☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

Darshan-Pavitra Gowda: ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ದರ್ಶನ್-ಪವಿತ್ರಾ ಗೌಡ ಮಾತುಕತೆ; ಜೈಲಿನ ಕಷ್ಟ ಬಿಚ್ಚಿಟ್ಟ ಜೋಡಿ

Darshan-Pavitra Gowda: Conversation During Video Conference Court Hearing Renukaswamy Case
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಪರಸ್ಪರ ಮಾತನಾಡಿಕೊಂಡಿದ್ದು, ಜೈಲಿನ ಕಷ್ಟಗಳ ಬಗ್ಗೆ ಚರ್ಚಿಸಿದ್ದಾರೆ.

ಮುಖ್ಯಾಂಶಗಳು

  • ವಿಡಿಯೋ ಕಾನ್ಫರೆನ್ಸ್ ವೇಳೆ ದರ್ಶನ್-ಪವಿತ್ರಾ ಮಾತು.
  • ಇನ್ನೂ 4 ತಿಂಗಳು ಇರಬೇಕಾಗಬಹುದು ಎಂದ ದರ್ಶನ್.
  • ಸಾಕ್ಷಿ ಪುನೀತ್ ಪಾಟಿ ಸವಾಲು ಹಾಗೂ ವೈದ್ಯಕೀಯ ವರದಿ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯು 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂದುವರಿದಿದೆ. ಪ್ರತಿಯೊಮ್ಮೆ ಎಲ್ಲ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿಚಾರಣೆಗೆ ಹಾಜರಾಗುತ್ತಿದ್ದಾರೆ.

ಅದರಂತೆ ಇಂದಿನ ವಿಚಾರಣೆ ವೇಳೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ (Darshan-Pavitra Gowda)ಸೇರಿದಂತೆ ಇತರ ಆರೋಪಿಗಳು ವರ್ಚುವಲ್ ಆಗಿ ಭಾಗಿಯಾಗಿದ್ದರು. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಪರಸ್ಪರ ಮಾತನಾಡಿಕೊಂಡಿರುವ ವಿಚಾರ ಹೊರಬಿದ್ದಿದೆ.

ವಿಡಿಯೋ ಕಾನ್ಫರೆನ್ಸ್ ಕನೆಕ್ಷನ್ ಕಟ್ ಆಗಿದ್ದ ಆ ಸಮಯದಲ್ಲಿ ಇಬ್ಬರೂ ಕೆಲಕಾಲ ಮಾತನಾಡಿದ್ದು, ಕನೆಕ್ಷನ್ ಸರಿ ಹೋದ ಕೂಡಲೇ ಮಾತು ನಿಲ್ಲಿಸಿದ್ದಾರೆ.

“ಇನ್ನೂ ಎಷ್ಟು ದಿನ ಹೀಗೆ?”; ದರ್ಶನ್ ಬಳಿ ಅಳಲು ತೋಡಿಕೊಂಡ ಪವಿತ್ರಾ

ವಿಚಾರಣೆ ವೇಳೆ ಪವಿತ್ರಾ ಗೌಡ ಅವರು ದರ್ಶನ್ ಬಳಿ, “ಇನ್ನೂ ಎಷ್ಟು ದಿನ ಹೀಗೇ ಇರಬೇಕು?” ಎಂದು ಪ್ರಶ್ನೆ ಮಾಡಿದ್ದಾರೆ.

ಅದಕ್ಕೆ ಉತ್ತರಿಸಿದ ದರ್ಶನ್, “ಇನ್ನೂ ನಾಲ್ಕು ತಿಂಗಳಾದರೂ ಹೀಗೇ ಇರಬೇಕಾಗಬಹುದು” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ಓದಿ: Darshan: ಬೆನ್ನುನೋವು ಉಲ್ಬಣ; ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಫ್ಟ್ ಆಗ್ತಾರಾ ನಟ ದರ್ಶನ್? ಇಂದೇ ನಿರ್ಧಾರ

“ಇಲ್ಲಿ ನನಗೆ ಬಹಳ ಸಮಸ್ಯೆ ಆಗುತ್ತಿದೆ” ಎಂದು ಪವಿತ್ರಾ ಗೌಡ ಅಳಲು ತೋಡಿಕೊಂಡಾಗ, “ನಮಗೂ ಸಮಸ್ಯೆ ಆಗುತ್ತಿದೆ, ಸ್ವಲ್ಪ ದಿನ ತಾಳ್ಮೆಯಿಂದ ಇರಬೇಕು” ಎಂದು ದರ್ಶನ್ ಧೈರ್ಯ ತುಂಬಿದ್ದಾರೆ.

Darshan-Pavitra Gowda: ಬೆನ್ನುನೋವಿನ ಬಗ್ಗೆ ಸನ್ನೆ ಮಾಡಿದ ದರ್ಶನ್; ಪ್ರತ್ಯಕ್ಷ ಸಾಕ್ಷಿ ಪಾಟಿ ಸವಾಲು

ಮಾತಿನ ಮಧ್ಯೆ ಪವಿತ್ರಾ ಗೌಡ ಅವರು “ಬೆನ್ನುನೋವು ಈಗ ಹೇಗಿದೆ?” ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ದರ್ಶನ್ ತಮ್ಮ ಬೆನ್ನು ಮುರಿದು ಹೋಗಿದೆ ಎಂಬ ರೀತಿಯಲ್ಲಿ ನೋವಿನ ಸನ್ನೆ ಮಾಡಿದ್ದಾರೆ.

ಇದೇ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಹಾಗೂ ದರ್ಶನ್ ಆಪ್ತ ಪುನೀತ್ ಎಂಬುವವರ ಪಾಟಿ ಸವಾಲು ನಡೆಯಿತು. ಪೊಲೀಸರ ಮುಂದೆ ನೀಡಿದ್ದ ಹೇಳಿಕೆಯನ್ನು ಬದಲಾಯಿಸಿದ್ದ ಪುನೀತ್, ಘಟನೆ ನಡೆದಾಗ ದರ್ಶನ್ ಮತ್ತು ಪವಿತ್ರಾ ಸ್ಥಳದಲ್ಲಿ ಇರಲಿಲ್ಲ ಎಂದಿದ್ದರು.

ಇದೇ ದಿನ ದರ್ಶನ್ ಅವರ ಬೆನ್ನುನೋವಿನ ಚಿಕಿತ್ಸೆಗೆ ಸಂಬಂಧಿಸಿದ ವೈದ್ಯಕೀಯ ವರದಿಯನ್ನು ಜೈಲಿನ ವೈದ್ಯಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.