‘ಬಿಗ್ ಬಾಸ್ ಕನ್ನಡ ಸೀಸನ್ 13’ (BBK 13) ರಿಯಾಲಿಟಿ ಶೋನಲ್ಲಿ ದಿನದಿಂದ ದಿನಕ್ಕೆ ಅನಿರೀಕ್ಷಿತ ಟ್ವಿಸ್ಟ್ಗಳು ಎದುರಾಗುತ್ತಿವೆ. ಕಳೆದ ಕೆಲ ವಾರಗಳಿಂದ ದೊಡ್ಮನೆಯಲ್ಲಿ ನಗು, ತಮಾಷೆ ಹಾಗೂ ಸೆಂಟಿಮೆಂಟ್ ವಾತಾವರಣ ತುಂಬಿತ್ತು.
ಆದರೆ ಇದೀಗ ಬಿಗ್ಬಾಸ್ ಬಿಗ್ ಶಾಕ್ ನೀಡಿದ್ದು, ಅನಿರೀಕ್ಷಿತ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ರೌಡಿತನ ಮೆರೆದು ಆಚೆಗೆ ಹೋಗಿದ್ದ ‘ಮಾಡರ್ನ್ ಕವಿ’ ಮಂಜ ಇದೀಗ ಮತ್ತೆ ಬಿಗ್ಬಾಸ್ ಮನೆಗೆ ಮರಳುತ್ತಿದ್ದಾರೆ.
ತಮ್ಮ ಮಿತಿಮೀರಿದ ವರ್ತನೆಯ ಕಾರಣದಿಂದಾಗಿ ಶೋನಿಂದ ಹೊರಬಿದ್ದಿದ್ದ ಮಂಜನನ್ನು ಇದೀಗ ವೈಲ್ಡ್ ಕಾರ್ಡ್ ಮಾದರಿಯಲ್ಲಿ ಬಿಗ್ಬಾಸ್ ಮತ್ತೆ ಮನೆಯೊಳಗೆ ಕಳುಹಿಸುತ್ತಿರುವುದು ಭಾರಿ ಸಂಚಲನ ಮೂಡಿಸಿದೆ.
ಸಿಹಿ ಜೊತೆಗೆ ಖಾರ; ಸುದೀಪ್ ವೇದಿಕೆಗೆ ಬಂದ ಮಂಜ
ನವೆಂಬರ್ 08ರ ಭಾನುವಾರ ಬೆಳಿಗ್ಗೆ ಬಿಡುಗಡೆಯಾಗಿರುವ ನೂತನ ಪ್ರೋಮೋದಲ್ಲಿ ನಟ ಕಿಚ್ಚ ಸುದೀಪ್ ಅವರು ಮಾಡರ್ನ್ ಕವಿ ಮಂಜನನ್ನು ವೇದಿಕೆಗೆ ಕರೆದಿದ್ದಾರೆ.
“ದೀಪಾವಳಿಗೆ ಬರೀ ಸಿಹಿ ಮಾತ್ರವಲ್ಲ, ಸ್ವಲ್ಪ ಖಾರವನ್ನೂ ಮನೆಗೆ ಕಳುಹಿಸುತ್ತಿದ್ದೇವೆ” ಎಂದು ಹೇಳುವ ಮೂಲಕ ಸುದೀಪ್ ಅವರು ಮಂಜನ ರೀ-ಎಂಟ್ರಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಇದನ್ನು ಓದಿ: BBK 13: ಶನಿವಾರದ ಪ್ರೋಮೋದಲ್ಲೇ ಟ್ವಿಸ್ಟ್; ಈ ವಾರ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ಇಲ್ವಾ?
ಇತ್ತ ಮಂಜ ಕೂಡ “ಕಳೆದ ಬಾರಿ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ” ಎಂದು ಸುದೀಪ್ ಮುಂದೆ ಹೇಳಿ ಮನೆಗೆ ಹೆಜ್ಜೆ ಇಟ್ಟಿದ್ದಾರೆ. ಆದರೆ ಹೋಗುವ ಮುನ್ನ “ಮನೆಯಲ್ಲಿ ಎಲ್ಲರಿಗೂ ಪಟಾಕಿ ಇಡುತ್ತೇನೆ” ಎಂದು ಹೇಳಿರುವುದು ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.
BBK 13: ಕೆಟ್ಟ ವರ್ತನೆಗೆ ಸಿಕ್ಕಿತ್ತು ರೆಡ್ ಕಾರ್ಡ್; ಸುದೀಪ್ ಬೆಂಬಲ
ಮಂಜ ಈ ಹಿಂದೆ ‘ಅಗ್ನಿಪರೀಕ್ಷೆ’ ಮೂಲಕ ಬಿಗ್ಬಾಸ್ ಮನೆಗೆ ಬಂದಿದ್ದರು. ಆದರೆ ಮನೆಯೊಳಗೆ ಅತಿಯಾದ ರೌಡಿ ವರ್ತನೆ, ಸಹ-ಸ್ಪರ್ಧಿಗಳ ಮೇಲೆ ಅಸಹ್ಯಕರ ಆರೋಪ ಹಾಗೂ ಮಹಿಳಾ ಸ್ಪರ್ಧಿಗಳ ಬಗ್ಗೆ ಕೀಳಾಗಿ ಮಾತನಾಡಿ ಮನೆಯ ನೆಮ್ಮದಿ ಹಾಳುಮಾಡಿದ್ದರು.
ಇದೇ ಕಾರಣಕ್ಕೆ ಅವರನ್ನು ಬಿಗ್ಬಾಸ್ ಹೊರಹಾಕಿದ್ದರು. ಆದರೆ ಈ ನಿರ್ಧಾರಕ್ಕೆ ಸುದೀಪ್ ಅಸಮಾಧಾನ ವ್ಯಕ್ತಪಡಿಸಿ, ಮಂಜನಿಗೆ ತಮ್ಮನಂತೆ ಬೆಂಬಲ ನೀಡಿದ್ದರು.
ಇದೀಗ ಸುದೀಪ್ ಅವರೇ ಮಂಜನನ್ನು ಪ್ರೀತಿಯಿಂದ ಸ್ವಾಗತಿಸಿ ಮನೆಗೆ ಕಳುಹಿಸಿದ್ದಾರೆ. ರೌಡಿ ಮಂಜನ ಈ ಎರಡನೇ ಇನ್ನಿಂಗ್ಸ್ನಿಂದ ದೊಡ್ಮನೆಯಲ್ಲಿ ಮತ್ತೆ ಗಲಾಟೆ ಶುರುವಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.




