Toxic Live News Archive

ಹಿಂದಿ ಹಾಗೂ ಕನ್ನಡ ವರ್ಷನ್‌ನಲ್ಲೇ ಭರ್ಜರಿ ಗಳಿಕೆ

ಐದನೇ ದಿನದ ಗಳಿಕೆಯಲ್ಲಿ ಹಿಂದಿ ವರ್ಷನ್ ₹14.50 ಕೋಟಿ ನೆಟ್ ಕಲೆಕ್ಷನ್ ಮಾಡಿ ಗರಿಷ್ಠ ಕೊಡುಗೆ ನೀಡಿದ್ದರೆ, ಮೂಲ ಕನ್ನಡ ವರ್ಷನ್ ₹6.40 ಕೋಟಿ ಗಳಿಸಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ವಿಶ್ವಾದ್ಯಂತ ₹285 ಕೋಟಿ ಗಡಿ ದಾಟಿದ ‘ಟಾಕ್ಸಿಕ್’

ಭಾರತದಲ್ಲಿ ₹255.95 ಕೋಟಿ ಗ್ರಾಸ್ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ₹29.25 ಕೋಟಿ ಬಾಚಿಕೊಂಡಿರುವ ‘ಟಾಕ್ಸಿಕ್’, 5 ದಿನಗಳಲ್ಲಿ ವಿಶ್ವಾದ್ಯಂತ ಒಟ್ಟು ₹285.20 ಕೋಟಿ ಗಳಿಸಿ ಭಾರಿ ಸದ್ದು ಮಾಡುತ್ತಿದೆ.

‘ಟಾಕ್ಸಿಕ್’ 5 ನೇ ದಿನದ ಕಲೆಕ್ಷನ್: ಭಾರತದಲ್ಲಿ ₹200 ಕೋಟಿ ಕ್ಲಬ್‌ಗೆ ಎಂಟ್ರಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ 5 ನೇ ದಿನ (ಭಾನುವಾರ) ಭಾರತದಲ್ಲಿ ₹23 ಕೋಟಿ ನೆಟ್ ಗಳಿಸಿದ್ದು, ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನಿವ್ವಳ ಗಳಿಕೆ ಬರೋಬ್ಬರಿ ₹214.10 ಕೋಟಿಗೆ ತಲುಪಿದೆ.

ಕನ್ನಡ ಆವೃತ್ತಿಯಲ್ಲಿ ಭರ್ಜರಿ ಆಕ್ಯುಪೆನ್ಸಿ

ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಚಿತ್ರಕ್ಕೆ ಮೂಲ ಕನ್ನಡ ಆವೃತ್ತಿಯಲ್ಲೇ ಗರಿಷ್ಠ ಅಂದರೆ ಶೇಕಡ 47.23 ರಷ್ಟು ಆಕ್ಯುಪೆನ್ಸಿ ದಾಖಲಾಗಿದ್ದು, ಅದರಲ್ಲೂ ನೈಟ್ ಶೋಗಳಿಗೆ ಭಾರಿ ಜನಸ್ತೋಮ ಹರಿದುಬಂದಿದೆ.

ಭಾರತದಲ್ಲಿ ₹200 ಕೋಟಿ ಸಮೀಪಿಸಿದ ‘ಟಾಕ್ಸಿಕ್’

ನಾಲ್ಕು ದಿನಗಳ ಅಂತ್ಯಕ್ಕೆ ‘ಟಾಕ್ಸಿಕ್’ ಚಿತ್ರ ಭಾರತದಲ್ಲಿ ಒಟ್ಟು ₹190.45 ಕೋಟಿ ನೆಟ್ (₹227.50 ಕೋಟಿ ಗ್ರಾಸ್) ಗಳಿಸಿದ್ದು, ಶನಿವಾರ ದೇಶಾದ್ಯಂತ ಒಟ್ಟು 17,612 ಪ್ರದರ್ಶನಗಳನ್ನು ಕಂಡಿದೆ.

