☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

Pawan Kalyan Divorce: ಮದುವೆಯಾದ 13 ವರ್ಷಗಳ ಬಳಿಕ ಬಿಗ್ ಟ್ವಿಸ್ಟ್; ಮೂರನೇ ಪತ್ನಿಯಿಂದಲೂ ಪ್ರತ್ಯೇಕರಾದ ಜನಸೇನಾ ನಾಯಕ

Pawan Kalyan Divorce: Announces Separation From Third Wife Anna Lezhneva
ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಹಾಗೂ ಅವರ 3ನೇ ಪತ್ನಿ ಅನ್ನಾ ಕೊನಿಡೆಲಾ 13 ವರ್ಷಗಳ ದಾಂಪತ್ಯದ ನಂತರ ಪರಸ್ಪರ ಒಪ್ಪಿಗೆಯಿಂದ ಪ್ರತ್ಯೇಕಗೊಳ್ಳುತ್ತಿರುವುದಾಗಿ ಘೋಷಿಸಿದ್ದಾರೆ.

ಮುಖ್ಯಾಂಶಗಳು

  • 13 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ.
  • 3ನೇ ಪತ್ನಿ ಅನ್ನಾ ಅವರಿಂದ ಪವನ್ ಪ್ರತ್ಯೇಕ.
  • ಮಕ್ಕಳ ಜವಾಬ್ದಾರಿ ಜಂಟಿಯಾಗಿ ನೋಡಿಕೊಳ್ಳುವ ನಿರ್ಧಾರ.

ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಟಾಲಿವುಡ್‌ನ ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan Divorce) ಅವರ ವೈಯಕ್ತಿಕ ಜೀವನದಲ್ಲಿ ಮತ್ತೆ ಬಿರುಗಾಳಿ ಬೀಸಿದೆ. ಪವನ್ ಕಲ್ಯಾಣ್ ಮತ್ತು ಅವರ 3ನೇ ಪತ್ನಿ ಅನ್ನಾ ಕೊನಿಡೆಲಾ ಅವರು 13 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ.

ಇಬ್ಬರೂ ಜಂಟಿ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಪರಸ್ಪರ ಒಪ್ಪಿಗೆಯಿಂದ ಪ್ರತ್ಯೇಕಗೊಳ್ಳುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಜನಸೇನಾ ಪಕ್ಷದ ಅಧಿಕೃತ ವಾಟ್ಸ್‌ಆ್ಯಪ್ ಮಾಧ್ಯಮ ಗುಂಪಿನ ಮೂಲಕ ಪವನ್ ಕಲ್ಯಾಣ್ ಮತ್ತು ಅನ್ನಾ ಈ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

ರಷ್ಯಾ ಮೂಲದ ಅನ್ನಾ ಅವರನ್ನು ಪವನ್ ಕಲ್ಯಾಣ್ 2013ರ ಸೆಪ್ಟೆಂಬರ್‌ನಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಇದ್ದು, ಇದೀಗ ಇಬ್ಬರೂ ಕಾನೂನುಬದ್ಧವಾಗಿ ಬೇರೆಯಾಗುವ ತೀರ್ಮಾನ ತೆಗೆದುಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

‘ಗೌಪ್ಯತೆಯನ್ನು ಗೌರವಿಸಿ’; ಅಭಿಮಾನಿಗಳಲ್ಲಿ ಜಂಟಿ ಮನವಿ

ತಮ್ಮ ಜಂಟಿ ಹೇಳಿಕೆಯಲ್ಲಿ ಮಾತನಾಡಿರುವ ಜೋಡಿ, “ನಮ್ಮ ಜೀವನದ ಮಹತ್ವದ ಭಾಗವನ್ನು ಒಟ್ಟಿಗೆ ಕಳೆದ ನಂತರ, ಪರಸ್ಪರ ತಿಳಿವಳಿಕೆ ಮತ್ತು ಗೌರವದೊಂದಿಗೆ ಪ್ರತ್ಯೇಕಗೊಳ್ಳಲು ನಿರ್ಧರಿಸಿದ್ದೇವೆ. ನಮ್ಮ ವೈವಾಹಿಕ ಜೀವನ ಅಂತ್ಯಗೊಂಡಿದ್ದರೂ ನಾವು ಉತ್ತಮ ಸ್ನೇಹಿತರಾಗಿ ಇರುತ್ತೇವೆ” ಎಂದು ತಿಳಿಸಿದ್ದಾರೆ.

