☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

Kichcha Sudeepa: ಸೈಲೆಂಟ್ ಆಗಿ ಮಾಸ್ ಫೋಟೋ ಶೇರ್ ಮಾಡಿದ ಕಿಚ್ಚ; ‘ಟೈಟಲ್ ಟೀಸರ್’ ಬಗ್ಗೆ ಸುದೀಪ್ ಕೊಟ್ಟ ಬಿಗ್ ಅಪ್ಡೇಟ್

Kichcha Sudeepa: Shares Black and White Photo Announces Title Teaser Out Soon Jogi Prem Movie
ನಟ ಕಿಚ್ಚ ಸುದೀಪ್ ತಮ್ಮ ಬ್ಲ್ಯಾಕ್ ಅಂಡ್ ವೈಟ್ ಫೋಟೋ ಹಂಚಿಕೊಳ್ಳುವ ಮೂಲಕ ಜೋಗಿ ಪ್ರೇಮ್ ನಿರ್ದೇಶನದ ಹೊಸ ಸಿನಿಮಾದ ಟೈಟಲ್ ಟೀಸರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ಮುಖ್ಯಾಂಶಗಳು

  • ಬ್ಲ್ಯಾಕ್ & ವೈಟ್ ಫೋಟೋ ಹಂಚಿಕೊಂಡ ಸುದೀಪ್.
  • 'ಟೈಟಲ್ ಟೀಸರ್ ಔಟ್ ಸೂನ್' ಎಂದ ಕಿಚ್ಚ.
  • 3ನೇ ಬಾರಿಗೆ ಜೋಗಿ ಪ್ರೇಮ್-ಸುದೀಪ್ ಕಾಂಬೋ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeepa) ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ಕಪ್ಪು-ಬಿಳುಪು (ಬ್ಲ್ಯಾಕ್ & ವೈಟ್) ಫೋಟೋವನ್ನು ಶೇರ್ ಮಾಡುವ ಮೂಲಕ ಪ್ರಮುಖ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

ಇದು ಅವರ ಬಾಲ್ಯದ ಫೋಟೋ ಅಲ್ಲ ಬದಲಾಗಿ ಇತ್ತೀಚಿನ ನೂತನ ಫೋಟೋ ಆಗಿದೆ. ಕಪ್ಪು ಬಿಳುಪಿನ ಎಫೆಕ್ಟ್‌ನಲ್ಲಿ ಅತ್ಯಂತ ಡ್ಯಾಶಿಂಗ್ ಹಾಗೂ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಸುದೀಪ್, ಕಪ್ಪು ಬಣ್ಣದ ಕೂಲಿಂಗ್ ಗ್ಲಾಸ್ ಧರಿಸಿ ಸಖತ್ ಪೋಸ್ ನೀಡಿದ್ದಾರೆ.

ನಿರ್ದೇಶಕ ಜೋಗಿ ಪ್ರೇಮ್ ಅವರೊಂದಿಗಿನ ಮುಂದಿನ ಸಿನಿಮಾದ ಬಗ್ಗೆ ಕಿಚ್ಚ ಸುದೀಪ್ ಈ ಪೋಸ್ಟ್‌ನಲ್ಲಿ ಮುಖ್ಯ ಮಾಹಿತಿಯನ್ನು ನೀಡಿದ್ದು, ಅವರ ಈ ನೂತನ ಫೋಟೋ ಹಾಗೂ ಅಪ್‌ಡೇಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

‘ಟೈಟಲ್ ಟೀಸರ್ ಔಟ್ ಸೂನ್’; ಸುದೀಪ್ ಬಿಗ್ ಅಪ್‌ಡೇಟ್

ಕಿಚ್ಚ ಸುದೀಪ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ನಿರ್ದೇಶಕ ಜೋಗಿ ಪ್ರೇಮ್ ಅವರದ್ದು ಎಂಬುದು ಈಗಾಗಲೇ ಖಚಿತವಾಗಿದೆ. ಸುದೀಪ್ ಅವರ ಹುಟ್ಟುಹಬ್ಬದ ದಿನ ಅನೌನ್ಸ್ ಆದ ಮೂರು ಸಿನಿಮಾಗಳಲ್ಲಿ ಪ್ರೇಮ್ ಚಿತ್ರವೂ ಒಂದಾಗಿದೆ.