‘ಟಾಕ್ಸಿಕ್’ 4 ನೇ ದಿನದ ಕಲೆಕ್ಷನ್ ಎಷ್ಟು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ 4 ನೇ ದಿನ (ಶನಿವಾರ) ಭಾರತದಲ್ಲಿ ₹24.50 ಕೋಟಿ ನೆಟ್ ಗಳಿಸಿದ್ದು, ವಿಶ್ವದಾದ್ಯಂತ ಒಟ್ಟು ಕಲೆಕ್ಷನ್ ಬರೋಬ್ಬರಿ ₹254.75 ಕೋಟಿ ಗಡಿ ದಾಟಿದೆ.

ನೆಗೆಟಿವಿಟಿ ನಡುವೆಯೂ ₹200 ಕೋಟಿ ಕ್ಲಬ್ ಸೇರಿದ ‘ಟಾಕ್ಸಿಕ್’

ಟ್ರೋಲ್‌ಗಳ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸುತ್ತಿರುವ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾದ ಕೇವಲ 3 ದಿನಗಳಲ್ಲೇ ಜಾಗತಿಕವಾಗಿ ಬರೋಬ್ಬರಿ ₹221 ಕೋಟಿಗೂ ಅಧಿಕ ಗಳಿಕೆ ಕಂಡು ₹200 ಕೋಟಿ ಕ್ಲಬ್ ಸೇರಿದೆ.

‘ಟಾಕ್ಸಿಕ್’ ಬೆನ್ನಿಗೆ ನಿಂತ ಸ್ಯಾಂಡಲ್‌ವುಡ್ ದಿಗ್ಗಜರು

ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ, ಸ್ಯಾಂಡಲ್‌ವುಡ್ ದಿಗ್ಗಜರಾದ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವರಾಜ್‌ಕುಮಾರ್ ಅವರು ‘ಟಾಕ್ಸಿಕ್’ ವಿಶ್ಯುವಲ್ ಮೇಕಿಂಗ್ ಹಾಗೂ ಯಶ್ ಅವರ ಸಾಹಸಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.

ಇನ್‌ಸ್ಟಾಗ್ರಾಮ್ ಪ್ರೊಫೈಲ್ ಬಯೋ ಮೂಲಕ ಟ್ರೋಲರ್‌ಗಳಿಗೆ ಟಾಂಗ್

‘ಟಾಕ್ಸಿಕ್’ ಸಿನಿಮಾಗೆ ನೆಗೆಟಿವ್ ಕಾಮೆಂಟ್‌ಗಳು ಬರುತ್ತಿದ್ದಂತೆ, ಯಶ್ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಬರೆದುಕೊಂಡಿರುವ “ನೀವು ನೀವಾಗಿಯೇ ಇರಿ, ಏಕೆಂದರೆ ನಕಲಿಗಿಂತ ಅಸಲಿಗೆ ಬೆಲೆ ಜಾಸ್ತಿ” ಎಂಬ ಸಾಲುಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳು ಸೂಕ್ತ

‘ಟಾಕ್ಸಿಕ್’ ಸಿನಿಮಾ ಬಗ್ಗೆ ಮುಂಬೈನಲ್ಲಿ ಶಿವಣ್ಣ ಹೇಳಿದ್ದೇನು?

‘ಒರಿಜಿನಲ್ ಮಾನ್ಸ್ಟರ್’ ಮೋಷನ್ ಪೋಸ್ಟರ್ ಲಾಂಚ್‌ಗಾಗಿ ಮುಂಬೈಗೆ ತೆರಳಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ಮಾಧ್ಯಮದವರು ‘ಟಾಕ್ಸಿಕ್’ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಶಿವಣ್ಣ, “ಚಿತ್ರದಲ್ಲಿ ಏನೋ ಹೊಸ ವಿಚಾರ ಹೇಳಲು ಪ್ರಯತ್ನಿಸಿದ್ದು ಹಲವರಿಗೆ ಇಷ್ಟವಾಗಿದೆ.