☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

Renukaswamy Case: ಏನ್ ಕೇಳಿದ್ರೂ ಗೊತ್ತಿಲ್ಲ ಎಂದ ಸಾಕ್ಷಿ; ಕೋರ್ಟ್ನಲ್ಲಿ ಇಂದು ಎಸ್ಪಿಪಿ ಖಡಕ್ ಪಾಟೀಸವಾಲು

Renukaswamy Case: Puneeth Turns Hostile Witness SPP Cross Examination Darshan Medical Plea
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿ ಪುನೀತ್ ಪ್ರತಿಕೂಲ ಹೇಳಿಕೆ ಹಿನ್ನೆಲೆಯಲ್ಲಿ ಇಂದು ಎಸ್ಪಿಪಿ ಕ್ರಾಸ್ ಎಕ್ಸಾಮಿನೇಷನ್ ನಡೆಸಲಿದ್ದು, ದರ್ಶನ್ ವೈದ್ಯಕೀಯ ಅರ್ಜಿಯ ವಿಚಾರಣೆಯೂ ನಡೆಯಲಿದೆ.

ಮುಖ್ಯಾಂಶಗಳು

  • ಏನ್ ಕೇಳಿದ್ರೂ ಗೊತ್ತಿಲ್ಲ ಎಂದ ಸಾಕ್ಷಿ ಪುನೀತ್.
  • ಎಸ್‌ಪಿಪಿ ಪ್ರಸನ್ನ ಕುಮಾರ್ ಖಡಕ್ ಪಾಟೀಸವಾಲು.
  • ದರ್ಶನ್ ವೈದ್ಯಕೀಯ ಅರ್ಜಿಗೆ ಪ್ರಾಸಿಕ್ಯೂಷನ್ ಆಕ್ಷೇಪಣೆ.

ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಯಲ್ಲಿ ಪ್ರತಿದಿನವೂ ಹೊಸ ತಿರುವುಗಳು ಸಿಗುತ್ತಿವೆ. ಪ್ರಕರಣದ ಪ್ರಮುಖ ಪ್ರತ್ಯಕ್ಷ ಸಾಕ್ಷಿ (Eye Witness) ಪುನೀತ್ ನೀಡುತ್ತಿರುವ ಹೇಳಿಕೆಗಳು ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿವೆ.

ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಕೇಳಿದ ಪ್ರತಿಯೊಂದು ಪ್ರಶ್ನೆಗೂ “ಗೊತ್ತಿಲ್ಲ, ನೋಡಿಲ್ಲ, ಜ್ಞಾಪಕಕ್ಕೆ ಬರುತ್ತಿಲ್ಲ” ಎಂದು ಪುನೀತ್ ಉತ್ತರಿಸುತ್ತಿದ್ದಾನೆ. ನಟ ದರ್ಶನ್ ಅವರನ್ನು ಕಾಪಾಡಲು ಈ ರೀತಿ ಮಾಡುತ್ತಿದ್ದಾನಾ ಎಂಬ ಅನುಮಾನ ಹುಟ್ಟುಹಾಕಿದ್ದು, ಇಂದು ಕೋರ್ಟ್‌ನಲ್ಲಿ ಮಹತ್ವದ ಪ್ರಕ್ರಿಯೆ ನಡೆಯಲಿದೆ.

ಇಂದು 59ನೇ ಸೆಷನ್ಸ್ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ಮುಂದುವರಿಯಲಿದೆ. ಸಾಕ್ಷಿ ಪುನೀತ್ ಅವರ ಪ್ರತಿಕೂಲ ಹೇಳಿಕೆಗಳ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಬಿಗಿ ಪಾಟೀಸವಾಲು ನಡೆಸಲು ಸಿದ್ಧರಾಗಿದ್ದಾರೆ.

ಪ್ರತಿಕೂಲ ಸಾಕ್ಷಿಯಾಗ್ತಾನಾ ಪುನೀತ್?

