☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

BBK 13: ಮನೆಮಂದಿಗೆ ಗೊತ್ತಿಲ್ಲದ ಮಂಜನ ಸೀಕ್ರೆಟ್ ಟ್ವಿಸ್ಟ್; ಬದಲಾಗಲು ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ತಾರಾ ಮಾಡರ್ನ್ ಕವಿ?

BBK 13: Modern Kavi Manja Re Entry Not Wild Card No Trophy Eligibility
ಬಿಗ್ ಬಾಸ್ ಕನ್ನಡ 13ಕ್ಕೆ ಮಂಜ ರೀ-ಎಂಟ್ರಿ ಕೊಟ್ಟಿದ್ದು, ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಲ್ಲ ಹಾಗೂ ಕಪ್ ಗೆಲ್ಲಲು ಅರ್ಹರಲ್ಲ ಎಂಬ ಷರತ್ತಿನ ಮೇಲೆ ಕಳುಹಿಸಲಾಗಿದೆ.

ಮುಖ್ಯಾಂಶಗಳು

  • ಬಿಗ್ಬಾಸ್ ಮನೆಗೆ ಮಂಜ ರೀ-ಎಂಟ್ರಿ.
  • ವೈಲ್ಡ್ ಕಾರ್ಡ್ ಅಲ್ಲ, ಕಪ್ ಸಿಗಲ್ಲ.
  • ತಪ್ಪು ಮಾಡಿದರೆ ತಕ್ಷಣ ರೆಡ್ ಕಾರ್ಡ್.

‘ಬಿಗ್ ಬಾಸ್ ಕನ್ನಡ ಸೀಸನ್ 13’ (BBK 13) ರಿಯಾಲಿಟಿ ಶೋಗೆ ‘ಮಾಡರ್ನ್ ಕವಿ’ ಮಂಜ ವಾಪಸ್ ಬಂದಿರುವುದು ದೊಡ್ಮನೆ ಸ್ಪರ್ಧಿಗಳಿಗೆ ಭಾರಿ ಶಾಕ್ ನೀಡಿದೆ. ಈ ಮೊದಲು ಮಂಜ ಮನೆಯಲ್ಲಿ ಅಸಭ್ಯ ಮಾತುಗಳನ್ನು ಆಡಿ, ಅತಿಯಾದ ರೌಡಿತನ ಮೆರೆದಿದ್ದ ಕಾರಣಕ್ಕೆ ಶೋನಿಂದ ಹೊರಬಿದ್ದಿದ್ದರು.

ಇದೀಗ ಅವರಿಗೆ ಬಿಗ್‌ಬಾಸ್ 2ನೇ ಅವಕಾಶ ನೀಡಿದ್ದಾರೆ. ಈ ಮೊದಲು ಮಂಜ ಆಟದಿಂದ ಔಟ್ ಆದಾಗ ಹಲವು ಸ್ಪರ್ಧಿಗಳು ಖುಷಿಪಟ್ಟಿದ್ದರು. ಆದರೆ ಈಗ ಅವರ ರೀ-ಎಂಟ್ರಿಯಿಂದ ಮನೆಮಂದಿಗೆ ಅಚ್ಚರಿಯಾಗಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ಈ ವಾರ ಯಾರೂ ಎಲಿಮಿನೇಟ್ ಆಗಿಲ್ಲ. ಆ ಸಿಹಿ ಸುದ್ದಿಯ ನಡುವೆಯೇ ಬಿಗ್‌ಬಾಸ್ ಮಂಜನ ರೂಪದಲ್ಲಿ ಖಾರದ ಸರ್‌ಪ್ರೈಸ್ ನೀಡಿದ್ದಾರೆ.

ಮಂಜ ಸ್ಪರ್ಧಿ ಅಲ್ಲ, ಕಪ್ ಗೆಲ್ಲುವ ಅವಕಾಶವಿಲ್ಲ

ಮಂಜ ಇಷ್ಟು ದಿನ ಬಿಗ್ ಬಾಸ್ ಮನೆಯಿಂದ ಹೊರಗಿದ್ದು ಶೋ ನೋಡಿದ್ದಾರೆ. ಹೊರಗೆ ಯಾರು ಹೇಗೆ ಗೇಮ್ ಆಡುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡಿದ್ದಾರೆ.

ಹಾಗಾಗಿ ಅವರನ್ನು ಸ್ಪರ್ಧಿಯನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಹಾಗೂ ಅವರಿಗೆ ಕಪ್ ಗೆಲ್ಲುವ ಅವಕಾಶ ಕೂಡ ಇರುವುದಿಲ್ಲ. ಅವರಿಗೆ ಕೇವಲ ಜರ್ನಿ ಪೂರ್ಣಗೊಳಿಸಲು ಅವಕಾಶ ನೀಡಲಾಗಿದೆ.

ಇದನ್ನು ಓದಿ: BBK 13: ಯಶಸ್ ಕೈಗೆ ಆಸಿಯಾ ರಾಖಿ ಕಟ್ಟಿದ್ದು ಬರೀ ಗಿಮಿಕ್; ಕಿಚ್ಚನ ಮುಂದೆ ಸತ್ಯ ಒಪ್ಪಿಕೊಂಡ್ರಾ ಸ್ಪರ್ಧಿಗಳು?

ಮಾನವೀಯತೆಯ ದೃಷ್ಟಿಯಿಂದ ಮಂಜ ಅವರಿಗೆ ಈ ಅವಕಾಶ ಕೊಡಲಾಗಿದೆ. ಜೀವನಪೂರ್ತಿ ಕೆಟ್ಟ ಹೆಸರಿನಿಂದ ಬದುಕುವುದು ಬೇಡ, ಬದಲಾಗಲು ಒಂದು ಅವಕಾಶ ಇರಲಿ ಎಂದು ಸುದೀಪ್ ಹೇಳಿದ್ದಾರೆ.

BBK 13: ವೈಲ್ಡ್ ಕಾರ್ಡ್ ಅಲ್ಲ; ಬಿಗ್‌ಬಾಸ್ ವಿಧಿಸಿದ ಬಿಗಿ ಷರತ್ತು

ಈ ಎರಡನೇ ಅವಕಾಶದಲ್ಲಿ ಮಂಜ ಸ್ಪರ್ಧಿಯೂ ಅಲ್ಲ, ವೈಲ್ಡ್ ಕಾರ್ಡ್ ಎಂಟ್ರಿಯೂ ಅಲ್ಲ. ಆದರೆ ಈ ವಿಷಯ ಬಿಗ್ ಬಾಸ್ ಮನೆಯೊಳಗಿನ ಸ್ಪರ್ಧಿಗಳಿಗೆ ತಿಳಿದಿಲ್ಲ. ಅದನ್ನು ಮಂಜ ಕೂಡ ಬಹಿರಂಗಪಡಿಸುವಂತಿಲ್ಲ.

ಒಂದು ವೇಳೆ ಮಂಜ ಮತ್ತೆ ಮೊದಲಿನಂತೆ ಕೆಟ್ಟ ವರ್ತನೆ ಮುಂದುವರಿಸಿದರೆ ಅಥವಾ ಅಸಭ್ಯ ಭಾಷೆ ಬಳಸಿದರೆ ತಕ್ಷಣ ರೆಡ್ ಕಾರ್ಡ್ ತೋರಿಸಿ ಹೊರಹಾಕಲಾಗುತ್ತದೆ.

ಸುದೀಪ್ ಅವರ ಈ ನೇರ ಎಚ್ಚರಿಕೆಯನ್ನು ಒಪ್ಪಿಕೊಂಡು, ಮತ್ತೆ ತಪ್ಪು ಮಾಡುವುದಿಲ್ಲ ಎಂಬ ಭರವಸೆ ನೀಡಿ ಮಂಜ ಮನೆಗೆ ಕಾಲಿಟ್ಟಿದ್ದಾರೆ.