☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

ED : ಆರ್‌ಡಿಪಿಆರ್ ಎಇಇ ಪರೀಕ್ಷಾ ಅಕ್ರಮದಲ್ಲಿ ಇಡಿ ವಿಚಾರಣೆ, ಪ್ರಿಯಾಂಕ್ ಖರ್ಗೆಗೆ ಸಂಕಷ್ಟ..?

Image of ED Investigation
ಬೆಂಗಳೂರು : KPSC ನೇಮಕಾತಿ ಹಗರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಇಡಿ (ED) ಈಗ ಮತ್ತೊಂದು ಪ್ರಮುಖ ಪ್ರಕರಣದತ್ತ ಗಮನ ಹರಿಸಿದೆ.

ಮುಖ್ಯಾಂಶಗಳು

  • ಗೃಹ ಸಚಿವರ ಬುಡಕ್ಕೆ ಇಡಿ ತನಿಖೆ.?
  • ಪ್ರಿಯಾಂಕ್ ಖರ್ಗೆಗೆ ಸಂಕಷ್ಟ ..?

ಬೆಂಗಳೂರು : KPSC ನೇಮಕಾತಿ ಹಗರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಇಡಿ (ED) ಈಗ ಮತ್ತೊಂದು ಪ್ರಮುಖ ಪ್ರಕರಣದತ್ತ ಗಮನ ಹರಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಅದರ ಹಿನ್ನೆಲೆಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಕೂಡ ಪ್ರಸ್ತಾಪವಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಆಳವಾದ ವಿಚಾರಣೆಯನ್ನು ಆರಂಭಿಸಿದ್ದಾರೆ.

ಆರ್‌ಡಿಪಿಆರ್ ಪರೀಕ್ಷೆಯಲ್ಲಿ ಅಕ್ರಮ ..?

ಈ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಶಿವಶಂಕರಪ್ಪ ಸಾಹುಕಾರ್, ಗ್ಯಾನೇಂದ್ರ ಮತ್ತು ಗೀತಾ ಎಂಬ ಮೂವರನ್ನು ಕರೆಸಿ ಸುದೀರ್ಘವಾಗಿ ಪ್ರಶ್ನಿಸಿದ್ದಾರೆ. ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಅಧಿಕಾರಿಗಳು, ಆರ್‌ಡಿಪಿಆರ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆಯೇ, ಓಎಂಆರ್ ಶೀಟ್‌ಗಳನ್ನು ತಿದ್ದುಪಡಿ ಮಾಡಲಾಗಿದೆಯೇ ಎಂಬ ಪ್ರಮುಖ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವಂತೆ ಸೂಚಿಸಿದ್ದಾರೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ನಡೆದಿರಬಹುದಾದ ಲೋಪದೋಷಗಳು, ಅಂಕಪಟ್ಟಿ ಬದಲಾವಣೆಯ ಸಾಧ್ಯತೆ ಮತ್ತು ಇದರ ಹಿಂದೆ ಯಾರ ಪಾತ್ರವಿದೆ ಎಂಬುದರ ಬಗ್ಗೆ ಇಡಿ ಮಾಹಿತಿ ಕಲೆಹಾಕುತ್ತಿದೆ.

ಇದನ್ನೂ ಓದಿ : ಮಹಿಳಾ ಕೋಟಾದ ಒಂದು ಸ್ಥಾನ ಯಾರ ಪಾಲು? ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಮತ್ತೆ ಸಚಿವ ಪಟ್ಟ..?

ಒಂದು ನೇಮಕಾತಿ ಪರೀಕ್ಷೆಯಲ್ಲಿ ಓಎಂಆರ್ ಶೀಟ್ ತಿದ್ದುಪಡಿಯಂತಹ ಆರೋಪ ಕೇಳಿಬರುವುದೇ ಅತ್ಯಂತ ಗಂಭೀರ ವಿಷಯ. ಇದು ಸಾವಿರಾರು ಅಭ್ಯರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದ್ದು, ಆಯ್ಕೆ ಪ್ರಕ್ರಿಯೆಯ ಪಾರದರ್ಶಕತೆಯ ಮೇಲೆಯೇ ಅನುಮಾನ ಮೂಡಿಸುತ್ತದೆ. ಸಚಿವರೊಬ್ಬರ ಹೆಸರು ಪ್ರಸ್ತಾಪವಾಗಿರುವುದರಿಂದ ಪ್ರಕರಣಕ್ಕೆ ರಾಜಕೀಯ ಆಯಾಮವೂ ಸಿಕ್ಕಿದೆ. ಇಡಿ ವಿಚಾರಣೆ ಕೇವಲ ಹೇಳಿಕೆ ದಾಖಲಿಸುವುದಕ್ಕೆ ಸೀಮಿತವಾಗದೆ, ದಾಖಲೆಗಳು, ಹಣಕಾಸು ವ್ಯವಹಾರ ಮತ್ತು ಪರೀಕ್ಷಾ ಪ್ರಕ್ರಿಯೆಯ ಸಂಪೂರ್ಣ ಸರಪಳಿಯನ್ನು ಪರಿಶೀಲಿಸಿದರೆ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ. ಆರೋಪ ಸಾಬೀತಾದರೆ ಅದು ಸರ್ಕಾರಕ್ಕೆ ದೊಡ್ಡ ಮುಜುಗರವಾದರೆ, ಆರೋಪ ಸುಳ್ಳಾದರೆ ವಿರೋಧಿಗಳ ರಾಜಕೀಯ ದಾಳಿ ಎಂದೇ ಪರಿಗಣಿಸಬೇಕಾಗುತ್ತದೆ.