☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

ನವರಸ ನಾಯಕ-ಡಿಂಪಲ್ ಕ್ವೀನ್ ಜುಗಲ್ಬಂದಿ; ಜಗ್ಗೇಶ್, ರಚಿತಾ ರಾಮ್ ಹೊಸ ಸಿನಿಮಾಗೆ ಸ್ಕ್ರಿಪ್ಟ್ ರೆಡಿ

Jaggesh Rachita Ram New Kannada Movie Directed By Nagaraj Peenya 2027 Update
ನವರಸ ನಾಯಕ ಜಗ್ಗೇಶ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಬರಲಿದ್ದು, 2027ರ ಆರಂಭದಲ್ಲಿ ಚಿತ್ರೀಕರಣ ಶುರುವಾಗಲಿದೆ.

ಮುಖ್ಯಾಂಶಗಳು

  • ಜಗ್ಗೇಶ್-ರಚಿತಾ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ.
  • ನಾಗರಾಜ್ ಪೀಣ್ಯ ನಿರ್ದೇಶನದಲ್ಲಿ ಚಿತ್ರ ತಯಾರಿ.
  • 2027ರ ಆರಂಭದಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ.

ನವರಸ ನಾಯಕ-ಡಿಂಪಲ್ ಕ್ವೀನ್ ಸ್ಯಾಂಡಲ್‌ವುಡ್‌ನಲ್ಲಿ ಈಗ ಹೊಸದೊಂದು ಕ್ರೇಜಿ ಕಾಂಬಿನೇಷನ್ ಸುದ್ದಿ ಸಖತ್ ಸದ್ದು ಮಾಡುತ್ತಿದೆ. ನವರಸ ನಾಯಕ ಜಗ್ಗೇಶ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತು ಗಾಂಧಿನಗರದ ಗಲ್ಲಿಗಳಲ್ಲಿ ಜೋರಾಗಿ ಕೇಳಿಬರುತ್ತಿದೆ.

ಇದು ನಟಿ ರಚಿತಾ ರಾಮ್ ಅಭಿಮಾನಿಗಳಿಗೆ ಸಖತ್ ಖುಷಿ ಕೊಡುವ ಸುದ್ದಿಯಾಗಿದೆ. ಅತ್ತ ಜಗ್ಗೇಶ್ ಅಭಿಮಾನಿಗಳಿಗಂತೂ ಡಬಲ್ ತ್ರಿಬಲ್ ಸಂಭ್ರಮ ಶುರುವಾಗಿದೆ.

ಎಲ್ಲಾ ಅಂದುಕೊಂಡಂತೆ ನಡೆದರೆ 2027ರ ಆರಂಭದಲ್ಲೇ ಇವರಿಬ್ಬರ ಜೋಡಿಯ ಹೊಸ ಸಿನಿಮಾ ಸೆಟ್ಟೇರುವುದು ಪಕ್ಕಾ ಎನ್ನಲಾಗುತ್ತಿದೆ.

ಬಹುತೇಕ ಎಲ್ಲಾ ಸ್ಟಾರ್‌ಗಳ ಜೊತೆ ನಟಿಸಿರುವ ರಚಿತಾ

ಡಿಂಪಲ್ ಕ್ವೀನ್ ರಚಿತಾ ರಾಮ್ ಈಗಾಗಲೇ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ದರ್ಶನ್, ಸುದೀಪ್, ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್, ಉಪೇಂದ್ರ, ಶ್ರೀಮುರಳಿ, ದುನಿಯಾ ವಿಜಯ್ ಹಾಗೂ ಧ್ರುವ ಸರ್ಜಾ ಜೊತೆ ಅವರು ಸಿನಿಮಾ ಮಾಡಿದ್ದಾರೆ.

ಆದರೆ ಇದುವರೆಗೂ ಯಶ್, ರಿಷಭ್ ಶೆಟ್ಟಿ ಹಾಗೂ ಜಗ್ಗೇಶ್ ಜೊತೆ ಮಾತ್ರ ರಚಿತಾ ರಾಮ್ ನಟಿಸಿರಲಿಲ್ಲ. ಇದೀಗ ಜಗ್ಗೇಶ್ ಜೊತೆ ರಚಿತಾ ಹೊಸ ಸಿನಿಮಾ ಮಾಡುತ್ತಿದ್ದಾರೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ರಜನಿಕಾಂತ್ ಅವರ ‘ಕೂಲಿ’ ಸಿನಿಮಾದಲ್ಲಿ ನಟಿಸಿ ತಮಿಳು ಪ್ರೇಕ್ಷಕರ ಮನಗೆದ್ದಿದ್ದ ರಚಿತಾ, ‘ಅಯೋಗ್ಯ 2’ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ.

ಜಗ್ಗೇಶ್ ಅಭಿಮಾನಿಗಳಿಗೆ ಭರ್ಜರಿ ಹಬ್ಬದೂಟ ಗ್ಯಾರಂಟಿ

ನವರಸ ನಾಯಕ ಜಗ್ಗೇಶ್ ಕೂಡ ಸಿನಿಮಾಗಳಲ್ಲಿ ನಟಿಸದೇ ಕೆಲವು ವರ್ಷಗಳೇ ಕಳೆದಿವೆ. 2024ರಲ್ಲಿ ಬಿಡುಗಡೆಯಾಗಿದ್ದ ‘ರಂಗನಾಯಕ’ ಸಿನಿಮಾದಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು.

ಆ ಬಳಿಕ ಸಿನಿಮಾಗಳಿಂದ ಕೊಂಚ ದೂರ ಉಳಿದಿದ್ದ ಜಗ್ಗೇಶ್, ಜೀ ಕನ್ನಡದ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಮಿಂಚಿದ್ದರು. ಇದೀಗ 2027ರಲ್ಲಿ ರಚಿತಾ ರಾಮ್ ಜೊತೆ ಜಗ್ಗೇಶ್ ಸಿನಿಮಾ ಮಾಡಿದರೆ ಅಭಿಮಾನಿಗಳಿಗೆ ಹಬ್ಬದೂಟ ಗ್ಯಾರಂಟಿ.

ಇವರಿಬ್ಬರ ಕಾಮಿಡಿ ಮತ್ತು ಅಭಿನಯದ ಜುಗಲ್‌ಬಂದಿ ತೆರೆಯ ಮೇಲೆ ಯಾವ ರೀತಿ ಮೋಡಿ ಮಾಡಲಿದೆ ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದೆ.

ನವರಸ ನಾಯಕ-ಡಿಂಪಲ್ ಕ್ವೀನ್: ಈ ಕ್ರೇಜಿ ಸಿನಿಮಾಕ್ಕೆ ನಿರ್ದೇಶಕರು ಯಾರು?

ಜಗ್ಗೇಶ್ ಮತ್ತು ರಚಿತಾ ರಾಮ್ ಕಾಂಬಿನೇಷನ್‌ನ ಈ ಹೊಸ ಸಿನಿಮಾಕ್ಕೆ ನಿರ್ದೇಶಕ ನಾಗರಾಜ್ ಪೀಣ್ಯ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಹಿಂದೆ ‘ಪದೇ ಪದೇ’, ‘ಭೂತಯ್ಯನ ಮೊಮ್ಮಗ ಅಯ್ಯು’ ಹಾಗೂ ‘ನಮಕ್ ಹರಾಮ್’ ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು.

ಸದ್ಯ ನಾಗರಾಜ್ ಪೀಣ್ಯ ಅವರು ನಿರೂಪ್ ಭಂಡಾರಿ ನಟನೆಯ ‘ಅತಿಕಾಯ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಈ ನಡುವೆ ಜಗ್ಗೇಶ್ ಮತ್ತು ರಚಿತಾ ಚಿತ್ರಕ್ಕಾಗಿ ಅವರು ಸ್ಕ್ರಿಪ್ಟ್ ಅಂತಿಮಗೊಳಿಸಿದ್ದು, ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ ಎಂದು ವರದಿಯಾಗಿದೆ.