☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

RAHUL GANDHI : ಪ್ರೀತಿ ಬಗ್ಗೆ ಮಾತನಾಡಿದ್ದಕ್ಕೆ ಟೀಕೆ, ಶಿವ-ಪಾರ್ವತಿ ಚಿತ್ರದ ಮೂಲಕ ರಾಹುಲ್ ಕೌಂಟರ್

Image of Rahul Gandhi
ಸೋನಿಯಾ & ರಾಜೀವ್ ಗಾಂಧಿ ನಡುವಿನ ಪ್ರೀತಿಯ ಬಂಧದ ಬಗ್ಗೆ ಮಾತನಾಡಿದ್ದ ರಾಹುಲ್ ಗಾಂಧಿ (Rahul Gandhi) ಅವರ ಹೇಳಿಕೆಗೆ ಬಿಜೆಪಿ ಟೀಕೆ

ಮುಖ್ಯಾಂಶಗಳು

  • ಬಿಜೆಪಿಗೆ ರಾಗಾ ಕೌಂಟರ್
  • ಶಿವ ಪಾರ್ವತಿ ಫೋಟೋ ಹಂಚಿಕೊಂಡ ರಾಹುಲ್

ನವದೆಹಲಿ: ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಡುಗಡೆ ಕಾರ್ಯಕ್ರಮದಲ್ಲಿ ತಂದೆ ರಾಜೀವ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ನಡುವಿನ ಪ್ರೀತಿಯ ಬಂಧದ ಬಗ್ಗೆ ಮಾತನಾಡಿದ್ದ ರಾಹುಲ್ ಗಾಂಧಿ (Rahul Gandhi) ಅವರ ಹೇಳಿಕೆಗೆ ಬಿಜೆಪಿ ಟೀಕೆ ವ್ಯಕ್ತಪಡಿಸಿದ ಬೆನ್ನಲ್ಲೇ, ಮಂಗಳವಾರ ಅವರು ಶಿವ ಮತ್ತು ಪಾರ್ವತಿ ದೇವಿಯ ಅಪ್ಪುಗೆಯ ಚಿತ್ರವನ್ನು ಹಂಚಿಕೊಂಡು ತಿರುಗೇಟು ನೀಡಿದ್ದಾರೆ. ಬಾಲ್ಯದಲ್ಲಿ ಕುಟುಂಬದ ಊಟದ ವೇಳೆ ತಂದೆಯ ಮಡಿಲಲ್ಲಿ ತಾಯಿ ಕುಳಿತಿರುತ್ತಿದ್ದರು ಎಂದು ಸೋಮವಾರ ಸಂಜೆ ದೆಹಲಿಯಲ್ಲಿ ನಡೆದ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಪುಸ್ತಕ ಬಿಡುಗಡೆಯಲ್ಲಿ ರಾಹುಲ್ ನೆನಪಿಸಿಕೊಂಡಿದ್ದರು. ಇದೇ ಮಾತು ಸಾಮಾನ್ಯ ಎಂದು ತಾವು ಭಾವಿಸಿದ್ದೆವು, ಸ್ನೇಹಿತರ ಮನೆಗೆ ಹೋದಾಗ ಅವರ ಪೋಷಕರು ಹೀಗೆ ಕುಳಿತಿರುವುದನ್ನು ಕಾಣದೆ ಅಚ್ಚರಿಯಾಗುತ್ತಿತ್ತು ಎಂದು ಅವರು ಹೇಳಿದ್ದರು. ತಾಯಿ ತಂದೆಗೆ ಸೇರಿದ್ದವರು, ತಂದೆ ತಾಯಿಗೆ ಸೇರಿದ್ದವರು ಎಂದು ಅವರು ತಮ್ಮ ಪೋಷಕರ ಅನ್ಯೋನ್ಯತೆಯನ್ನು ವಿವರಿಸಿದ್ದರು.

ತಾಯಿಗೆ ಮುಜುಗರ ತಂದ ಮಗ !

ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ರಾಹುಲ್ ಗಾಂಧಿ ವಿರುದ್ಧ ವ್ಯಂಗ್ಯ ಮಾಡಿದ್ದರು. ತಾಯಿಯ ವಿಶೇಷ ದಿನದಂದು ಕೂಡ ಅವರಿಗೆ ಮುಜುಗರ ತಪ್ಪಿಸಲಿಲ್ಲ ಎಂದು ಅವರು ಎಕ್ಸ್ ನಲ್ಲಿ ಬರೆದು ರಾಹುಲ್ ಮಾತನಾಡಿದ ವಿಡಿಯೋ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರ್ ಎಸ್ ಎಸ್ ಬೆಂಬಲಿಗರ ಹೃದಯದಲ್ಲಿ ಭಯ, ಕೋಪ ಮತ್ತು ದ್ವೇಷವು ಬಲೆ ಹೆಣೆದಿದ್ದು, ಅದು ಪ್ರೀತಿಯನ್ನು ಅನುಭವಿಸಲು ಮತ್ತು ವ್ಯಕ್ತಪಡಿಸಲು ಅಡ್ಡಿಯಾಗುತ್ತಿದೆ ಎಂದು ಬರೆದಿದ್ದಾರೆ. ನಿಜವಾದ ಹಿಂದೂವಾಗಿ ಅವರನ್ನು ಈ ಬಲೆಯಿಂದ ಮುಕ್ತಗೊಳಿಸಿ ಪ್ರೀತಿ ಮತ್ತು ಒಗ್ಗಟ್ಟಿನ ಸೌಂದರ್ಯ ಹಾಗೂ ಸಂತೋಷವನ್ನು ಅನುಭವಿಸುವಂತೆ ಮಾಡುವುದು ತಮ್ಮ ಕರ್ತವ್ಯ ಎಂದು ಅವರು ಹೇಳಿದ್ದು, ಸತ್ಯಂ ಶಿವಂ ಸುಂದರಂ ಎಂದು ಪೋಸ್ಟ್ ಮುಗಿಸಿದ್ದಾರೆ.

ಇದನ್ನೂ ಓದಿ : ಸೋನಿಯಾ ಗಾಂಧಿ ‘Belonging’ ಪುಸ್ತಕ ಬಿಡುಗಡೆ: ಮನಬಿಚ್ಚಿ ಮಾತನಾಡಿದ ಅಧಿನಾಯಕಿ

ಒಬ್ಬ ಮಗ ತನ್ನ ತಾಯಿಯ ಪುಸ್ತಕ ಬಿಡುಗಡೆಯಲ್ಲಿ ಪೋಷಕರ ಪ್ರೀತಿಯನ್ನು ನೆನಪಿಸಿಕೊಳ್ಳುವುದು ವೈಯಕ್ತಿಕ ಭಾವನೆಯ ಹಂಚಿಕೆಯಾಗಿತ್ತು, ಆದರೆ ಅದು ರಾಜಕೀಯ ವಾಗ್ವಾದಕ್ಕೆ ತಿರುಗಿದ್ದು ಈಗಿನ ರಾಜಕಾರಣದ ಮಟ್ಟವನ್ನು ತೋರಿಸುತ್ತದೆ. ಕುಟುಂಬದ ಖಾಸಗಿ ನೆನಪನ್ನು ಸಾರ್ವಜನಿಕವಾಗಿ ಎಳೆದು ವ್ಯಂಗ್ಯ ಮಾಡುವುದು ಎದುರಾಳಿಯನ್ನು ಮುಜುಗರಕ್ಕೀಡು ಮಾಡುವ ತಂತ್ರವಾಗಿದ್ದರೆ, ಅದಕ್ಕೆ ಧರ್ಮದ ಸಂಕೇತದ ಮೂಲಕ ಉತ್ತರ ನೀಡುವುದು ರಾಹುಲ್ ಅವರ ಪ್ರತಿತಂತ್ರವಾಗಿದೆ. ಪ್ರೀತಿಯನ್ನೇ ರಾಜಕೀಯ ಭಾಷೆಯನ್ನಾಗಿ ಮಾಡುವ ಪ್ರಯತ್ನದಲ್ಲಿ ರಾಹುಲ್ ತಾವು ಹಿಂದೂ ಧರ್ಮದ ಮೃದು ಮುಖವನ್ನು ಪ್ರತಿನಿಧಿಸುತ್ತೇನೆ ಎಂದು ಬಿಂಬಿಸಿಕೊಳ್ಳಲು ಬಯಸುತ್ತಿದ್ದಾರೆ. ಆದರೆ ಇಂತಹ ವೈಯಕ್ತಿಕ ವಿಚಾರಗಳು ಚರ್ಚೆಯ ಕೇಂದ್ರವಾದಾಗ ಮೂಲ ವಿಷಯವಾದ ಪುಸ್ತಕದ ಆಶಯ, ಸೋನಿಯಾ ಗಾಂಧಿ ಅವರ ಜೀವನ ಪಯಣ ಮರೆಯಾಗಿ, ಕೇವಲ ಪಕ್ಷಗಳ ನಡುವಿನ ಕೆಸರೆರಚಾಟವೇ ಮುನ್ನೆಲೆಗೆ ಬರುತ್ತದೆ.