ದೀಪಾವಳಿ ಹಬ್ಬದ ದಿನ ಜೋಗಿ ಪ್ರೇಮ್ ತಮ್ಮ ಸಿನಿಮಾದ ಟೈಟಲ್ ಟೀಸರ್ ಅತೀ ಶೀಘ್ರದಲ್ಲೇ ರಿಲೀಸ್ ಆಗಲಿದೆ ಎಂದು ವಿಡಿಯೋ ಮೂಲಕ ತಿಳಿಸಿದ್ದರು. ಇದರ ಬೆನ್ನಲ್ಲೇ ಸುದೀಪ್ ಕೂಡ “Title Teaser out,,,,soon.” ಎಂದು ಬರೆದುಕೊಂಡು ಕುತೂಹಲ ಹೆಚ್ಚಿಸಿದ್ದಾರೆ.

ಈ ಸಿನಿಮಾದ ಟೈಟಲ್ ಟೀಸರ್ ಶೂಟಿಂಗ್ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ದಿನಾಂಕ ಮತ್ತು ಸಮಯದೊಂದಿಗೆ ಬಿಡುಗಡೆಯಾಗಲಿದೆ. ಇದರಿಂದಾಗಿ ಸುದೀಪ್ ಅಭಿಮಾನಿಗಳಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

Kichcha Sudeepa: ಕೈತುಂಬಾ ಸಿನಿಮಾಗಳು; 3ನೇ ಬಾರಿಗೆ ಸುದೀಪ್-ಪ್ರೇಮ್ ಕಾಂಬೋ

ಕಿಚ್ಚ ಸುದೀಪ್ ಪ್ರಸ್ತುತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಬಿಲ್ಲ ರಂಗ ಬಾಷಾ’, ತಮಿಳು ನಿರ್ದೇಶಕ ಸಮುದ್ರಖಣಿ ನಿರ್ದೇಶನದ ‘ಸ್ಕೂಲ್ ಬಸ್’ ಹಾಗೂ ‘ದೇವರಾಯ’ ಸಿನಿಮಾಗಳ ಜೊತೆಗೆ ‘ಬಿಗ್ ಬಾಸ್ ಕನ್ನಡ 13’ ಶೋ ನಿರೂಪಣೆ ಮಾಡುತ್ತಿದ್ದಾರೆ.

ಇದರ ನಡುವೆಯೇ ಜೋಗಿ ಪ್ರೇಮ್ ಅವರೊಂದಿಗಿನ ಮೂರನೇ ಸಿನಿಮಾಗೆ ಸುದೀಪ್ ಕೈಜೋಡಿಸಿದ್ದಾರೆ. ಈ ಹಿಂದೆ ಇಬ್ಬರ ಕಾಂಬಿನೇಷನ್‌ನಲ್ಲಿ ‘ದಿ ವಿಲನ್’ ಸಿನಿಮಾ ಮೂಡಿಬಂದು ಸೂಪರ್ ಹಿಟ್ ಆಗಿತ್ತು.

ಆ ನಂತರ ಧ್ರುವ ಸರ್ಜಾ ಅಭಿನಯದ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದಲ್ಲೂ ಸುದೀಪ್ ಗೆಸ್ಟ್ ರೋಲ್ ಮಾಡಿದ್ದು, ‘ಕೆಡಿ-2’ ಚಿತ್ರಕ್ಕೆ ಲೀಡ್ ಕೊಟ್ಟಿದ್ದಾರೆ. ಇದೀಗ 3ನೇ ಬಾರಿಗೆ ಈ ಹಿಟ್ ಜೋಡಿ ಪೂರ್ಣ ಪ್ರಮಾಣದ ಹೊಸ ಚಿತ್ರಕ್ಕೆ ಒಂದಾಗಿದ್ದು, ಟೈಟಲ್ ತಿಳಿಯಲು ಪ್ರೇಕ್ಷಕರು ಕಾಯುತ್ತಿದ್ದಾರೆ.