ಬಿಗ್ ಬಾಸ್ ಕನ್ನಡ (BBK 13) ಮನೆಯಲ್ಲಿ ದಿನದಿಂದ ದಿನಕ್ಕೆ ಜಗಳ, ಮನಸ್ತಾಪ ಹಾಗೂ ವಾದವಿವಾದಗಳು ಹೆಚ್ಚಾಗುತ್ತಿವೆ. ಇದೀಗ ಕ್ಯಾಪ್ಟನ್ಸಿ ಟಾಸ್ಕ್ ಜೊತೆಗೆ ನಡೆದ ಅನಾಮಧೇಯ ಪತ್ರ ಬರೆಯುವ ಚಟುವಟಿಕೆ ಮನೆಯ ವಾತಾವರಣವನ್ನೇ ಕದಡಿದೆ.
ಈ ವಾರದ ನಾಯಕತ್ವದ ಜವಾಬ್ದಾರಿ ಪಡೆಯಲು ಯಶಸ್ ಹಾಗೂ ಗಾನವಿ ಸ್ಪರ್ಧೆಗೆ ಇಳಿದಿದ್ದಾರೆ. ಇಬ್ಬರ ಪೈಕಿ ಯಾರು ಈ ವಾರದ ಕ್ಯಾಪ್ಟನ್ ಆಗಲಿದ್ದಾರೆ ಎಂಬ ಕುತೂಹಲ ಮನೆಮಂದಿಯಲ್ಲಿ ಮೂಡಿದೆ.
ಇದರ ನಡುವೆ ನಡೆದ ಪತ್ರ ಚಟುವಟಿಕೆಯಲ್ಲಿ ಜಗ್ಗಿ ಮಮ್ಮಿ ಹಾಗೂ ಸೌಂದರ್ಯ ಶೆಟ್ಟಿ ನಡುವೆ ನಡೆದ ಮಾತಿನ ಚಕಮಕಿ ಮನೆಯನ್ನೇ ಅಲ್ಲೋಲಕಲ್ಲೋಲ ಮಾಡಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಕ್ಯಾಪ್ಟನ್ಸಿ ಟಾಸ್ಕ್ ಹಾಗೂ ಅನಾಮಧೇಯ ಪತ್ರ
ಈ ವಾರ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ತಮ್ಮ ಮನಸ್ಸಿನಲ್ಲಿರುವ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅನಾಮಧೇಯ ಪತ್ರ ಬರೆಯುವ ವಿಶೇಷ ಚಟುವಟಿಕೆ ನೀಡಲಾಗಿತ್ತು.
ಪ್ರಶಾಂತ್ ಅವರು ತಾಂಡವ್ಗೆ ಹಾಸ್ಯಾಸ್ಪದ ರೀತಿಯಲ್ಲಿ ಪತ್ರ ಬರೆದು ಗಮನ ಸೆಳೆದರು. ಆದರೆ ಇದೇ ಪತ್ರದ ಚಟುವಟಿಕೆ ಮನೆಯಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತು.
ಜಗ್ಗಿಗೆ ಸೌಂದರ್ಯ ಶೆಟ್ಟಿ ಪತ್ರ ಬರೆದಿದ್ದು, ಜಗ್ಗಿ ಬೆನ್ನ ಹಿಂದೆ ಇತರರ ಬಗ್ಗೆ ಮಾತನಾಡುವುದಾಗಿ ಉಲ್ಲೇಖಿಸಿದ್ದರು. ಈ ಪತ್ರವು ಇಬ್ಬರ ನಡುವಿನ ದೊಡ್ಡ ಜಗಳಕ್ಕೆ ಮುನ್ನುಡಿ ಬರೆಯಿತು.
ಪತ್ರ ಓದಿ ಕೆಂಡಾಮಂಡಲವಾದ ಜಗ್ಗಿ
ತಮ್ಮ ಕುರಿತಾದ ಪತ್ರವನ್ನು ಓದಿದ ಜಗ್ಗಿ ತೀವ್ರವಾಗಿ ಆಕ್ರೋಶಗೊಂಡರು. ಇದನ್ನು ಬರೆದವರು ಮಾನಗೇಡಿ ಮತ್ತು ಲಫಂಗ ಎಂದು ಕಿಡಿಕಾರಿದ ಅವರು, ಸೌಂದರ್ಯ ಎದುರೇ ಪತ್ರವನ್ನು ಹರಿದು ಬಿಸಾಡಿದರು.
ಇತ್ತ ಜಗ್ಗಿಯ ಈ ಪ್ರತಿಕ್ರಿಯೆಗೆ ಸೌಂದರ್ಯ ಮತ್ತು ಯಶಸ್ ಕೂಡ ತಕ್ಕ ತಿರುಗೇಟು ನೀಡಿದರು. ಜಗ್ಗಿಯನ್ನು ‘ಫೇಕ್’ ಎಂದು ಕರೆದ ಸೌಂದರ್ಯ, ನಿನ್ನ ಅಸಲಿಯತ್ತು ತೋರಿಸಲು ಪತ್ರ ಬೇಕಾಯಿತಾ ಎಂದು ಪ್ರಶ್ನಿಸಿದರು.
ಇದನ್ನು ಓದಿ: BBK 13: ಮನೆಯವರ ಪತ್ರಕ್ಕಾಗಿ 2.5 ಲಕ್ಷ ಬಿಟ್ಟ ಸ್ಪರ್ಧಿ; ಕುಸಿದ ವಿನ್ನರ್ ಮೊತ್ತ
ಇಬ್ಬರ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಪರಸ್ಪರ ಆರೋಪ-ಪ್ರತ್ಯಾರೋಪಗಳು ಮುಂದುವರಿದವು. ಇದು ಮನೆಯ ಇತರ ಸ್ಪರ್ಧಿಗಳಲ್ಲೂ ಅಚ್ಚರಿ ಮೂಡಿಸಿತು.
BBK 13: ನಾಯಿಗಿಂತ ಕಡೆ ಎಂದ ಜಗ್ಗಿ; ಸೌಂದರ್ಯ ಆಕ್ರೋಶ
ವಾದವಿವಾದದ ಭರದಲ್ಲಿ ಜಗ್ಗಿ ಸೌಂದರ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸೌಂದರ್ಯ ಅವರನ್ನು ಕಚಡ ಎಂದು ಕರೆದಿದ್ದಲ್ಲದೆ, “ನಾಯಿಗಿಂತ ಕಡೆ ನೀನು” ಎಂದು ನೇರವಾಗಿ ಅವಮಾನಿಸಿದರು.
ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ ಸೌಂದರ್ಯ, ಯಾರನ್ನು ನಾಯಿ ಎಂದು ಕರೆಯುತ್ತಿದ್ದೀಯಾ ಎಂದು ಗಟ್ಟಿಯಾದ ದನಿಯಲ್ಲಿ ಪ್ರಶ್ನಿಸಿದರು.
ಇಷ್ಟು ದಿನ ಮನೆಯೊಳಗೆ ಸೈಲೆಂಟ್ ಆಗಿದ್ದ ಜಗ್ಗಿ ಮಮ್ಮಿ ಏಕಾಏಕಿ ವೈಲೆಂಟ್ ಆಗಿರುವುದು ಎಲ್ಲರಿಗೂ ಶಾಕ್ ನೀಡಿದೆ. ಈ ಸಂಘರ್ಷ ಮುಂದಿನ ದಿನಗಳಲ್ಲಿ ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.




