ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಭವಿಷ್ಯ ಹಾಗೂ ಜೈಲಿನಿಂದ ಬಿಡುಗಡೆಯಾಗುವ ಸಮಯದ ಬಗ್ಗೆ ಜ್ಯೋತಿಷಿಯೊಬ್ಬರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಈ ಕುರಿತ ವೀಡಿಯೊವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
2027ರ ಮಾರ್ಚ್‌ನಿಂದ ಜೂನ್ ತಿಂಗಳ ಒಳಗಾಗಿ ದರ್ಶನ್ ಅವರು ಜೈಲಿನಿಂದ ಹೊರಬರುವುದು ಪಕ್ಕಾ ಎಂದು ಜ್ಯೋತಿಷಿ ಭರವಸೆಯಿಂದ ಹೇಳಿದ್ದಾರೆ. ಅಲ್ಲಿಯವರೆಗೆ ಉನ್ನತ ನ್ಯಾಯಾಲಯಗಳಲ್ಲಿ (Higher Courts) ಕಾನೂನು ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಸರಸ್ವತಿ ದೇವಿಯ ಆಶೀರ್ವಾದ ಪಡೆದು ನಾನು ಈ ಮಾತು ಹೇಳುತ್ತಿದ್ದೇನೆ, ಬೇಕಿದ್ದರೆ ಬರೆದಿಟ್ಟುಕೊಳ್ಳಿ ಎಂದು ಅವರು ಸವಾಲು ಹಾಕಿದ್ದಾರೆ. ಈ ಭವಿಷ್ಯವಾಣಿ ಈಗ ದರ್ಶನ್ ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ.
ಶನಿ ದಶೆ ಬದಲಾವಣೆ ಹಾಗೂ ರಾಜಕೀಯ ಯೋಗ
ಸದ್ಯ ದರ್ಶನ್ ಅವರಿಗೆ ಗುರು ದಶೆ ನಡೆಯುತ್ತಿದ್ದು, ಅದು 2027ರ ಮಾರ್ಚ್‌ಗೆ ಮುಕ್ತಾಯವಾಗಲಿದೆ ಎಂದು ಜ್ಯೋತಿಷಿ ವಿಶ್ಲೇಷಿಸಿದ್ದಾರೆ. ಆ ನಂತರ ಅವರಿಗೆ ಶನಿ ದಶೆ ಪ್ರಾರಂಭವಾಗಲಿದ್ದು, ಜಾತಕದಲ್ಲಿ ಶನಿಯು ಹತ್ತನೇ ಮನೆಯನ್ನು ತೋರಿಸುತ್ತಿದ್ದಾನೆ ಎಂದಿದ್ದಾರೆ.
ಹತ್ತನೇ ಮನೆಯಲ್ಲಿ ಶನಿ ಇರುವುದರಿಂದ ಅವರಿಗೆ ಯಥೇಚ್ಛವಾಗಿ ಹಣಕಾಸು ಸಿಗಲಿದ್ದು, ಯಾವುದೇ ತೊಂದರೆ ಇರುವುದಿಲ್ಲ ಎಂದು ಹೇಳಲಾಗಿದೆ. ವಿಶೇಷವೆಂದರೆ ಈ ಗ್ರಹಗತಿಗಳ ಬದಲಾವಣೆಯಿಂದ ದರ್ಶನ್ ಅವರಿಗೆ ದೊಡ್ಡ ಮಟ್ಟದ ರಾಜಕೀಯ ಯೋಗ ಕೂಡಿಬರಲಿದೆ ಎಂದು ಭವಿಷ್ಯ ನುಡಿಯಲಾಗಿದೆ.
ದಳಪತಿ ವಿಜಯ್ ಮಾದರಿಯಲ್ಲಿ ರಾಜಕೀಯ ಪ್ಲ್ಯಾನ್
ಜೈಲಿನಿಂದ ಹೊರಬಂದ ನಂತರ ದರ್ಶನ್ ಅವರು ಸಿನಿಮಾಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದಿಲ್ಲ ಎಂದು ಜ್ಯೋತಿಷಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸುಮ್ಮನೆ ಒಂದೆರಡು ಲೈಟ್ ಆಗಿ ಸಿನಿಮಾಗಳನ್ನು ಮಾಡಬಹುದೇ ಹೊರತು, ಅವರ ಸಂಪೂರ್ಣ ಗಮನ ರಾಜಕೀಯದ ಕಡೆಗೆ ಇರಲಿದೆ ಎಂದಿದ್ದಾರೆ.
ತಮಿಳುನಾಡಿನಲ್ಲಿ ನಟ ದಳಪತಿ ವಿಜಯ್ ಅವರು ಯಾವ ರೀತಿ ಸಿನಿಮಾ ಬಿಟ್ಟು ರಾಜಕೀಯಕ್ಕೆ ಎಂಟ್ರಿ ಕೊಟ್ಟರೋ, ಅದೇ ಪ್ಲ್ಯಾನ್‌ನಲ್ಲಿ ದರ್ಶನ್ ಕೂಡ ಬರುತ್ತಾರೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ 2027ರ ನಂತರ ದರ್ಶನ್ ಅವರ ಜೀವನದಲ್ಲಿ ದೊಡ್ಡ ತಿರುವು ಸಿಗಲಿದೆ ಎಂಬ ಈ ಭವಿಷ್ಯ ಈಗ ಚರ್ಚೆಗೆ ಗ್ರಾಸವಾಗಿದೆ.