ಪ್ರಾಸಿಕ್ಯೂಷನ್ ಕೇಳಿದ ಪ್ರಮುಖ ಪ್ರಶ್ನೆಗಳಿಗೆ ಪುನೀತ್ ಅಸ್ಪಷ್ಟ ಮತ್ತು ನಿರ್ಲಕ್ಷ್ಯದ ಉತ್ತರಗಳನ್ನು ನೀಡಿದ್ದಾನೆ. ಹೀಗಾಗಿ ಆತನನ್ನು ‘ಹಾಸ್ಟೈಲ್ ವಿಟ್ನೆಸ್’ (ಪ್ರತಿಕೂಲ ಸಾಕ್ಷಿ) ಎಂದು ಪರಿಗಣಿಸುವಂತೆ ಎಸ್‌ಪಿಪಿ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ತನಿಖಾ ಹಂತದಲ್ಲಿ ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ 164 ಅಡಿ ಪುನೀತ್ ನೀಡಿದ್ದ ಮೂಲ ಹೇಳಿಕೆಯ ದಾಖಲೆಗಳನ್ನು ತರಿಸಿಕೊಂಡು ವಿಚಾರಣೆ ನಡೆಸಲಾಗುತ್ತದೆ. 164 ಹೇಳಿಕೆಯನ್ನು ಮುಂದಿಟ್ಟು ಎಸ್‌ಪಿಪಿ ಪ್ರಸನ್ನ ಕುಮಾರ್ ಕಠಿಣ ಪ್ರಶ್ನೆಗಳನ್ನು ಕೇಳಲಿದ್ದಾರೆ.

ಹಿಂದೆ ನೀಡಿದ್ದ ಹೇಳಿಕೆಗೆ ವಿರುದ್ಧವಾಗಿ ಈಗ ಮಾತನಾಡುತ್ತಿರುವ ಸಾಕ್ಷಿಗೆ ಎಸ್‌ಪಿಪಿ ಪ್ರಸನ್ನ ಕುಮಾರ್ ಖಡಕ್ ಕ್ರಾಸ್ ಎಕ್ಸಾಮಿನೇಷನ್ ನಡೆಸಲಿದ್ದಾರೆ. ಪುನೀತ್ ಉತ್ತರಿಸುವ ರೀತಿ ಇಂದಿನ ಕೋರ್ಟ್ ವಿಚಾರಣೆಯಲ್ಲಿ ಅತ್ಯಂತ ನಿರ್ಣಾಯಕವಾಗಲಿದೆ.

ಇದನ್ನು ಓದಿ: Renuka Swamy Case: ಪ್ರದೋಶ್ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್

Renukaswamy Case: ದರ್ಶನ್ ಬೆನ್ನುನೋವು ಮತ್ತು ವೈದ್ಯಕೀಯ ಅರ್ಜಿ

ಇನ್ನೊಂದೆಡೆ ನಟ ದರ್ಶನ್ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಅವರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕೆಂದು ಕೋರಿ ಅವರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಗೆ ಸಂಬಂಧಿಸಿದಂತೆ ಇಂದು ಪ್ರಾಸಿಕ್ಯೂಷನ್ ಪರವಾಗಿ ಎಸ್‌ಪಿಪಿ ಆಕ್ಷೇಪಣೆ ಸಲ್ಲಿಸಲಿದ್ದಾರೆ. ಬೆನ್ನುನೋವಿನ ಚಿಕಿತ್ಸೆ ಕೋರಿ ಸಲ್ಲಿಕೆಯಾದ ಅರ್ಜಿಯ ಕುರಿತು ಪ್ರಾಸಿಕ್ಯೂಷನ್ ತಮ್ಮ ವಾದ ಮಂಡಿಸಲಿದೆ.

ಸದ್ಯಕ್ಕೆ ಅಗತ್ಯವಿರುವ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ಕೋರ್ಟ್ ಈಗಾಗಲೇ ಸೂಚನೆ ನೀಡಿದೆ. ಇಂದು ದರ್ಶನ್ ವೈದ್ಯಕೀಯ ಅರ್ಜಿಯನ್ನು ಸಹ 59ನೇ ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸಲಿದೆ.