ನವೆಂಬರ್ 6, ಶುಕ್ರವಾರದ ಇಂದಿನ ರಾಶಿ ಭವಿಷ್ಯದ (Daily Horoscope) ಪ್ರಕಾರ, ಕೆಲ ನಿರ್ದಿಷ್ಟ ರಾಶಿಯವರು ಸ್ವಾರ್ಥದ ಕಾರಣದಿಂದ ಎಲ್ಲರಿಂದ ದೂರವಿರಬೇಕಾದ ಪರಿಸ್ಥಿತಿ ಎದುರಾಗಬಹುದು. ಇಂದಿನ ದಿನದಲ್ಲಿ ಪ್ರತಿಯೊಂದು ಆರ್ಥಿಕ ಹಾಗೂ ವೈಯಕ್ತಿಕ ನಿರ್ಧಾರಗಳಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಶರತ್ ಋತು, ಆಶ್ವಯುಜ ಮಾಸದ ಕೃಷ್ಣ ಪಕ್ಷದ ಏಕಾದಶೀ ತಿಥಿಯ ದಿನ ಇದಾಗಿದೆ. ಇಂದು ಆತ್ಮನಿಂದನೆ, ಅಗಾಧ ಪ್ರೇಮ ಹಾಗೂ ಹಣದ ಚಿಂತೆಯ ವಿಶೇಷತೆ ಇರಲಿದೆ.
ಇಂದಿನ ದ್ವಾದಶ ರಾಶಿಗಳ ಸಂಪೂರ್ಣ ಜ್ಯೋತಿಷ್ಯ ಫಲಗಳು ಮತ್ತು ದೈನಂದಿನ ಭವಿಷ್ಯವು ಹೇಗಿರಲಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದು ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯವಾಗಿದೆ.
ಮೇಷ ರಾಶಿ
ಆಪ್ತರ ಜೊತೆಗಿನ ಮಾತುಕತೆಯು ನಿಮ್ಮ ಮನಸ್ಸಿಗೆ ಅತ್ಯಂತ ಆಹ್ಲಾದವನ್ನು ನೀಡಲಿದೆ. ಇಂದಿನ ನಿಮ್ಮ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಮಟ್ಟಿನ ಮಂದಗತಿ ಇರಲಿದೆ. ಇತರೆ ವ್ಯಕ್ತಿಗಳಿಂದ ನಿಮಗೆ ಗೌರವ ಪ್ರಾಪ್ತವಾಗಲಿದೆ.
ವೃಷಭ ರಾಶಿ
ಯಾವುದೇ ವಿಷಯವನ್ನೂ ಸಹಿಸಿಕೊಳ್ಳುವ ಶಕ್ತಿ ಇಂದು ನಿಮ್ಮಲ್ಲಿ ಇರುವುದಿಲ್ಲ. ನಿಮ್ಮ ವಾಸಸ್ಥಳವನ್ನು ಬದಲಾಯಿಸುವ ಬಗ್ಗೆ ಇಂದು ಗಂಭೀರವಾಗಿ ಆಲೋಚಿಸುವಿರಿ. ಆಭರಣಗಳ ಖರೀದಿ ಭರ್ಜರಿಯಾಗಿ ನಡೆಯಲಿದೆ.
ಮಿಥುನ ರಾಶಿ
ಅಗತ್ಯಕ್ಕಿಂತ ಹೆಚ್ಚು ಮಾತನಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗುವಿರಿ. ಸ್ಥಿರಾಸ್ತಿ ಖರೀದಿಸಲು ಇಂದು ಅಲೆದಾಟ ಹೆಚ್ಚಾಗುವ ಸಾಧ್ಯತೆಯಿದೆ. ಉದ್ಯಮವು ಒಂದೊಂದೇ ಹೆಜ್ಜೆ ಮುಂದೆ ಸಾಗುವುದು ಸಂತೋಷ ತರಲಿದೆ.
ಕರ್ಕಾಟಕ ರಾಶಿ
ಭೂಮಿಯಿಂದ ಅಧಿಕ ಲಾಭ ಪಡೆಯಲು ನಿಮ್ಮಲ್ಲಿ ಚರ್ಚೆಗಳು ನಡೆಯಬಹುದು. ದುಸ್ಸಾಧ್ಯ ಎನಿಸುವ ಯಾವುದೇ ಕಾರ್ಯವನ್ನು ಮಾಡಲು ಈಗ ಹೋಗಬೇಡಿ. ನಿಮ್ಮ ಅನಗತ್ಯ ಮಾತುಗಳು ಕಲಹಕ್ಕೆ ಕಾರಣವಾಗಬಹುದು.
ಸಿಂಹ ರಾಶಿ
ನಿಮ್ಮ ಹಿತಶತ್ರುಗಳಿಂದ ನಿಮಗೆ ಕೆಲಸದ ಸ್ಥಳದಲ್ಲಿ ತೊಂದರೆಯಾಗಬಹುದು. ಮನೆಯ ಜವಾಬ್ದಾರಿಯಲ್ಲಿ ಸಹಕರಿಸುವುದರಿಂದ ಬಂಧುಗಳಿಂದ ಪ್ರಶಂಸೆ ಸಿಗಲಿದೆ. ಹೂಡಿಕೆ ಮಾಡುವಾಗ ಬಹಳ ಮುತುವರ್ಜಿ ವಹಿಸಿ.
ಕನ್ಯಾ ರಾಶಿ
ಸ್ನೇಹಿತರ ಆಗಮನದಿಂದ ನಿಮ್ಮ ಮನೆ ಇಂದು ಕಳೆಕಟ್ಟಿರಲಿದೆ. ವ್ಯಾಪಾರದಲ್ಲಿ ಹಿತಶತ್ರುಗಳ ಕಾಟದಿಂದ ನಿಮಗೆ ಸಣ್ಣಪುಟ್ಟ ತೊಂದರೆಗಳು ಎದುರಾಗಬಹುದು. ತಜ್ಞರ ಮಾರ್ಗದರ್ಶನದಲ್ಲಿ ಇಂದಿನ ಸಮಯ ಕಳೆಯಿರಿ.
ತುಲಾ ರಾಶಿ
ನ್ಯಾಯಯುತವಾಗಿ ವಾದಿಸಲು ನಿಮ್ಮ ಬಳಿ ಸೂಕ್ತ ಸಾಕ್ಷಿಗಳ ಕೊರತೆ ಇರಲಿದೆ. ಸರ್ಕಾರದ ಕೆಲಸ ಕಾರ್ಯಗಳಲ್ಲಿ ಗೊತ್ತಿಲ್ಲದೆ ಕೆಲವು ತಪ್ಪುಗಳಾಗಬಹುದು. ಬರಬೇಕಾದ ಹಣದ ವಿಚಾರದಲ್ಲಿ ನಿಮಗೆ ನಿರಾಶೆಯಾಗಲಿದೆ.
ವೃಶ್ಚಿಕ ರಾಶಿ
ವ್ಯವಸ್ಥೆಯಲ್ಲಿ ಇರುವ ಸಣ್ಣಪುಟ್ಟ ಕೊರತೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಸರ್ಕಾರಿ ನೌಕರರಿಗೆ ನಿಮ್ಮ ಚಾತುರ್ಯದಿಂದ ಹೆಚ್ಚಿನ ಅಧಿಕಾರ ಪ್ರಾಪ್ತವಾಗಲಿದೆ. ಸಣ್ಣ ವಿಚಾರಗಳಿಗೂ ನೀವೇ ದೊಡ್ಡ ಗಲಾಜೆ ಮಾಡಿಕೊಳ್ಳುವಿರಿ.
ಧನು ರಾಶಿ
ಕುಟುಂಬದಲ್ಲಿ ನಡೆಯುವ ಶುಭ ಕಾರ್ಯಗಳಲ್ಲಿ ನೀವು ಭಾಗಿ ಆಗುವಿರಿ. ಕಳೆಕೊಂಡ ಅಮೂಲ್ಯ ಸಂಪತ್ತು ಯಾವುದೋ ರೂಪದಲ್ಲಿ ಮತ್ತೆ ಕೈಸೇರಲಿದೆ. ನಿಮ್ಮ ಮಕ್ಕಳಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಮಕರ ರಾಶಿ
ನಿಮ್ಮ ವೈಯಕ್ತಿಕ ಸುರಕ್ಷತೆಯ ಬಗ್ಗೆ ಮೊದಲು ಹೆಚ್ಚಿನ ಗಮನವಿರಲಿ. ಅನಿವಾರ್ಯ ಕಾರಣಗಳಿಂದ ನಿಮ್ಮ ಕೈಯಿಂದ ಹಣ ಖರ್ಚಾಗುವ ಯೋಗವಿದೆ. ಇಂದಿನ ಎಲ್ಲ ಕಾರ್ಯಗಳಲ್ಲಿ ಏಕಾಗ್ರತೆಯ ಕೊರತೆ ಕಾಣಿಸಿಕೊಳ್ಳಲಿದೆ.
ಕುಂಭ ರಾಶಿ
ನಿಮ್ಮ ಪ್ರಸ್ತುತ ಸ್ಥಾನಮಾನದ ಬಗ್ಗೆ ಮನಸ್ಸಿನಲ್ಲಿ ಆತಂಕ ಮೂಡಬಹುದು. ಹಿರಿಯ ಅಧಿಕಾರಿಗಳಿಂದ ಕೆಲವೊಮ್ಮೆ ಅಪಮಾನ ಎದುರಾಗುವ ಸಂಭವವಿದೆ. ಖರೀದಿಸುವ ಭೂಮಿಯ ದಾಖಲೆಗಳನ್ನು ಪರಿಶೀಲಿಸಿ.
ಮೀನ ರಾಶಿ (Daily Horoscope)
ಯಾವುದೋ ಗಂಭೀರ ಆಲೋಚನೆಯಲ್ಲಿ ನಿಮ್ಮ ಮನಸ್ಸು ಮುಳುಗಿರುತ್ತದೆ. ಅಧಿಕ ಸೌಲಭ್ಯಗಳು ಸಿಕ್ಕಿದ್ದರಿಂದ ನೀವು ಸ್ವಲ್ಪ ಸೋಮಾರಿಯಾಗುವಿರಿ. ಕೇಳಿದವರಿಗೆ ನಿಮ್ಮ ಕಡೆಯಿಂದ ಸೂಕ್ತ ಸಹಾಯ ಸಿಗಲಿದೆ.




