ಚಿತ್ರ: ರಾಮಾಯಣ- 1
ತಾರಾಗಣ: ರಣ್‌ಬೀರ್ ಕಪೂರ್,ಸಾಯಿ ಪಲ್ಲವಿ,ಯಶ್,ಸನ್ನಿ ಡಿಯೋಲ್,ರವಿ ದುಬೆ,
ನಿರ್ದೇಶನ: ನಿತೇಶ್ ತಿವಾರಿ
Stars: 3.5/5
Ramayana part 1 Review: 2026ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ‘ರಾಮಾಯಣ’ ವಿಶ್ವದಾದ್ಯಂತ ರಿಲೀಸ್ ಆಗಿದೆ. ಭಾರತದ ಪವಿತ್ರ ಗ್ರಂಥಗಳಲ್ಲಿ ಒಂದಾದ ವಾಲ್ಮೀಕಿ ರಚಿಸಿದ ಈ ಕಥೆ ಪ್ರತಿಯೊಬ್ಬ ಹಿಂದೂವಿಗೂ ಪರಿಚಿತವೇ. ರಾಮಾಯಣ ಕುರಿತು ಈ ಹಿಂದೆ ಹಲವು ಸಿನಿಮಾಗಳು ಬಂದು ಹೋಗಿವೆ. ಆದರೆ, ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಭಾಗ 1 ಹತ್ತು ಹಲವು ಕಾರಣಗಳಿಗೆ ನಿರೀಕ್ಷೆಗಳನ್ನು ಹುಟ್ಟಾಕಿತ್ತು.
ಶ್ರೀರಾಮನ ಅವತಾರದಲ್ಲಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದಾರೆ. ಇವರೊಂದಿಗೆ ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಕಾಣಿಸಿಕೊಂಡಿರೋದು ವಿಶೇಷ. ಈ ಮಹಾಗ್ರಂಥವನ್ನು ತೆರೆಮೇಲೆ ಮೂಡಿಸುವುದು ಸಾವಾಲಿನದ್ದಷ್ಟೇ ಅಲ್ಲ, ಅತೀ ಸೂಕ್ಷ್ಮಿ ಕೂಡ ಹೌದು. ಹೀಗಾಗಿ ಕುತೂಹಲವನ್ನು ಕರಳಿಸಿತ್ತು. ಹಾಗಿದ್ದರೆ, ಈ ಸಿನಿಮಾ ಹೇಗಿದೆ? ಪ್ಲಸ್ ಏನು? ಮೈನಸ್ ಏನು? ಅನ್ನೋದನ್ನು ನೋಡೋಣ.
ಕಥೆ ಹೆಣೆದ ಶೈಲಿ
ಮಹರ್ಷಿ ವಾಲ್ಮೀಕಿ ರಚಿಸಿದ ‘ರಾಮಾಯಣ’ಭಾರತೀಯರಿಗೆ ಹೊಸದೇನು ಅಲ್ಲ. ಆದರೆ, ಸಿನಿಮಾದಲ್ಲಿ ಹೇಗೆ ಮೂಡಿದೆ ಬಂದಿದೆ ಅನ್ನೋದು ಕುತೂಹಲ. ಅಯೋಧ್ಯೆಯ ರಾಜಕುಮಾರ ಶ್ರೀರಾಮನ ಸ್ವಯಂವರ, ಸೀತೆಯನ್ನು ವರಿಸುವ ಪ್ರಸಂಗ, ಕೈಕೇಯಿಯ ಮಾತು, 14 ವರ್ಷಗಳ ವನವಾಸ, ಶೂರ್ಪಣಖಿಯ ದೃಶ್ಯ, ರಾವಣನ ಸೀತಾಪರಣವನ್ನು ಮೊದಲ ಭಾಗದಲ್ಲಿ ನಿರ್ದೇಶಕ ನಿತೇಶ ತಿವಾರಿ ಕಟ್ಟಿಕೊಟ್ಟಿದ್ದಾರೆ. ಮೂಲ ಕಥೆಗೆ ಧಕ್ಕೆಯಾಗದೇ ಸಿನಿಮಾಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ಕೊಟ್ಟಿರೋದು ಹೈಲೈಟ್.
ಪರ್ಫಾಮೆನ್ಸ್
‘ರಾಮಾಯಣ’ದ ಪ್ರಮುಖ ಪಾತ್ರಗಳಾದ ಶ್ರೀರಾಮ, ಸೀತೆ ಹಾಗೂ ರಾವಣನ ಪಾತ್ರಗಳು ಪ್ರಮುಖವಾಗಿವೆ. ಈ ಪಾತ್ರಗಳಲ್ಲಿ ನಟಿಸಿರುವ ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಗಮನ ಸೆಳೆಯುತ್ತಾರೆ. ಶಾಂತ ಸ್ವಭಾವ ಹಾಗೂ ಧರ್ಮನಿಷ್ಠೆ ಶ್ರೀರಾಮನ ಗುಣಗಳು. ಇವುಗಳನ್ನು ತೆರೆಮೇಲೆ ಬಿಂಬಿಸುವುದಕ್ಕೆ ರಣ್‌ಬೀರ್ ಕಪೂರ್ ಪಟ್ಟಿರುವ ಶ್ರಮ ಎದ್ದು ಕಾಣುತ್ತೆ. ಶ್ರೀರಾಮನ ಅವತಾರದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ರಣ್‌ಬೀರ್ ಗೆದ್ದಿದ್ದಾರೆ. ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಕಳೆ ತುಂಬಿದ್ದಾರೆ.
ಇದನ್ನೂ ಓದಿ: Ramayana: ರಾವಣನ ಪಾತ್ರಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್
ರಾವಣನದ್ದೇ ಅಬ್ಬರ
‘ರಾಮಾಯಣ’ ಭಾಗ 1ರ ಹೈಲೈಟ್ ರಾವಣ. ಈ ಪಾತ್ರದಲ್ಲಿ ಯಶ್ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಯಶ್ ಆಕ್ರೋಶ, ರಾವಣನಾಗಿ ತೆರೆಮೇಲೆ ತೋರಿದ ಅಹಂಕಾರ, ಗತ್ತು-ಗಾಂಭಿರ್ಯ ಅದ್ಭುತ ಎನಿಸುತ್ತದೆ. ರಾವಣನಾಗಿ ಯಶ್ ಕೊಡುವ ಎಂಟ್ರಿಗೆ ಥಿಯೇಟರ್‌ಗಳಲ್ಲಿ ಶಿಳ್ಳೆಗಳು ಬೀಳುತ್ತವೆ. ಇಡೀ ಸಿನಿಮಾ ನೋಡಿದಾಗ ಶ್ರೀರಾಮನಿಗಿಂತ ರಾವಣನ ಪಾತ್ರವನ್ನು ವೈಭವೀಕರಿಸಿದ್ದಾರೇನೋ ಎಂಬ ಅನುಭವ ಆಗುತ್ತದೆ. ಇನ್ನು ಹನುಮಂತನಾಗಿ ಸನ್ನಿ ಡಿಯೋಲ್ ತಮ್ಮ ಸಾಹಸ ದೃಶ್ಯಗಳಿಂದ ಗಮನ ಸೆಳೆಯುತ್ತಾರೆ.
ನಿರ್ದೇಶನ ಮತ್ತು ಮೇಕಿಂಗ್
‘ದಂಗಲ್’ ಅಂತಹ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ನಿತೇಶ್ ತಿವಾರಿ ಈ ಮಹಾಕಾವ್ಯವನ್ನು ತೆರೆಮೇಲೆ ತರುವುದಕ್ಕೆ ಶ್ರಮಿಸಿದ್ದಾರೆ. ಮೂಲ ಕಥೆಗೆ ಧಕ್ಕೆ ಬಾರದಂತೆ, ದೈವಿಕ ದೃಶ್ಯಗಳ ಜೊತೆ ಸಾಹಸ ಸನ್ನಿವೇಶಗಳು ಈ ಎರಡನ್ನೂ ಸಮತೋಲನದಲ್ಲಿ ಇಡುವುದಕ್ಕೆ ಯತ್ನಿಸಿದ್ದಾರೆ. ಆದರೆ, ಸಿನಿಮಾ ಫಸ್ಟ್ ಹಾಫ್ ಕುಂಟಿತವಾಗಿ ಸಾಗುತ್ತೆ ಎಂದೆನಿಸುತ್ತೆ. ಆದರೆ, ವಿಎಫ್‌ಎಕ್ಸ್ ಸಿನಿಮಾವನ್ನು ಎತ್ತಿ ಹಿಡಿಯುತ್ತೆ.
ಪ್ಲಸ್ ಪಾಯಿಂಟ್ಸ್
- ರಾವಣನ ಅವತಾರದಲ್ಲಿ ಯಶ್ ಹಾಗೂ ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್ ಇಷ್ಟ ಆಗುತ್ತಾರೆ. ಇಬ್ಬರೂ ಮುಖಾಮುಖಿಯ ದೃಶ್ಯಗಳು ರೊಮಾಂಚನಕಾರಿಯಾಗಿವೆ.
- ಅಯೋಧ್ಯೆ ಹಾಗೂ ಲಂಕೆಯ ವೈಭವವನ್ನು ವಿಎಫ್‌ಎಕ್ಸ್ ಮೂಲಕ ತೋರಿಸಿದ ರೀತಿ ಅದ್ಭುತ.
- ಸೀತೆಯಾಗಿ ಸಾಯಿ ಪಲ್ಲವಿ ಇಷ್ಟ ಆಗುತ್ತಾರೆ.
- ಜಟಾಯು ಜೊತೆಗಿನ ಯುದ್ಧದ ಸನ್ನಿವೇಶ ಅದ್ಭುತವಾಗಿದೆ.
ಮೈನಸ್ ಪಾಯಿಂಟ್ಸ್
- ‘ರಾಮಾಯಣ’ದ ಕಥೆ ಎಲ್ಲರಿಗೂ ಗೊತ್ತಿರುವುದರಿಂದ ಕೆಲವು ಸಂದರ್ಭದಲ್ಲಿ ಸಿನಿಾ ಕುಂಟಿತವಾಗಿದೆ ಅನ್ನೋ ಅನುಭವ ಆಗುತ್ತೆ.
- ಅದ್ದೂರಿ ದೃಶ್ಯಗಳಿಗೆ ನೀಡಿದ ಆದ್ಯತೆ ಪ್ರಮುಖ ಪಾತ್ರಗಳ ಬಾಂಧವ್ಯ ಮತ್ತು ಭಾವನೆಗಳಿಗೆ ನೀಡಿಲ್ಲ.
- ಎ ಆರ್ ರೆಹಮಾನ್ ಸಂಗೀತ ನಿರೀಕ್ಷಿಸಿದಷ್ಟು ಚಮತ್ಕಾರ ಮಾಡಿಲ್ಲ.




