☔ Weather
Bengaluru: ☀️ 23°C | AQI 115
Mysore: ☀️ 21°C | AQI 108
Mangalore: ☀️ 26°C | AQI 162
Bengaluru: ☀️ 23°C | AQI 115
☔ Weather
Bengaluru: ☀️ 23°C | AQI 115
Mysore: ☀️ 21°C | AQI 108
Mangalore: ☀️ 26°C | AQI 162
Bengaluru: ☀️ 23°C | AQI 115

SIDDARAMAIAH: ಕುಮಾರಸ್ವಾಮಿ ಮನೆ ಬಳಿ ಮೊಬೈಲ್ ಬದಲಾವಣೆ..? – ಎಲ್ಲಿಗೆ ಬಂತು ಸ್ಟಿಂಗ್ ತನಿಖೆ

Image of Siddaramaiah with HD Kumaraswamy
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಸ್ಟಿಂಗ್ ಕಾರ್ಯಾಚರಣೆ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ವೇಗಗೊಳಿಸಿದ್ದಾರೆ.

ಮುಖ್ಯಾಂಶಗಳು

  • ಕುಮಾರಸ್ವಾಮಿಗೆ ಸ್ಟಿಂಗ್ ಉರುಳು..?
  • ಸಿಸಿಬಿ ತನಿಖೆ ತಿರುಗುಬಾಣ!
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ಕಾರ್ಯಾಚರಣೆ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಮತ್ತಷ್ಟು ವೇಗಗೊಳಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಸ್ಪಷ್ಟವಾದ ಹಾಗೂ ಪರಸ್ಪರ ಹೊಂದಾಣಿಕೆಯಾಗುವ ಮಾಹಿತಿಯನ್ನು ನೀಡುತ್ತಿಲ್ಲ ಎಂಬ ಕಾರಣಕ್ಕೆ ತನಿಖಾ ತಂಡ ಈಗ ಕೇವಲ ಹೇಳಿಕೆಗಳನ್ನೇ ನಂಬದೆ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಸತ್ಯವನ್ನು ಹೊರತೆಗೆಯುವತ್ತ ಗಮನ ಹರಿಸಿದೆ. ಮೊಬೈಲ್ ಸಂಭಾಷಣೆಗಳು, ಸ್ಥಳದ ದಾಖಲೆಗಳು, ಡಿಜಿಟಲ್ ಕುರುಹುಗಳು ಮತ್ತು ಇತರ ವೈಜ್ಞಾನಿಕ ಸಾಕ್ಷ್ಯಗಳ ಮೂಲಕ ಪ್ರಕರಣದ ಸಂಪೂರ್ಣ ಚಿತ್ರಣವನ್ನು ಕಟ್ಟುವ ಪ್ರಯತ್ನ ನಡೆಯುತ್ತಿದೆ. ಆರೋಪಿತರ ಭಿನ್ನ ಹೇಳಿಕೆಗಳು ..! ಈ ಪ್ರಕರಣದಲ್ಲಿ ಆರೋಪಿ ರಿತೇಶ್ ಪಾಂಡೆ ನೀಡಿರುವ ಹೇಳಿಕೆ ತನಿಖೆಗೆ ಹೊಸ ಆಯಾಮ ನೀಡಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದ ಸಮೀಪದಲ್ಲಿ ಮೊಬೈಲ್ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಆತ ಹೇಳಿದ್ದಾನೆ. ಆದರೆ ಕುಮಾರಸ್ವಾಮಿ ಅವರ ಪಿಆರ್‌ಒ ಪ್ರಜ್ವಲ್ ಪ್ರಸಾದ್ ಅವರು ತನಿಖಾಧಿಕಾರಿಗಳ ಮುಂದೆ ಈ ವಿಡಿಯೋದ ಬಗ್ಗೆ ಅಥವಾ ರಿತೇಶ್ ಪಾಂಡೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಜ್ವಲ್ ಅವರ ಮೊಬೈಲನ್ನು ವಶಕ್ಕೆ ಪಡೆದು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಿದ್ದು, ಅದರಿಂದ ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಜೊತೆಗೆ ರಿತೇಶ್ ದೆಹಲಿಯಲ್ಲಿ ಮೊಬೈಲ್ ಖರೀದಿಸಿದ ಅಂಗಡಿಯ ಸಿಸಿಟಿವಿ ದೃಶ್ಯಾವಳಿ ಮತ್ತು ಬಿಲ್‌ಗಳನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ. ದೆಹಲಿಯಲ್ಲಿರುವ ಕುಮಾರಸ್ವಾಮಿ ಅವರ ನಿವಾಸದ ಸಿಸಿಟಿವಿ ಪರಿಶೀಲನೆ ಮತ್ತು ಸ್ಥಳ ಮಹಜರು ಕುರಿತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದ್ದು, ಯಾವುದೇ ಆತುರದ ಕ್ರಮ ಕೈಗೊಳ್ಳದೆ ಎಚ್ಚರಿಕೆಯಿಂದ ಮುಂದುವರಿಯಲು ತನಿಖಾ ತಂಡ ನಿರ್ಧರಿಸಿದೆ. ಇದನ್ನೂ ಓದಿ : ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಹಿಂದೆ ಹಣದ ಆಮಿಷ, ಸಂತ್ರಸ್ತೆಗೆ 4 ಲಕ್ಷದ ಆಫರ್ ! ಸದ್ಯ ಈ ಪ್ರಕರಣ ಈಗ ಕೇವಲ ಒಂದು ಸ್ಟಿಂಗ್ ವಿಡಿಯೋದ ಸತ್ಯಾಸತ್ಯತೆಯ ಪ್ರಶ್ನೆಯಾಗಿ ಉಳಿದಿಲ್ಲ. ಆರೋಪಿಯ ಹೇಳಿಕೆ ಮತ್ತು ಪಿಆರ್‌ಒ ಅವರ ನಿರಾಕರಣೆ ನಡುವಿನ ವ್ಯತ್ಯಾಸವೇ ತನಿಖೆಯ ಕೇಂದ್ರಬಿಂದುವಾಗಿದೆ. ಮೊಬೈಲ್ ವಿನಿಮಯ ನಡೆದಿದೆ ಎಂಬ ಹೇಳಿಕೆ ನಿಜವಾದರೆ, ಅದರ ಹಿಂದೆ ಯಾರು ಇದ್ದರು, ಯಾವ ಉದ್ದೇಶವಿತ್ತು, ವಿಡಿಯೋ ಹೇಗೆ ಸಿದ್ಧವಾಯಿತು ಎಂಬ ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ. ಒಂದು ವೇಳೆ ಹೇಳಿಕೆ ಸುಳ್ಳಾದರೆ, ಸುಳ್ಳು ಹೇಳಿಕೆಯ ಮೂಲಕ ರಾಜಕೀಯ ಲಾಭ ಪಡೆಯುವ ಪ್ರಯತ್ನ ನಡೆದಿದೆಯೇ ಎಂಬುದೂ ತನಿಖೆಯಾಗಬೇಕಾಗುತ್ತದೆ. ಇನ್ನು ಹಿರಿಯ ರಾಜಕಾರಣಿಗಳ ಹೆಸರುಗಳು ಪ್ರಕರಣದಲ್ಲಿ ತಳಕು ಹಾಕಿಕೊಂಡಿರುವುದರಿಂದ ಪೊಲೀಸರ ಪ್ರತಿ ಹೆಜ್ಜೆಯೂ ರಾಜಕೀಯವಾಗಿ ಸೂಕ್ಷ್ಮವಾಗಿರುತ್ತದೆ. ಆದ್ದರಿಂದಲೇ ತಾಂತ್ರಿಕ ಸಾಕ್ಷ್ಯಗಳೇ ಈ ತನಿಖೆಗೆ ನಿರ್ಣಾಯಕ ಆಧಾರವಾಗಲಿವೆ. ಸಿಸಿಟಿವಿ, ಬಿಲ್, ಎಫ್‌ಎಸ್‌ಎಲ್ ವರದಿ ಮತ್ತು ಸ್ಥಳ ಮಹಜರುಗಳ ಮೂಲಕವೇ ಸತ್ಯ ಹೊರಬರಬೇಕು. ಇಲ್ಲವಾದರೆ ಈ ಪ್ರಕರಣವೂ ಆರೋಪ-ಪ್ರತ್ಯಾರೋಪಗಳ ಸುಳಿಯಲ್ಲೇ ಸಿಲುಕಿ, ಜನರಲ್ಲಿ ತನಿಖಾ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ತರುವ ಅಪಾಯವಿದೆ.