ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ‘ಟಾಕ್ಸಿಕ್’ ಚಿತ್ರದ ಯಶಸ್ಸಿಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ತಮ್ಮದೇ ಶೈಲಿಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಯೋಗರಾಜ್ ಭಟ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪುಟ್ಟ ಪದ್ಯದ ರೀತಿಯಲ್ಲಿ ಸಾಲುಗಳನ್ನು ಬರೆದುಕೊಂಡು ತಮ್ಮ ಶುಭಾಶಯ ತಿಳಿಸಿದ್ದಾರೆ. ಅವರ ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. “ನಾಡಿಗೆ ನಮಸ್ತೆ, ಜೈ ಟಾಕ್ಸಿಕ್, ಜೈ ಚಿತ್ರತಂಡ, ಜೈ ಗೀತು ಮೋಹನ್‌ದಾಸ್, ಜೈ ಕೆವಿಎನ್, ಜೈ ಜನತೆ, ಜೈ ಸಿನಿಮಾ & ಜೈ ರಾಕಿಂಗ್ ಸ್ಟಾರ್ ಯಶ್” ಎಂದು ಭಟ್ರು ಬರೆದುಕೊಂಡಿದ್ದಾರೆ.
ಇದನ್ನು ಓದಿ: https://cultkannada.com/yogaraj-bhat-wishes-rocking-star-yash-starrer-toxic-movie-success/




