☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

HD KUMARASWAMY: ಸ್ಟಿಂಗ್ ಪ್ರಕರಣ ಕಟ್ಟುಕಥೆ – ಪೊಲೀಸ್ ದಾಖಲೆ ಮುಂದಿಟ್ಟು ಹೆಚ್ .ಡಿ.ಕೆ ತಿರುಗೇಟು

ಸ್ಟಿಂಗ್ ಕೇವಲ ಕಟ್ಟುಕಥೆ ಎಂದು ಪೊಲೀಸ್ ದಾಖಲೆಯಲ್ಲೇ ಇದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.

ಮುಖ್ಯಾಂಶಗಳು

  • ರಾಜ್ಯ ಸರ್ಕಾರಕ್ಕೆ ಹೆಚ್.ಡಿ.ಕೆ ಚಾಟಿ
  • ಪೊಲೀಸರ ಕಾರ್ಯವೈಖರುಗೆ ಕಿಡಿ

ಬೆಂಗಳೂರು: ಸ್ಟಿಂಗ್ ಕೇವಲ ಕಟ್ಟುಕಥೆ ಎಂದು ಪೊಲೀಸ್ ದಾಖಲೆಯಲ್ಲೇ ಇದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದ್ದಾರೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಇದು ಎಚ್‌ಡಿಕೆ ಬುಡಕ್ಕೇ ಬರುತ್ತದೆ ಎಂದು ಹೇಳಿದ್ದಕ್ಕೆ ತಿರುಗೇಟು ನೀಡಿದ ಅವರು, ನಿನ್ನೆ ಕಮಿಷನರ್ ನೀಡಿದ ಹೇಳಿಕೆಯನ್ನು ಪ್ರಶ್ನಿಸಿದರು. ತಮ್ಮ ಮನೆಯಲ್ಲೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದ್ದು, ವಿಡಿಯೋ ಚಿತ್ರೀಕರಿಸಿದ, ವರ್ಗಾಯಿಸಿದ ಮತ್ತು ಸಾಮಾಜಿಕ ಜಾಲತಾಣಗಳಿಗೆ ಹಂಚಿದ ಆರೋಪಿಯ ವಿರುದ್ಧ ತನಿಖೆ ನಡೆಸುವುದಾಗಿ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಅದೇ ದಾಖಲೆಯಲ್ಲಿ ವಿಡಿಯೋದಲ್ಲಿನ ದೃಶ್ಯ ಕಟ್ಟುಕಥೆಯ ಭಾಗವಾಗಿದ್ದು, ನಕಲಿ ವಿಡಿಯೋ ಎಂದು ಹೇಳಲಾಗಿದೆ. ಅದು ನಿಜವೆಂದು ಇದುವರೆಗೂ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದು ಪೊಲೀಸರೇ ಹೇಳಿರುವಾಗ ಈ ತನಿಖೆಯ ನಾಟಕ ಏಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ತನಿಖೆಗಳು ಪ್ರಾಮಾಣಿಕವಾಗಿರಬೇಕು, ಯಾವುದೇ ಹಸ್ತಕ್ಷೇಪ ಇರಬಾರದು ಎಂದು ತನಿಖಾಧಿಕಾರಿಗಳಿಗೆ ಹೇಳಿದ್ದರೂ ಕಾಂಗ್ರೆಸ್ ನಾಯಕರು ತಮ್ಮ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ, ಅವರಿಗೆ ನೋಟಿಸ್ ಕೂಡ ನೀಡಿಲ್ಲ ಎಂದು ಆರೋಪಿಸಿದರು.

ಇದೆಲ್ಲವೂ ಬರೀ ಕಟ್ಟುಕಥೆ..!

ಸ್ಟಿಂಗ್‌ನಲ್ಲಿ ಇದ್ದಾಳೆ ಎನ್ನಲಾದ ಮಹಿಳೆಯ ಮೊಬೈಲ್ ವಶಪಡಿಸಿಕೊಳ್ಳಲಾಗಿದ್ದು, ಆಕೆಗೆ ವಯಸ್ಸಾದ ತಾಯಿ ಇದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಅಂದು ರಾತ್ರಿ ಇನ್ಸ್‌ಪೆಕ್ಟರ್ ಸರ್ಚ್ ವಾರೆಂಟ್ ಬಳಸಿ ಶೋಧ ನಡೆಸುವಾಗ ತಮ್ಮ ಚೈನ್ ಕಳೆದುಹೋಗಿದೆ ಎಂದು ಹೇಳಿಕೆ ನೀಡಿದ್ದಾರೆ. ರಾತ್ರಿ 8 ಗಂಟೆಗೆ ಎಫ್‌ಐಆರ್ ದಾಖಲಾಗಿದ್ದು, ಸಿಕ್ಕಸಿಕ್ಕವರ ಮೇಲೆ ಕಳ್ಳತನದ ಅಪವಾದ ಹೊರಿಸಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ಸಮಜಾಯಿಷಿ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು. ಟ್ರೈಲರ್ ಅಷ್ಟೇ, ಮುಂದೆ ಸಿನಿಮಾ ರಿಲೀಸ್ ಆಗಲಿದೆ ಎಂದಿದ್ದ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಇದೆಲ್ಲವೂ ಬರೀ ಕಟ್ಟುಕಥೆಯಲ್ಲವೇ ಎಂದು ಕೇಳಿದರು. ಹಲವು ಆರೋಪಿಗಳನ್ನು ಮತ್ತೆ ಮತ್ತೆ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಇದು 2011ರ ಘಟನೆ ಎಂದು ಹೇಳಲಾಗಿದ್ದು, 2023ರಲ್ಲಿ ಅಧಿಕೃತವಾಗಿ ಬೆಳಕಿಗೆ ಬಂದಿದೆ. ಹನ್ನೆರಡು ವರ್ಷ ಏಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಇದನ್ನು ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದಾರೆ, ಆದರೆ ಪತ್ರಿಕೆಗಳಲ್ಲಿ ಬಂದಂತೆ ಈಗಾಗಲೇ ಸಿದ್ದರಾಮಯ್ಯನವರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದರು. ಆಪಾದಿತ ಮಹಿಳೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಯೋಗದ ಅಧ್ಯಕ್ಷೆ ಮಾಡಿದ್ದೇ ಸಿದ್ದರಾಮಯ್ಯನವರು. ಕೃಪಾ ಆಳ್ವಾ ಮತ್ತು ರಾಕೇಶ್ ಶೆಟ್ಟಿ ಜೊತೆ ಮತ್ತೊಬ್ಬ ವಯಸ್ಸಾದ ವ್ಯಕ್ತಿ ಆ ದೃಶ್ಯದಲ್ಲಿ ಇದ್ದಾರೆ. ಆ ವ್ಯಕ್ತಿಯನ್ನು ಇದುವರೆಗೂ ಪೊಲೀಸರು ವಿಚಾರಣೆ ನಡೆಸಿದ್ದಾರೆಯೇ, ಕೃಪಾ ಆಳ್ವಾಗೂ ಆ ವ್ಯಕ್ತಿಗೂ ಸಂಬಂಧವೇನು ಎಂದು ಪ್ರಶ್ನಿಸಿದರು. ಇಂದು 30 ಜನ ಸಿಸಿಬಿಯವರು ದಾಳಿ ಮಾಡಿದ್ದಾರೆ ಎಂದು ಹೇಳಿ, ಈಗ ಮಾಡಿ ಏನು ಪ್ರಯೋಜನ, ತಮ್ಮ ಮೇಲೆ ದೌರ್ಜನ್ಯವಾಗಿದೆ ಎಂದು ಮಹಿಳೆ ಆರೋಪಿಸಿದ್ದಾಳೆಯೇ ಎಂದು ಕೇಳಿದರು. ತಮ್ಮ ವಿರುದ್ಧ ಪಿತೂರಿ ನಡೆಸಲಾಗಿದ್ದು, ಬ್ಲಾಕ್‌ಮೇಲ್ ಮಾಡಲು ನಡೆಸಿದ ಪ್ರಕರಣವಿದು ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ ಎಂದರು.

ಇದನ್ನೂ ಓದಿ : ಟ್ರೈಲರ್ ಅಲ್ಲ.. ಸಿನಿಮಾನೇ ತೋರಿಸ್ತಿನಿ – ಪ್ರಿಯಾಂಕ್ ಗೆ ಕುಮಾರಣ್ಣ ಡಿಚ್ಚಿ!

ಈ ಪ್ರಕರಣದಲ್ಲಿ ಪೊಲೀಸ್ ದಾಖಲೆಯನ್ನೇ ಮುಂದಿಟ್ಟು ಕುಮಾರಸ್ವಾಮಿ ಮಾಡಿದ ವಾದ ಸರ್ಕಾರಕ್ಕೆ ದೊಡ್ಡ ಮುಜುಗರ ತಂದಿದೆ. ಒಂದೆಡೆ ವಿಡಿಯೋ ನಕಲಿ ಎಂದು ದಾಖಲೆಯಲ್ಲಿ ಹೇಳಿ, ಮತ್ತೊಂದೆಡೆ ಅದೇ ವಿಡಿಯೋ ಆಧರಿಸಿ ತನಿಖೆ, ದಾಳಿ, ವಿಚಾರಣೆ ನಡೆಸುವುದು ತನಿಖೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ. 2011ರ ಘಟನೆ 2023ರಲ್ಲಿ ಬೆಳಕಿಗೆ ಬಂದು, ಈಗ 2026ರಲ್ಲಿ ಮತ್ತೆ ರಾಜಕೀಯ ಅಸ್ತ್ರವಾಗಿರುವುದು ಇದರ ಹಿಂದೆ ರಾಜಕೀಯ ಲೆಕ್ಕಾಚಾರವಿದೆ ಎಂಬ ಅನುಮಾನಕ್ಕೆ ಪುಷ್ಟಿ ನೀಡುತ್ತದೆ. ಮಹಿಳೆಯ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯ, ಚೈನ್ ಕಳ್ಳತನದ ದೂರು, ಮತ್ತು ದೃಶ್ಯದಲ್ಲಿದ್ದ ಇತರ ವ್ಯಕ್ತಿಗಳ ವಿಚಾರಣೆಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಸರ್ಕಾರದ ನಿಲುವನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ. ಇಂತಹ ಪ್ರಕರಣಗಳಲ್ಲಿ ಸತ್ಯ ಹೊರಬರಬೇಕಾದರೆ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗಿಂತ ಸ್ವತಂತ್ರ ಮತ್ತು ಪಾರದರ್ಶಕ ತನಿಖೆಯೇ ಮುಖ್ಯವಾಗುತ್ತದೆ.