☔ Weather
Bengaluru: ☀️ 23°C | AQI 115
Mysore: ☀️ 21°C | AQI 108
Mangalore: ☀️ 26°C | AQI 162
Bengaluru: ☀️ 23°C | AQI 115
☔ Weather
Bengaluru: ☀️ 23°C | AQI 115
Mysore: ☀️ 21°C | AQI 108
Mangalore: ☀️ 26°C | AQI 162
Bengaluru: ☀️ 23°C | AQI 115

SIDDARAMAIAH: ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಹಿಂದೆ ಹಣದ ಆಮಿಷ, ಸಂತ್ರಸ್ತೆಗೆ 4 ಲಕ್ಷದ ಆಫರ್ !

Image of Siddaramaiah
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ನಡೆಸಲಾದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯಲ್ಲಿ ಗಂಭೀರವಾದ ಮಾಹಿತಿಯೊಂದು ಹೊರಬಿದ್ದಿದೆ

ಮುಖ್ಯಾಂಶಗಳು

  • ಸ್ಟಿಂಗ್ ಕೇಸ್ ನಲ್ಲಿ ಸ್ಫೋಟಕ ಸತ್ಯ
  • ಸಂತ್ರಸ್ತ ಮಹಿಳೆಗೆ ಹಣದ ಆಮಿಷ
  • 4 ಲಕ್ಷ ನೀಡಿ ಸುಳ್ಳು ಹೇಳಿಕೆ !
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ನಡೆಸಲಾದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯಲ್ಲಿ ಗಂಭೀರವಾದ ಮಾಹಿತಿಯೊಂದು ಹೊರಬಿದ್ದಿದೆ. ಖಾಸಗಿ ಸುದ್ದಿವಾಹಿನಿಯ ಮುಖ್ಯಸ್ಥ ಹಾಗೂ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರು ಸಂತ್ರಸ್ತ ಯುವತಿಯ ಮನೆಗೆ ಹಲವು ಬಾರಿ ಹೋಗಿ, ಕಾರ್ಯಾಚರಣೆಗೆ ಸಹಕರಿಸಿದರೆ ನಾಲ್ಕು ಲಕ್ಷ ರೂಪಾಯಿ ಕೊಡುವುದಾಗಿ ಆಮಿಷ ತೋರಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಸಂತ್ರಸ್ತೆಯ ಕುಟುಂಬ ತೀವ್ರ ಬಡತನದಲ್ಲಿದ್ದು, ಆಕೆಯ ತಾಯಿ ಮತ್ತು ಸಹೋದರಿಯರು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಈ ಆರ್ಥಿಕ ಸಂಕಷ್ಟವನ್ನೇ ಬಳಸಿಕೊಳ್ಳಲು 2023ರ ಜನವರಿಯಲ್ಲಿ ಕೇರಳದಲ್ಲಿ ಯುವತಿಯನ್ನು ಸಂಪರ್ಕಿಸಲಾಗಿತ್ತು. ಮೊದಲಿಗೆ ಯುವತಿ ಒಪ್ಪಿರಲಿಲ್ಲ. ಆದರೆ ಜನವರಿ ಮತ್ತು ಫೆಬ್ರವರಿಯಲ್ಲಿ ಐದಾರು ಬಾರಿ ಮನೆಗೆ ಬಂದು ನಿರಂತರವಾಗಿ ಒತ್ತಾಯಿಸಿದಾಗ, ಕುಟುಂಬದ ಪರಿಸ್ಥಿತಿ ಸುಧಾರಣೆಯಾಗಬಹುದು ಎಂಬ ನಿರೀಕ್ಷೆಯಿಂದ ಆಕೆ ಕೊನೆಗೆ ಒಪ್ಪಿಕೊಂಡಿದ್ದರು. ಸಂತ್ರಸ್ತೆಗೂ ಗೊತ್ತಿಲ್ಲದಂತೆ ವಿಡಿಯೋ ಶೂಟ್..! ಈ ಕಾರ್ಯಾಚರಣೆಗೂ ಮೊದಲು ಯುವತಿಗೆ ಮಾತನಾಡಬೇಕಾದ ಪ್ರಶ್ನೋತ್ತರಗಳ ಪಟ್ಟಿಯನ್ನು ನೀಡಲಾಗಿತ್ತು. ಆಕೆ ಅದರಂತೆ ಮಾತನಾಡುತ್ತಿದ್ದಾಗ ತನ್ನ ಮಾತುಗಳು ಧ್ವನಿ ಮತ್ತು ದೃಶ್ಯ ರೂಪದಲ್ಲಿ ದಾಖಲಾಗುತ್ತಿವೆ ಎಂಬುದು ಆಕೆಗೆ ಗೊತ್ತಿರಲಿಲ್ಲ. ವಾಹಿನಿ ಮುಖ್ಯಸ್ಥ ನೀಡಿದ್ದ ಮೊಬೈಲ್ ಮೂಲಕ ಬಾಗೇಪಲ್ಲಿ ಪ್ರಶಾಂತ್ ಕುಮಾರ್ ಎಂಬಾತ ಆ ಸಂಭಾಷಣೆಯನ್ನು ರೆಕಾರ್ಡ್ ಮಾಡಿದ್ದ ಎಂದು ತನಿಖೆಯಲ್ಲಿ ಗೊತ್ತಾಗಿದೆ. 2023ರ ಫೆಬ್ರವರಿ 25ರಂದು ಸುಮಾರು ಎರಡು ಗಂಟೆಗಳ ಕಾಲ ಈ ಸ್ಟಿಂಗ್ ವೀಡಿಯೊವನ್ನು ಚಿತ್ರೀಕರಿಸಲಾಗಿತ್ತು. ಅದರ ಸಂಪೂರ್ಣ ದಾಖಲೆಗಳನ್ನು ವಾಹಿನಿ ಮುಖ್ಯಸ್ಥ ತನ್ನ ಬಳಿಯೇ ಇಟ್ಟುಕೊಂಡಿದ್ದ. ಆದರೆ ಈ ವರ್ಷದ ಆರಂಭದಲ್ಲಿ ಆ ವೀಡಿಯೊ ಖಾಸಗಿ ವ್ಯಕ್ತಿಯೊಬ್ಬನ ಕೈಸೇರಿ, ಅಲ್ಲಿಂದ ರಾಜ್ಯದ ಪ್ರಮುಖ ರಾಜಕಾರಣಿಯೊಬ್ಬರಿಗೆ ತಲುಪಿತ್ತು ಎಂಬ ಮಾಹಿತಿಯೂ ಮೂಲಗಳಿಂದ ಲಭ್ಯವಾಗಿದೆ. ಪ್ರಸ್ತುತ ತನಿಖೆ ಅಂತಿಮ ಹಂತದಲ್ಲಿದ್ದು, ಪೊಲೀಸರು ಡಿಜಿಟಲ್, ವೈಜ್ಞಾನಿಕ ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ವಾಹಿನಿ ಮುಖ್ಯಸ್ಥ, ಕೃಪಾ ಆಳ್ವಾ, ಸಂತ್ರಸ್ತೆ ಹಾಗೂ ಕೇರಳದ ಇಬ್ಬರು ವ್ಯಕ್ತಿಗಳನ್ನು ಈಗಾಗಲೇ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ : ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಸಮುದ್ರಕ್ಕೆ ಹಾಕ್ತಾರೆ – ವಿವಾದ ಎಬ್ಬಿಸಿದ ಛಲವಾದಿ ಈ ಪ್ರಕರಣದಲ್ಲಿ, ಆರೋಪಿಗಳು ಸಂತ್ರಸ್ತ ಮಹಿಳೆಗೆ ತಾವು ಮೊದಲೇ ಸಿದ್ಧಪಡಿಸಿದ ಪ್ರಶ್ನೆಗಳಿಗೆ ಉತ್ತರಿಸುವಂತೆ ಮಾಡಿ, ಅದನ್ನು ಗೊತ್ತಿಲ್ಲದಂತೆ ರೆಕಾರ್ಡ್ ಮಾಡಿರುವುದು ಪತ್ರಿಕೋದ್ಯಮ, ಮತ್ತು ರಾಜಕೀಯದ ನೈತಿಕತೆಗೆ ವಿರುದ್ಧವಾದ ನಡೆಯಾಗಿದ್ದು ಇದೊಂದು ಕೆಟ್ಟ ಸಂಸ್ಕೃತಿಗೆ ನಾಂದಿ ಹಾಡಿದೆ. ಇಂತಹ ಕಾರ್ಯಾಚರಣೆಗಳಿಂದ ನಿಜವಾದ ಸತ್ಯ ಹೊರಬರುವುದಕ್ಕಿಂತ, ರಾಜಕೀಯ ಲಾಭಕ್ಕಾಗಿ ಕಥೆಗಳನ್ನು ಸೃಷ್ಟಿಸಲಾಗುತ್ತಿದೆಯೇ ಎಂಬ ಅನುಮಾನ ಬಲವಾಗುತ್ತದೆ. ವೀಡಿಯೊ ವರ್ಷಗಳ ಕಾಲ ಒಬ್ಬರ ಬಳಿ ಇದ್ದು, ಬಳಿಕ ರಾಜಕಾರಣಿಯ ಕೈಸೇರಿದ ರೀತಿಯೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಸುದ್ದಿಗಾಗಿ ಮಾಡಿದ ಪ್ರಯತ್ನವೋ ಅಥವಾ ಉದ್ದೇಶಪೂರ್ವಕವಾಗಿ ರೂಪಿಸಿದ ರಾಜಕೀಯ ಸಂಚೋ ಎಂಬುದನ್ನು ತನಿಖೆ ಸ್ಪಷ್ಟಪಡಿಸಬೇಕಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವಾಗದಿದ್ದರೆ, ಮುಂದೆಯೂ ಇಂತಹ ಸುಳ್ಳು ಸ್ಟಿಂಗ್‌ಗಳು ಮುಂದುವರಿಯುವ ಅಪಾಯವಿದೆ.