☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 27°C | AQI 180
Bengaluru: ☀️ 24°C | AQI 112
☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 27°C | AQI 180
Bengaluru: ☀️ 24°C | AQI 112

ನಿಲ್ಲದ ‘ರಾಮಾಯಣ’ ಕಲೆಕ್ಷನ್ ಸುನಾಮಿ; 13 ದಿನಕ್ಕೆ ವಿಶ್ವದಾದ್ಯಂತ ಬರೋಬ್ಬರಿ 1,483 ಕೋಟಿ ರೂ. ಗಳಿಕೆ

Ramayana Box Office Collection Day 13 Ranbir Kapoor Yash Crosses 1483 Crore Worldwide
ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ 'ರಾಮಾಯಣ' ಸಿನಿಮಾ 13ನೇ ದಿನಕ್ಕೆ ಭಾರತದಲ್ಲಿ 820 ಕೋಟಿ ರೂ. ದಾಟಿದ್ದು, ವಿಶ್ವದಾದ್ಯಂತ 1,483 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ.

ಮುಖ್ಯಾಂಶಗಳು

  • ವಿಶ್ವದಾದ್ಯಂತ 1,483 ಕೋಟಿ ರೂ. ದಾಟಿದ 'ರಾಮಾಯಣ'.
  • 13ನೇ ದಿನ ಭಾರತದಲ್ಲಿ 28.35 ಕೋಟಿ ರೂ. ಕಲೆಕ್ಷನ್.
  • ಥಿಯೇಟರ್ ಬಳಿಕ ಜಿಯೋ ಹಾಟ್ಸ್ಟಾರ್ನಲ್ಲಿ ಸಿನಿಮಾ ಲಭ್ಯ.

ರಾಮಾಯಣ: ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಬಿಡುಗಡೆಯಾದ ದಿನದಿಂದಲೂ ಈ ಚಿತ್ರವು ಹೊಸ ಹೊಸ ದಾಖಲೆಗಳನ್ನು ನಿರ್ಮಿಸುತ್ತಾ ಮುನ್ನುಗ್ಗುತ್ತಿದೆ.

ಕೇವಲ 13 ದಿನಗಳಲ್ಲಿ ಈ ಸಿನಿಮಾ ಭಾರತೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ 820 ಕೋಟಿ ರೂಪಾಯಿ ಗಡಿಯನ್ನು ದಾಟಿದೆ. ಅಷ್ಟೇ ಅಲ್ಲದೆ ವಿಶ್ವದಾದ್ಯಂತ ಒಟ್ಟು 1,483 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಬರೆದಿದೆ.

ಮೊದಲ ವಾರದ ಭರ್ಜರಿ ಗಳಿಕೆ ಬಳಿಕ ದೈನಂದಿನ ಕಲೆಕ್ಷನ್‌ನಲ್ಲಿ ಕೊಂಚ ಇಳಿಕೆ ಕಂಡುಬಂದರೂ, ಭಾರತದಲ್ಲಿ ಸಿನಿಮಾ ಒಟ್ಟು ಗಳಿಕೆಯು ಈಗ 850 ಕೋಟಿ ರೂ. ಮೈಲಿಗಲ್ಲಿನತ್ತ ವೇಗವಾಗಿ ದಾಪುಗಾಲು ಇಡುತ್ತಿದೆ.

13ನೇ ದಿನದ ನಿತ್ಯದ ಕಲೆಕ್ಷನ್ ಲೆಕ್ಕಾಚಾರ ಹೇಗಿದೆ?

ಬಿಡುಗಡೆಯಾದ 13ನೇ ದಿನದಂದು (ಮಂಗಳವಾರ) ‘ರಾಮಾಯಣ’ ಚಿತ್ರವು ದೇಶಾದ್ಯಂತ ಒಟ್ಟು 22,551 ಪ್ರದರ್ಶನಗಳನ್ನು ಕಂಡಿದೆ. ಈ ಮೂಲಕ ಒಂದೇ ದಿನದಲ್ಲಿ 28.35 ಕೋಟಿ ರೂ. ನೆಟ್ ಕಲೆಕ್ಷನ್ ಬಾಚಿಕೊಂಡಿದೆ.

ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಕಲೆಕ್ಷನ್ 820.95 ಕೋಟಿ ರೂಪಾಯಿಗಳಿಗೆ ತಲುಪಿದೆ. ಇನ್ನು ಭಾರತೀಯ ಬಾಕ್ಸ್ ಆಫೀಸ್‌ನ ಒಟ್ಟು ಗ್ರಾಸ್ ಗಳಿಕೆಯು 981.10 ಕೋಟಿ ರೂ. ಗಡಿ ದಾಟಿದ್ದು, ಇಂದು ಸಾವಿರ ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ.

ವಿವಿಧ ಭಾಷೆಗಳ ಗಳಿಕೆಯನ್ನು ನೋಡುವುದಾದರೆ, ಹಿಂದಿ ಆವೃತ್ತಿಯು 17,867 ಪ್ರದರ್ಶನಗಳೊಂದಿಗೆ 20.75 ಕೋಟಿ ರೂ. ಗಳಿಸಿದೆ. ಮಲಯಾಳಂನಲ್ಲಿ 2.35 ಕೋಟಿ, ಕನ್ನಡದಲ್ಲಿ 2.00 ಕೋಟಿ, ತಮಿಳಿನಲ್ಲಿ 1.75 ಕೋಟಿ ಹಾಗೂ ತೆಲುಗಿನಲ್ಲಿ 1.50 ಕೋಟಿ ರೂ. ನೆಟ್ ಕಲೆಕ್ಷನ್ ಆಗಿದೆ.

ವಿದೇಶದಲ್ಲೂ ‘ರಾಮಾಯಣ’ ಹವಾ; 1500 ಕೋಟಿ ಸನಿಹದಲ್ಲಿ ಚಿತ್ರ

ಕೇವಲ ಭಾರತದಲ್ಲಷ್ಟೇ ಅಲ್ಲದೆ ವಿದೇಶಿ ಮಾರುಕಟ್ಟೆಯಲ್ಲೂ ‘ರಾಮಾಯಣ’ ಚಿತ್ರದ ಅಬ್ಬರ ಜೋರಾಗಿದೆ. 13ನೇ ದಿನ ವಿದೇಶಗಳಿಂದ 12.00 ಕೋಟಿ ರೂಪಾಯಿ ಕಲೆಕ್ಷನ್ ಹರಿದುಬಂದಿದೆ.

ಇದುವರೆಗೆ ವಿದೇಶಿ ಮಾರುಕಟ್ಟೆಯಿಂದ ಒಟ್ಟು 502.00 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ದಾಖಲಾಗಿದೆ. ಈ ಮೂಲಕ ಚಿತ್ರದ ಒಟ್ಟು ವಿಶ್ವಾದ್ಯಂತ ಗಳಿಕೆಯು ಬರೋಬ್ಬರಿ 1,483.10 ಕೋಟಿ ರೂಪಾಯಿ ತಲುಪಿದ್ದು, 1,500 ಕೋಟಿ ಕ್ಲಬ್ ಸೇರುವುದು ಪಕ್ಕಾ ಆಗಿದೆ.

ನಿತೇಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ಮಿಂಚಿದ್ದಾರೆ. ಥಿಯೇಟರ್ ಪ್ರದರ್ಶನ ಮುಗಿದ ಬಳಿಕ ಈ ಚಿತ್ರ ಜಿಯೋ ಹಾಟ್‌ಸ್ಟಾರ್‌ನಲ್ಲಿ (JioHotstar) ಆನ್-ಡಿಮ್ಯಾಂಡ್ ಖರೀದಿಯ ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ.