ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈಯಾಗಿರುವ ನಟ ದರ್ಶನ್‌ಗೆ (Darshan Case) ಸಂಬಂಧಿಸಿದಂತೆ ಪ್ರತಿದಿನ ಒಂದಲ್ಲ ಒಂದು ಹೊಸ ಬೆಳವಣಿಗೆಗಳು ನಡೆಯುತ್ತಿವೆ.
ಸದ್ಯ ಜೈಲಿನಲ್ಲಿರುವ ನಟ ದರ್ಶನ್ ಅವರು ತೀವ್ರವಾದ ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಗತ್ಯವಿರುವ ವಿಶೇಷ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕೆಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ದರ್ಶನ್ ಪರ ವಕೀಲರು ಈ ಸಂಬಂಧ ಕೋರ್ಟ್‌ಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದು, ಇಂದು ಇದರ ವಿಚಾರಣೆ ನಡೆಯಲಿದೆ. ಈ ಅರ್ಜಿಯ ಮೇಲೆ ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ತೀವ್ರ ಆಕ್ಷೇಪಣೆ ಸಲ್ಲಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ.
ಬೆನ್ನುನೋವಿನ ಚಿಕಿತ್ಸೆ ಅರ್ಜಿಗೆ ಎಸ್‌ಪಿಪಿ ಸವಾಲು
ನಟ ದರ್ಶನ್ ಪರ ವಕೀಲರು ಸಲ್ಲಿಸಿರುವ ವೈದ್ಯಕೀಯ ಚಿಕಿತ್ಸೆಯ ಅರ್ಜಿಯನ್ನು ಇಂದು ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಬಲವಾಗಿ ವಿರೋಧಿಸಲಿದ್ದಾರೆ. ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಅಗತ್ಯವಿರುವ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ಕೋರ್ಟ್ ಈಗಾಗಲೇ ಸ್ಪಷ್ಟ ಸೂಚನೆ ನೀಡಿತ್ತು.
ಆದರೆ, ಈಗ ಮತ್ತಷ್ಟು ಸೌಲಭ್ಯ ಕೋರಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ಎಸ್‌ಪಿಪಿ ಕಾಲಾವಕಾಶ ಕೋರಿದ್ದರು. ಇಂದು 59ನೇ ಸೆಷನ್ಸ್ ಕೋರ್ಟ್‌ನಲ್ಲಿ ಈ ಅರ್ಜಿಯ ವಿಚಾರಣೆ ನಡೆಯಲಿದ್ದು, ಎಸ್‌ಪಿಪಿ ಕಡೆಯಿಂದ ಪ್ರಬಲ ವಾದ ಹಾಗೂ ಆಕ್ಷೇಪಣೆಗಳು ಸಲ್ಲಿಕೆಯಾಗಲಿವೆ.
ದರ್ಶನ್‌ಗೆ ಜೈಲಿನ ಹೊರಗೆ ಅಥವಾ ವಿಶೇಷ ವೈದ್ಯಕೀಯ ಸೌಲಭ್ಯ ಸಿಗುವುದೇ ಇಲ್ಲವೇ ಎಂಬುದು ಇಂದಿನ ಕೋರ್ಟ್ ವಿಚಾರಣೆಯ ಬಳಿಕ ಸ್ಪಷ್ಟವಾಗಲಿದೆ.
ಇದನ್ನು ಓದಿ: Renukaswamy Case: ಏನ್ ಕೇಳಿದ್ರೂ ಗೊತ್ತಿಲ್ಲ ಎಂದ ಸಾಕ್ಷಿ; ಕೋರ್ಟ್ನಲ್ಲಿ ಇಂದು ಎಸ್ಪಿಪಿ ಖಡಕ್ ಪಾಟೀಸವಾಲು
Darshan Case: 59ನೇ ಸೆಷನ್ಸ್ ಕೋರ್ಟ್‌ನಲ್ಲಿ ನಿರ್ಣಾಯಕ ವಿಚಾರಣೆ
ಇಂದು 59ನೇ ಸೆಷನ್ಸ್ ಕೋರ್ಟ್‌ನಲ್ಲಿ ನಟ ದರ್ಶನ್ ಅವರ ವೈದ್ಯಕೀಯ ಅರ್ಜಿಯ ವಿಚಾರಣೆಯು ಅತ್ಯಂತ ಮಹತ್ವದ ಹಂತ ತಲುಪಿದೆ. ಪ್ರಾಸಿಕ್ಯೂಷನ್ ಕಡೆಯಿಂದ ಸಲ್ಲಿಸಲಿರುವ ಆಕ್ಷೇಪಣೆಗಳ ಮೇರೆಗೆ ನ್ಯಾಯಾಲಯವು ಯಾವ ತೀರ್ಪು ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ದರ್ಶನ್ ಆರೋಗ್ಯ ಪರಿಸ್ಥಿತಿ ಹಾಗೂ ವಕೀಲರ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಧೀಶರು ಅಂತಿಮ ಆದೇಶ ಹೊರಡಿಸುವ ಸಾಧ್ಯತೆಯಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಪರ ಕಾನೂನು ಹೋರಾಟ ಮುಂದುವರಿದಿದ್ದು, ಇಂದಿನ ಕೋರ್ಟ್ ಕಲಾಪದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.




