ಮಾಡಿದ್ದ ಎಂದು ಸುದೀಪ್ ಹೇಳಿದರು.

ವೇದಿಕೆ ಮೇಲೆ ಬಂದಾಗ ಮಂಜನ ಕಣ್ಣಲ್ಲಿ ನಿಜವಾದ ಪಶ್ಚಾತ್ತಾಪ ಕಾಣಿಸಿತು. ಹೀಗಾಗಿ ಅವನಿಗೆ ಇನ್ನೊಂದು ಅವಕಾಶ ಕೊಡಬೇಕು ಅನಿಸಿತು ಎಂದು ಸುದೀಪ್ ತಿಳಿಸಿದರು.

ಬೇರೆ ಶೋಗಳಲ್ಲಿ ತಪ್ಪು ಮಾಡಿದ ಸ್ಪರ್ಧಿಗಳಿಗೆ ರೆಡ್ ಕಾರ್ಡ್ ತೋರಿಸಿ ಹೊರಹಾಕುತ್ತಾರೆ. ಆದರೆ ಯಾವುದೇ ಸ್ಪರ್ಧಿಗೆ ರೆಡ್ ಕಾರ್ಡ್ ತೋರಿಸುವ ಇಚ್ಛೆ ನನಗಿಲ್ಲ, ಅದರಿಂದ ಸ್ಪರ್ಧಿಯ ಜೀವನವೇ ಹಾಳಾಗುತ್ತದೆ ಎಂದರು.

BBK 13: ಬದಲಾಗಿ ಹೊರಗೆ ಬರುತ್ತಿದ್ದಾನೆ ಮಂಜ

ಮನೆಯಿಂದ ಹೊರಗೆ ಹೋಗುವ ಎಲ್ಲ ಸ್ಪರ್ಧಿಗಳಿಗೂ ಒಂದು ಒಳ್ಳೆಯ ವಿಟಿ (VT) ಇರಬೇಕು ಎಂಬುದು ನನ್ನ ಆಸೆ. ಬಿಗ್ ಬಾಸ್ ಅವರಿಗೆ ಒಂದು ಸುಂದರ ಪಯಣವಾಗಿ ಕಾಣಿಸಬೇಕು ಎಂದು ಸುದೀಪ್ ಹೇಳಿದರು.

ಹಾಗಾಗಿಯೇ ಮಂಜನಿಗೆ ಮತ್ತೊಂದು ಅವಕಾಶ ನೀಡಿದೆ, ಅದು ನನ್ನ ವೈಯಕ್ತಿಕ ಆಯ್ಕೆಯಾಗಿತ್ತು ಎಂದರು. ಮಂಜ ತಪ್ಪು ಮಾಡಿ ಹೊರಗೆ ಹೋಗಿದ್ದ, ಆದರೆ ಈಗ ಬದಲಾಗಿ ಹೊರಗೆ ಬರುತ್ತಿದ್ದಾನೆ ಎಂದು ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದರು.