‘ಬಿಗ್ಬಾಸ್ ಕನ್ನಡ’ (BBK 13) ಮನೆಯಲ್ಲಿ ಈ ವಾರ ಹಲವು ಆಸಕ್ತಿಕರ ಟಾಸ್ಕ್ಗಳು ನಡೆದಿವೆ. ವಾರದ ಆರಂಭದಲ್ಲಿಯೇ ಆಸಿಯಾ, ಸೌಂದರ್ಯಾ ಮತ್ತು ಗಾನವಿ ಎಂಬ ಮೂವರು ಯುವರಾಣಿಯರನ್ನು ಆಯ್ಕೆ ಮಾಡಲಾಗಿತ್ತು.
ಮಹಾರಾಣಿ ಪಟ್ಟಕ್ಕೇರಲು ಈ ಮೂವರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ನಡುವೆ ಬಿಗ್ಬಾಸ್ ಹಲವು ವಿಭಿನ್ನ ಟಾಸ್ಕ್ಗಳನ್ನು ನೀಡಿದ್ದರು.
ಆರಂಭದಿಂದಲೇ ಮನೆಯ ಸದಸ್ಯರ ಸಾಕಷ್ಟು ವಿರೋಧ ಇತ್ತು. ಆದರೂ ಅಂತಿಮವಾಗಿ ಗಾನವಿ ವಿಜೇತರಾಗಿ, ಬಿಗ್ಬಾಸ್ ಮನೆಯ ಮಹಾರಾಣಿಯಾಗಿ ಹೊರಹೊಮ್ಮಿದ್ದಾರೆ.
ಮಹಾರಾಣಿ ಪಟ್ಟದ ಟಾಸ್ಕ್ನಲ್ಲಿ ನಡೆದಿದ್ದೇನು?
ಸೌಂದರ್ಯಾರನ್ನು ಆಸಿಯಾ ನಾಮಿನೇಟ್ ಮಾಡಿ ಮಹಾರಾಣಿ ರೇಸಿನಿಂದ ಹೊರಗೆ ಹಾಕಿದರು. ನಂತರ ಅಂತಿಮ ಸುತ್ತಿನಲ್ಲಿ ಆಸಿಯಾ ಮತ್ತು ಗಾನವಿ ನಡುವೆ ಸ್ಪರ್ಧೆ ನಡೆಯಿತು.
ಗಾನವಿ ಪರವಾಗಿ ಗಗನ್ ಹಾಗೂ ಆಸಿಯಾ ಪರವಾಗಿ ಪ್ರಶಾಂತ್ ಟಾಸ್ಕ್ ಆಡಿದರು. ಮರದ ದಿಮ್ಮೆಗಳನ್ನು ಹುಡುಕಿ ಜೋಡಿಸುವ ಟಾಸ್ಕ್ ಇದಾಗಿತ್ತು.
ಈ ವೇಳೆ ಗಗನ್ ಅವರು ಪ್ರಶಾಂತ್ಗೆ ಸಿಗಬೇಕಿದ್ದ ಮರದ ತುಂಡನ್ನು ಬಚ್ಚಿಟ್ಟರು. ಇದರಿಂದ ಆಸಿಯಾ ಸೋತು, ಗಾನವಿ ಮಹಾರಾಣಿ ಆದರು. ಹಲವು ಬಾರಿ ಫೈನಲ್ ವರೆಗೆ ಬಂದು ಸೋತಿದ್ದ ಆಸಿಯಾಗೆ ಮತ್ತೊಮ್ಮೆ ನಿರಾಸೆಯಾಯಿತು.
ಇದನ್ನು ಓದಿ: BBK 13: ಜಗಳಗಳ ನಡುವೆ ದೊಡ್ಮನೆಯಲ್ಲಿ ಹಬ್ಬದ ವಾತಾವರಣ; ಹಸಿದಿದ್ದ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಪ್ರೀತಿಯ ಉಡುಗೊರೆ
BBK 13: ಗಾನವಿ, ಗಗನ್ ಇಬ್ಬರೂ ಕ್ಯಾಪ್ಟನ್; ಮನೆ ನಡೆಸುವುದೇಗೆ?
ಮಹಾರಾಣಿ ಆದ ಗಾನವಿಯನ್ನು ಮನೆಯ ಸದಸ್ಯರು ಹೂವು ಚೆಲ್ಲಿ ಮೆರವಣಿಗೆ ಮಾಡಿದರು. ನಂತರ ಅವರನ್ನು ಮಹಾರಾಣಿಯ ಸಿಂಹಾಸನದ ಮೇಲೆ ಕೂರಿಸಲಾಯಿತು.
ಗಾನವಿ ಪರವಾಗಿ ಆಡಿದ ಗಗನ್ ಅವರು ಮಹಾರಾಣಿಗೆ ಪಟ್ಟಾಭಿಷೇಕ ಮಾಡಿದರು. ಇದರ ಬೆನ್ನಲ್ಲೇ ಬಿಗ್ಬಾಸ್ ಗಾನವಿಯನ್ನು ಮನೆಯ ಕ್ಯಾಪ್ಟನ್ ಆಗಿ ಘೋಷಿಸಿದರು.
ಜೊತೆಗೆ ಗಾನವಿ ಪರವಾಗಿ ಆಡಿದ ಗಗನ್ ಅವರಿಗೂ ಕ್ಯಾಪ್ಟನ್ ಪಟ್ಟ ನೀಡಲಾಯಿತು. ಹೀಗಾಗಿ ಈ ವಾರ ಬಿಗ್ಬಾಸ್ ಮನೆಗೆ ಇಬ್ಬರು ಕ್ಯಾಪ್ಟನ್ಗಳಾಗಿದ್ದಾರೆ.
ವಾರದ ಆರಂಭದಲ್ಲಿ ಗಾನವಿ ಮಹಾರಾಣಿ ಆಗಬಾರದೆಂದು ಹಲವರು ಮತ ಹಾಕಿದ್ದರು. ಆದರೆ ಎಲ್ಲಾ ವಿರೋಧದ ನಡುವೆಯೂ ಗಾನವಿ ಗೆದ್ದಿದ್ದಾರೆ. ಇಬ್ಬರು ಕ್ಯಾಪ್ಟನ್ಗಳು ಸೇರಿ ಮನೆಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.