ಅಲ್ಲದೆ, “ನಮ್ಮ ಮುದ್ದಿನ ಮಕ್ಕಳ ಜವಾಬ್ದಾರಿಯುತ ಪೋಷಕರಾಗಿ ಮುಂದುವರಿಯುತ್ತೇವೆ. ಮಕ್ಕಳ ಸಂತೋಷ ಮತ್ತು ಯೋಗಕ್ಷೇಮವೇ ನಮ್ಮಿಬ್ಬರ ಪ್ರಮುಖ ಆದ್ಯತೆಯಾಗಿರಲಿದೆ. ಈ ಬದಲಾವಣೆಯ ಸಂದರ್ಭದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸಿ” ಎಂದು ಮನವಿ ಮಾಡಿದ್ದಾರೆ.

ತಮ್ಮ ವೈಯಕ್ತಿಕ ನಿರ್ಧಾರವನ್ನು ಸಾರ್ವಜನಿಕರು ಹಾಗೂ ಅಭಿಮಾನಿಗಳು ಅರ್ಥಮಾಡಿಕೊಳ್ಳಬೇಕು ಎಂದು ಕೋರಿರುವ ಅವರು, ಈ ಕಷ್ಟದ ಹಂತದಲ್ಲಿ ತಮ್ಮೊಂದಿಗೆ ನಿಂತ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Pawan Kalyan Divorce: 2013ರಲ್ಲಿ ಮದುವೆ; ಇದು ಪವನ್ ಕಲ್ಯಾಣ್ 3ನೇ ವಿಚ್ಛೇದನ

ರಷ್ಯಾ ಮೂಲದ ಅನ್ನಾ ಅವರು ಪವನ್ ಕಲ್ಯಾಣ್ ಅಭಿನಯದ ‘ತೀನ್ ಮಾರ್’ ಚಿತ್ರದಲ್ಲೂ ನಟಿಸಿದ್ದರು. ಆ ಚಿತ್ರದ ಶೂಟಿಂಗ್ ಸಮಯದಲ್ಲಿ ಬೆಳೆದ ಪರಿಚಯ 2013ರಲ್ಲಿ ಮದುವೆಯಲ್ಲಿ ಅಂತ್ಯವಾಗಿತ್ತು.

ಇದಕ್ಕೂ ಮೊದಲು ಪವನ್ ಕಲ್ಯಾಣ್ ಅವರು 1997ರಲ್ಲಿ ನಂದಿನಿ ಅವರನ್ನು ವಿವಾಹವಾಗಿದ್ದು, 2008ರಲ್ಲಿ ವಿಚ್ಛೇದನ ಪಡೆದಿದ್ದರು. ನಂತರ 2009ರಲ್ಲಿ ನಟಿ ರೇಣು ದೇಸಾಯಿ ಅವರನ್ನು ಮದುವೆಯಾಗಿದ್ದ ಪವನ್, 2012ರಲ್ಲಿ ಅವರಿಂದಲೂ ಪ್ರತ್ಯೇಕಗೊಂಡಿದ್ದರು.

ರೇಣು ದೇಸಾಯಿ ಅವರಿಗೂ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಇದ್ದಾರೆ. ಇದೀಗ 3ನೇ ಪತ್ನಿ ಅನ್ನಾ ಅವರಿಂದಲೂ 13 ವರ್ಷಗಳ ನಂತರ ಪವನ್ ಕಲ್ಯಾಣ್ ಪ್ರತ್ಯೇಕಗೊಳ್ಳುತ್ತಿರುವುದು ಅಪಾರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.